Advertisement
ಈ ಕಾರ್ಯಕ್ರಮ ಮೊಟ್ಟಮೊದಲ ಬಾರಿಗೆ ಅತಿಥಿಗಳಾಗಿ ಚಿತ್ರತಾರೆಯರು ಮತ್ತು ಅವರ ನಿಜಜೀವನದ ಬಿಎಫ್‍ಎಫ್‍ಗಳನ್ನು ಒಗ್ಗೂಡಿಸಲಿದ್ದು ಅವರು ತಮ್ಮ ಮಿತ್ರತ್ವ ಬಾಂಧವ್ಯದ ಗುಟ್ಟುಗಳನ್ನು ಹಂಚಿಕೊಳ್ಳಲಿದ್ದು ಆಸಕ್ತಿದಾಯ ಆಟಗಳನ್ನೂ ಕೂಡಾ ಶಿವರಾಜ್‍ಕುಮಾರ್ ಅವರೊಂದಿಗೆ ಆಡಲು ಅವಕಾಶ ಕಲ್ಪಿಸುತ್ತದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಹಿಂದೆಂದೂ ಕಾಣದ ವಿಡಿಯೋಗಳ ಪ್ರದರ್ಶನ ನೀಡುವುದಲ್ಲದೆ ಅವರ ಅಚ್ಚುಮೆಚ್ಚಿನ ತಾರೆಯರೊಂದಿಗೆ ಸಂವಹನ ನಡೆಸುವ ಅವಕಾಶ ಕಲ್ಪಿಸುತ್ತದೆ.
Related Articles
Advertisement
ಈ ಕಾರ್ಯಕ್ರಮ ಕುರಿತು ವಿಯು ಇಂಡಿಯಾದ ಮಾನಿಟೈಸೇಷನ್ ಅಂಡ್ ಡಿಸ್ಟ್ರಿಬ್ಯೂಷನ್ ಮುಖ್ಯಸ್ಥ ಸಮೀರ್ ಗೊಗಟೆ, `ಪ್ರೀಮಿಯಂ ಕಂಟೆಂಟ್ ನೀಡುವ ನಿಟ್ಟಿನಲ್ಲಿ ನಾವು ವಿಯುವಿನಲ್ಲಿ ರಾಷ್ಟ್ರವ್ಯಾಪಿ ಮಿಲೆನಿಯಲ್ಸ್‍ಗೆ ಇಷ್ಟವಾಗುವ ಕಂಟೆಂಟ್ ಫ್ರಾಂಚೈಸಿಗಳನ್ನು ಸೃಷ್ಟಿಸುತ್ತಿದ್ದೇವೆ. `ನಂ.1 ಯಾರಿ’ ಫ್ರಾಂಚೈಸಿ ಅಂತಹ ಒಂದು ಉತ್ಸಾಹಕರ ಸೇರ್ಪಡೆಯಾಗಿದ್ದು ಅಭಿಮಾನಿಗಳನ್ನು ಖ್ಯಾತನಾಮರ ವೈಯಕ್ತಿಕ ಬದುಕಿನ ಸ್ಪರ್ಶ ನೀಡುವ ಮೂಲ ಮಾಹಿತಿಯ ಗ್ರಂಥಾಲಯ ರೂಪಿಸುತ್ತಿದ್ದೇವೆ. ತೆಲುಗು ಭಾಷೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾದ ನಂತರ ನಾವು ಗ್ರೂಪ್ ಎಂ ನೊಂದಿಗೆ ನಮ್ಮ ಬಾಂಧವ್ಯ ವಿಸ್ತರಿಸಲು ಸಂತೋಷಪಡುತ್ತಿದ್ದು ಕನ್ನಡ ಚಲನಚಿತ್ರೋದ್ಯಮದ ಸೂಪರ್‍ಸ್ಟಾರ್‍ರಿಂದ ಮತ್ತೊಂದು ಎಲ್ಲರನ್ನೂ ಆಕರ್ಷಿಸುವ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದರು.
