Advertisement

ವೀರ ಸನ್ಯಾಸಿ ವಿವೇಕಾನಂದ ಜಯಂತ್ಯುತ್ಸವ

12:24 PM Jan 13, 2018 | |

ಬೀದರ: ಅಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನವನ್ನು ನಗರದ ವಿವಿಧೆಡೆ ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. 

Advertisement

ಸಿದ್ಧಿವಿನಾಯಕ ಕಾಲೇಜು: ನಗರದ ಓಂ ಸಿದ್ಧಿವಿನಾಯಕ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಜಿಲ್ಲೆಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿವೇಕಾನಂದರ ಜಯಂತಿ ನಿಮಿತ್ತ “ರಾಷ್ಟ್ರೀಯ ಯುವ ದಿನ ಹಾಗೂ ಸಪ್ತಾಹ’ ಆಚರಿಸಲಾಯಿತು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಶಿವಯ್ಯ ಸ್ವಾಮಿ ಮಾತನಾಡಿ, ಯುವಕರು ಸ್ವಾವಲಂಬಿಗಳಾಗಿರಲು ಮಹಾತ್ಮರ ಆದರ್ಶ ಹಾಗೂ ಅನುಸರಣೆ ಮಾಡಿ, ಸುಸಂಸ್ಕೃತ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ವಿರೂಪಾಕ್ಷ ಗಾದಗಿ ಮಾತನಾಡಿದರು. ಶ್ರೀ ಚಂದ್ರಶೇಖರ ಶಿವಾಚಾರ್ಯರು, ಶ್ರೀ ಗಂಗಾಧರ ಶಿವಾಚಾರ್ಯರು, ಯುವ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ಬಿರಾದಾರ, ರಾಜಕುಮಾರ ಪಸಾರೆ, ಮಹೇಶ ಗೋರನಾಳಕರ್‌, ಸುನಿಲ ಬಾವಿಕಟ್ಟಿ
ಇದ್ದರು. ಪ್ರಾಚಾರ್ಯ ಸಿದ್ರಾಮ ಬಿಚಕುಂದೆ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ಶ್ರಾವಂತಿ ನಿರೂಪಿಸಿದರು. ನಿತೇಶಕುಮಾರ ಬಿರಾದಾರ ವಂದಿಸಿದರು.

ಜನಸೇವಾ ಪ್ರತಿಷ್ಠಾನ ಶಾಲೆ: ನಗದ ಜನಸೇವಾ ಪ್ರತಿಷ್ಠಾನ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ವಿಶ್ವಕ್ಕೆ ಭಾರತದ ಭವ್ಯ ಇತಿಹಾಸ, ಪರಂಪರೆ ತಿಳಿಸಿದವರು ವಿವೇಕಾನಂದರು ಎಂದು ವಿವರಿಸಿದರು. ಮುಖ್ಯಗುರು ಚಂದ್ರಶೇಖರ ಗೋಗಿಕರ್‌ ಸ್ವಾಗತಿಸಿದರು. ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 ಬಿವ್ಹಿಬಿ ಕಾಲೇಜು: ನಗರದ ಬಿವ್ಹಿಬಿ ಕಾಲೇಜಿನಲ್ಲಿ ಎನ್ನೆಸ್ಸೆಸ್‌ ಘಟಕದಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ| ಶಿವಕುಮಾರ ಉಪ್ಪೆ ಮಾತನಾಡಿ, ಹಿಂದುತ್ವ ಕುರಿತು ಜಗತ್ತಿಗೆ ಪರಿಚಯಿಸದ ಸ್ವಾಮಿ ವಿವೇಕಾನಂದರ ತತ್ವ ಹಾಗೂ ಅವರ ವಾಣಿ ವಿಶ್ವವಿಖ್ಯಾತವಾಗಿವೆ ಎಂದು ಬಣ್ಣಿಸಿದರು.

Advertisement

ಪ್ರಾಂಶುಪಾಲ ಪ್ರೊ| ಸಿದ್ರಾಮಪ್ಪಾ ಮಾಸಿಮಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಯಾಂಪಸ್‌ ಕೋ-ಆರ್ಡಿನೇಟರ್‌ ಪ್ರೋ ಎಂ. ಬಸವರಾಜ ಮಾತನಾಡಿದರು. ಎನ್ನೆಸ್ಸೆಸ್‌ ಅಧಿಕಾರಿ ಡಾ| ದೀಪಾ ರಾಗ, ವಿದ್ಯಾರ್ಥಿ ಕಲ್ಯಾಣಾಧಿ ಕಾರಿ ಡಾ| ಮಲ್ಲಿಕಾರ್ಜುನ ಕೋಟೆ ಇದ್ದರು. ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಡಾ| ಅಂಬೇಡ್ಕರ ಕಾಲೇಜು: ನಗರದ ಡಾ| ಅಂಬೇಡ್ಕರ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ಸಪ್ತಾಹ ಆಚರಿಸಲಾಯಿತು. ಪ್ರಾಚಾರ್ಯ ಬಿ.ಬಿ. ಪೊಲೀಸ್‌ಪಾಟೀಲ
ಮಾತನಾಡಿ, ಸದೃಢ ದೇಹ, ಸ್ವತ್ಛ ಮನಸ್ಸಿದ್ದಲ್ಲಿ ಆರೋಗ್ಯವಂತರಾಗಿ ಬದುಕಬಹುದು ಎಂದರು. ಉಪನ್ಯಾಸಕ ಸೈಯದ ಖಲೀಲ್‌ ಮಾತನಾಡಿದರು. ಉಪನ್ಯಾಸಕ ಡಾ. ಅಬ್ದುಲ ಖಲೀಲ ಪ್ರಾಸ್ತಾವಿಕ ಮಾತನಾಡಿದರು. ಎನ್ನೆಸ್ಸೆಸ್‌ ಅಧಿಕಾರಿ ಈರಣ್ಣ ಲೋಣಿ ನಿರೂಪಿಸಿದರು.

