ಮುಂಬಯಿ: ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ಬಳಿಕ ಚರ್ಚೆಯಲ್ಲಿರುವ ವಿವೇಕ್ ಅಗ್ನಿಹೋತ್ರಿ ಅವರ ʼದಿ ವ್ಯಾಕ್ಸಿನ್ ವಾರ್ʼ ಇತ್ತೀಚೆಗೆ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಅವರು ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ತನ್ನ ವಿಚಾರಧಾರೆ ಹಾಗೂ ಬರವಣಿಗೆ ಮೂಲಕ ದೇಶ – ವಿದೇಶದ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಆಧಾರಿತ ಕಥೆಯೊಂದನ್ನು ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾ ರೂಪಕ್ಕೆ ತರಲಿದ್ದಾರೆ. ಮಹಾಭಾರತ ಕಥೆಯನ್ನೊಳಗೊಂಡ ʼಪರ್ವʼ ಕಾದಂಬರಿ ಸ್ಟೋರಿಯನ್ನು ಬಿಗ್ ಸ್ಕ್ರೀನ್ ಮೇಲೆ ಅಗ್ನಿಹೋತ್ರಿ ತರಲು ರೆಡಿಯಾಗಿದ್ದಾರೆ.
ʼಪರ್ವʼ ಮಹಾಭಾರತದ ಕಥೆಯನ್ನೊಳಗೊಂಡಿದ್ದರೂ, ಅದರ ಪಾತ್ರವನ್ನು ಭಿನ್ನ ರೀತಿಯಲ್ಲಿ ಭೈರಪ್ಪ ಅವರು ಕಟ್ಟಿಕೊಟ್ಟಿದ್ದಾರೆ. ಈ ಕಾರಣದಿಂದಲೇ ಈ ಕಾದಂಬರಿ ದೇಶ – ವಿದೇಶದಲ್ಲಿ ಆಯಾ ಭಾಷೆಗೆ ಅನುವಾದಗೊಂಡು ಖ್ಯಾತಿ ಆಗಿದೆ.
ಇದನ್ನೂ ಓದಿ: Tollywood: ಮತ್ತೆ ಒಂದೇ ಸಿನಿಮಾದಲ್ಲಿ ʼಬೇಬಿʼ ಜೋಡಿ; ಹೊಸ ನಿರ್ದೇಶಕ ಎಂಟ್ರಿ
ಈ ಬಗ್ಗೆ ʼಎಕ್ಸ್ʼ ನಲ್ಲಿ ಬರೆದುಕೊಂಡಿರುವ ಅವರು “ಮಹಾಭಾರತ ಇತಿಹಾಸವೋ ಅಥವಾ ಪುರಾಣವೋ? ಪದ್ಮಭೂಷಣ ಡಾ. ಎಸ್‌ಎಲ್ ಭೈರಪ್ಪ ಅವರ ‘ಆಧುನಿಕ ಶ್ರೇಷ್ಠ’ವನ್ನು (ಪರ್ವ – ಧರ್ಮದ ಒಂದು ಮಹಾಕಾವ್ಯ) ಪ್ರಸ್ತುತಪಡಿಸುತ್ತಿರುವುದಕ್ಕೆ ಸರ್ವಶಕ್ತರಿಗೆ ಕೃತಜ್ಞರಾಗಿರುತ್ತೇನೆ. ಪರ್ವವನ್ನು ‘ಮೇರುಕೃತಿಗಳ ಮೇರುಕೃತಿ’ ಎಂದು ಕರೆಯಲು ಒಂದು ಕಾರಣವಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ʼಐಯಾಮ್ ಬುದ್ಧʼ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದು, 3 ಭಾಗಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಪಲ್ಲವಿ ಜೋಶಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಕಥೆ – ಚಿತ್ರಕಥೆಗೆ ಪ್ರಕಾಶ್ ಬೆಳವಾಡಿ ಅವರು ಸಹಕರಿಸಲಿದ್ದಾರೆ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಹೇಳಿದೆ.