Advertisement
ಆರೋಗ್ಯ ವರ್ಧಕಈಗಾಗಲೇ ಕೇಂದ್ರ ಸರಕಾರದ ಆಯುಷ್ ಇಲಾಖೆ ಅಂಗೀಕೃತ ಆಯುಷ್ ಕ್ವಾಥಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಅದರಲ್ಲಿ ಬಳಸಲಾಗುವ ತುಳಸಿ, ದಾಲ್ಚಿನಿ, ಶುಂಠಿ, ಕರಿ ಮೆಣಸು ದೇಹದಲ್ಲಿ ರೋಗ ನಿರೋಧ ಕಶಕ್ತಿಯನ್ನು ಹೆಚ್ಚಿಸಿ ಕೊರೊನಾದಿಂದ ಪಾರಾಗಿರುವ ಅನುಭವವನ್ನು ನಾಗರಿಕರು ಒಪ್ಪಿಕೊಂಡಿದ್ದಾರೆ. ಈಗ ಆಯುರ್ ಚಿಕ್ಕಿಗಳ ತಯಾರಿಕೆಯಲ್ಲಿ ವಿಶೇಷವಾಗಿ ಆಯುಷ್ ಕ್ವಾಥ ಬಳಕೆಯಾಗುತ್ತಿದೆ. ಆದ್ದರಿಂದ ಇದು ಸಾಮಾನ್ಯ ಚಿಕ್ಕಿಯಾಗಿರದೇ ಆರೋಗ್ಯ ವೃದ್ಧಿಸುವ ರುಚಿಯಾದ ತಿಂಡಿಯೂ ಆಗಲಿದೆ. ಮಕ್ಕಳಿಗೆ, ಹಿರಿಯರಿಗೆ ಆಯುಷ್ ಚಿಕ್ಕಿ ನೀಡುವುದರಿಂದ ನಿಸ್ಸಂದೇಹವಾಗಿ ಇದು ಅವರ ದೇಹಕ್ಕೆ ಉಪಯೋಗವಾಗುತ್ತದೆ.
ಶೇಂಗಾ, ಬೆಲ್ಲದ ಸಮ್ಮಿಲನ ರಕ್ತಹೀನತೆ ಅಥವಾ ಅನೀಮಿಯಾ ರೋಗದಿಂದ ಆಗುವ ನಿಶ್ಯಕ್ತಿಯನ್ನು ನೀಗಿಸಿ, ಹಿಮೋಗ್ಲೋಬಿನ್ ಹೆಚ್ಚಿಸುವ ಕಬ್ಬಿಣ ಮತ್ತು ಪೋಲೇಟ್ ಅಂಶ
ವನ್ನು ಒಳಗೊಂಡಿದ್ದು, ದೇಹಕ್ಕೆ ಮುಖ್ಯವಾಗಿ ಬೇಕಾಗಿರುವ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಸರಿಯಾದ ಪ್ರಮಾಣ
ದಲ್ಲಿ ಇರಿಸುತ್ತದೆ. ನಾವು ರಕ್ತಹೀನತೆಯಿಂದ ಬಳಲುವುದನ್ನು ತಪ್ಪಿಸುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ. ಮೂಳೆಗಳ ಗಟ್ಟಿತನಕ್ಕೂ ಇದು ಸಹಕಾರಿ. ಆಯುಸ್ಸು ವೃದ್ಧಿ, ತಾರುಣ್ಯ ಕಾಪಾಡಲು ಸಹಾಯ ಮಾಡುತ್ತದೆ. ಬಾಯಿರುಚಿಗಾಗಿ ಆರೋಗ್ಯ ಕೆಡಿಸುವ ಯಾವುದೋ ಆಹಾರದ ಬದಲು ದೇಹಕ್ಕೆ ಉಪಯೋಗಕರ ಮತ್ತು ಬಾಯಿಗೂ ರುಚಿಯಿರುವ ಸತ್ವಭರಿತ ಆಯುಷ್ ಚಿಕ್ಕಿಯನ್ನು ಸೇವಿಸುವುದು ಬಹಳ ಉತ್ತಮ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.