ಸಿದ್ಧಾರ್ಥ ಕಾಲೇಜು: ನಗರದ ಸಿದ್ಧಾರ್ಥ ಪದವಿ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಜನ್ಮ ದಿನ ಆಚರಿಸಲಾಯಿತು. ಪ್ರಾಧ್ಯಾಪಕ ನರಸಿಂಗ್‌ ಆರ್ಯ ಮಾತನಾಡಿ, ಯುವ ಪಿಳಿಗೆಗೆ ವಿವೇಕಾನಂದರ ತತ್ವ ಸಂದೇಶಗಳು ಮಾದರಿಯಾಗಿವೆ ಎಂದರು. ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎನ್ನೆಸ್ಸೆಸ್‌ ಸಂಯೋಜನಾಧಿಕಾರಿ ಬಸವರಾಜ ಸ್ವಾಮಿ ಸ್ವಾಗಸಿದರೆ ಪ್ರೊ| ಮಾಣಿಕರಾವ್‌ ಭಾಲ್ಕೆ ನಿರೂಪಿಸಿದರು. ಮಹಾನಂದಾ ವಂದಿಸಿದರು.

ಮಡಿವಾಳೇಶ್ವರ ಶಾಲೆ: ನಗರದ ಶ್ರೀ ಮಡಿವಾಳೇಶ್ವರ ಶಿಶುಮಂದಿರ, ಶಾಲೆಯಲ್ಲಿ ವಿವೇಕಾನಂದರ ಜನ್ಮ ದಿನ
ಆಚರಿಸಲಾಯಿತು. ಸಹಶಿಕ್ಷಕ ದಿಲೀಪಕುಮಾರ ಚಂಡೆಸುರೆ ಮತ್ತು ಸೀತಾರಾಮ ರಾಠೊಡ ಮಾತನಾಡಿ, ವಿವೇಕಾನಂದರು ಹಿಂದೂ ಧರ್ಮ, ದೇಶ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ನಿರ್ದೇಶಕ ಶಿವರಾಜ ಹಲಶೆಟ್ಟಿ ಮಾತನಾಡಿದರು. ಮುಖ್ಯಗುರುಗಳಾದ
ಶರಣು ಪಾಟೀಲ, ಅರ್ಚನಾ ಶಿರಗಿರೆ ಮತ್ತು ಸಿಬ್ಬಂದಿ ಇದ್ದರು.

ಭಾಲ್ಕಿ: ಸ್ವಾಮಿ ವಿವೇಕಾನಂದರ 155ನೇ ಜಯಂತಿ ಮಹೋತ್ಸವ ನಿಮಿತ್ಯ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ವತಿಯಿಂದ ಶುಕ್ರವಾರ ಮೆರವಣಿಗೆ ಜರುಗಿತು.

ಪಟ್ಟಣದ ವಿವಿಧ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ವಾಮಿ ವಿವೇಕಾನಂದ ಭಾವಚಿತ್ರದ ಮೆರವಣಿಗೆ ನಡೆಸಿ
ಚನ್ನಬಸವಾಶ್ರಮದಲ್ಲಿ ಸಮಾವೇಶಗೊಂಡು ವಿವೇಕಾನಂದರ ಚಿಂತನೆಯಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು.

ಸುಧಾಕರ ದೇಶಪಾಂಡೆ, ಎಬಿವಿಪಿ ಕಲಬುರ್ಗಿ ವಿಭಾಗ ಸಂಚಾಲಕ ರೇವಣಸಿದ್ದ ಜಾಡರ, ಈಶ್ವರ ರುಮ್ಮಾ, ವಿಜಯಕುಮಾರ ಭುಸಗುಂಡೆ, ಪವನ, ದಿಶಾ, ವಿಶಾಲ ಘಾಳೆ, ಆಕಾಶ ಮಣಿಗೆರೆ, ಶಿವಕುಮಾರ ಬಿರಾದರ, ಧರ್ಮೆಶ್‌ ಬೆಲೂರೆ, ಕಿರಣ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next