`ಶಿವಣ್ಣ ಅತ್ಯಂತ ಭಾವನಾತ್ಮಕ ಮತ್ತು ಫೀಲ್ ಗುಡ್ ಕಾರ್ಯಕ್ರಮದ ನಿರೂಪಕರಾಗಿರುವುದು ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ತಾರೆಯರು ಪರಸ್ಪರ ಸಂಪರ್ಕ ಹೊಂದಿರುವುದು ಮತ್ತು ವೀಕ್ಷಕರಿಗೆ ಭಾನುವಾರ 8 ಗಂಟೆಗೆ ಆನಂದದಾಯಕ ಸಮಯ ನೀಡುವುದು ನಿಜಕ್ಕೂ ಮಹತ್ವಪೂರ್ಣವಾಗಿದೆ’ ಎಂದು ಸ್ಟಾರ್ ಸುವರ್ಣದ ವಕ್ತಾರರು ಹೇಳಿದರು.
ಮೈಂಡ್‍ಶೇರ್ ಏಷ್ಯಾದ ಚೀಫ್ ಇನ್ನೊವೇಷನ್ ಆಫೀಸರ್ ಮ್ಯಾಕ್ ಮಾಚಯ್ಯ, `ಹಿಂದಿನ ಕಾರ್ಯಕ್ರಮಗಳಲ್ಲಿ ಅಪಾರ ಯಶಸ್ಸು ಪಡೆದ ನಂತರ ಈ ಬಾರಿ ನಂ.1 ಯಾರಿ ಕನ್ನಡ ಚಲನಚಿತ್ರ ರಂಗದ ತಾರೆಯರ ನಡುವಿನ ಸಮಯರಹಿತ ಮಿತ್ರತ್ವವನ್ನು ಸಂಭ್ರಮಿಸುತ್ತದೆ. ಮೈಂಡ್‍ಶೇರ್ ಅದರ ಸಹ-ನಿರ್ಮಾಣಕ್ಕೆ ಮತ್ತು ಅಂತಹ ಸಕ್ರಿಯ ಬ್ರಾಂಡೆಡ್ ಕಾರ್ಯಕ್ರಮವನ್ನು ಭಾರತದ ವೀಕ್ಷಕರಿಗೆ ನೀಡಲು ಹೆಮ್ಮೆಪಡುತ್ತದೆ. ಪರದೆಯ ಹಿಂದಿನ ಸಂದರ್ಭಗಳ ಅಗೋಚರ ಬಂಧಗಳ ಕುರಿತು ಬೆಳಕು ಚೆಲ್ಲುವ ಮೂಲಕ ಸೋದರತ್ವ ಮತ್ತು ಮಿತ್ರತ್ವದ ಸ್ಫೂರ್ತಿಯನ್ನು ಸಂಭ್ರಮಿಸುತ್ತದೆ. ದೇಶದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿರುವ ಪ್ರಯಾಣದಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದ್ದು ಹಲವು ಕ್ಷೇತ್ರಗಳು ಮತ್ತು ವಿಷಯಗಳಿಗೆ ವಿಸ್ತರಿಸಿದ್ದು ಮೆಷಿನ್ ಲರ್ನಿಂಗ್, ಸೃಜನಶೀಲತೆ, ಅಡಾಪ್ಟಿವ್ ಮಾರ್ಕೆಟಿಂಗ್ ಮತ್ತಿತರೆ ಬಳಸಿಕೊಳ್ಳುತ್ತಿದೆ’ ಎಂದರು.
ಕಾರ್ಯಕ್ರಮದ ಎಲ್ಲ ಕಂತುಗಳನ್ನು ವಿಯು ಆಪ್-ಮುಂಚೂಣಿಯ ಮೂಲ ವಿಷಯ ವಸ್ತುವಿನ ಒನ್-ಸ್ಟಾಪ್ ತಾಣದಲ್ಲಿ ವಿಶೇಷವಾಗಿ ವೀಕ್ಷಿಸಬಹುದು.