Advertisement
ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ದುಡಿದು ಕಮಲಶಿಲೆ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದ ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ ಶೆಟ್ಟಿ, ಭಜನ ಕ್ಷೇತ್ರದಲ್ಲಿ ಅಗ್ರಮಾನ್ಯರೆನಿಸಿಕೊಂಡ ಹಾಗೂ ಹೊಸ ತಲೆಮಾರಿಗೆ ಸ್ಫೂರ್ತಿಯಾದ ವರ್ತಕ ಉಪ್ಪರಿಗೆ ಮನೆ ಶಂಕರ ಶೆಟ್ಟಿ, ಹೆಂಗ ವಳ್ಳಿ ಬಾಲಕೃಷ್ಣ ಶೆಟ್ಟಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಮೇರು ಭಾಗವತರಾಗಿ ಮೆರೆದ ಹೊಸಂಗಡಿ ರವೀಂದ್ರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಉಪನ್ಯಾಸಕ ಮರಾತೂರು ಶಾಂತಾ ರಾಮ ಶೆಟ್ಟಿ ಅವರು ಶುಭಾಸಂಶನೆ ಗೈದರು. ಉದ್ಯಮಿ ಬೆದ್ರಾಡಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಸಂಘಟಕ ಗೋಪಾಲಕೃಷ್ಣ ಆಚಾರ್ಯ, ಸುಪ್ರೀತಾ ಆಚಾರ್ಯ, ಲೋಕೇಶ್ ಸಮ್ಮಾನಿತರ ಪಟ್ಟಿ ವಾಚಿಸಿದರು. ಅಂಚೆ ಇಲಾಖೆಯ ಮಂಜುನಾಥ ಬೆದ್ರಾಡಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪಿ.ಟಿ. ಪ್ರಕಾಶ್ ಶೆಟ್ಟಿ ಬೆಳಗೊಡು ಕಾರ್ಯಕ್ರಮ ನಿರೂಪಿಸಿದರು.