Advertisement

ವಿಟ್ಲ ಪಾರ್ಥಂಪಾಡಿ (ಜಠಾಧಾರಿ) ದೈವಸ್ಥಾನ: ಬ್ರಹ್ಮಕಲಶ ಸಿದ್ಧತೆ

09:51 AM Jan 19, 2019 | |

ವಿಟ್ಲ : ಇಲ್ಲಿನ ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವಸ್ಥಾನವು ಪುನರ್‌ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಬ್ರಹ್ಮಕಲಶಕ್ಕೆ ಸಿದ್ಧತೆ ನಡೆ ಯುತ್ತಿದೆ. ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಅರಸು ಮನೆತನದ ಪಾರ್ಥಂ ಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ (ರಾಜನ್‌ ದೈವ) ಕಟ್ಟೆಯ ಸ್ಥಾನ ಪ್ರದಾನ, ಪುನಃಪ್ರತಿಷ್ಠೆ ಮತ್ತು ಮೈಮೆಯು ಫೆ.6 ಮತ್ತು7ರಂದು ನಡೆಯಲಿದೆ.

Advertisement

ಪ್ರಾಚೀನ ದೈವಸ್ಥಾನ
ಇದು ಪ್ರಾಚೀನ ದೈವಸ್ಥಾನಗಳಲ್ಲೊಂದು. ವಿಟ್ಲ ಸೀಮೆಯೆಂದು ಕರೆಯಲ್ಪಡುವ 19 ಗ್ರಾಮಗಳನ್ನು ಹೆಚ್ಚಿನ ಮಟ್ಟಿಗೆ ಸ್ವತಂತ್ರ ವಾಗಿ ಆಳುತ್ತಿದ್ದ ರಾಜವಂಶ, ವಿಟ್ಲ ಡೊಂಬ ಹೆಗ್ಗಡೆ ಅರಸು ಮನೆತನವು ವಿಟ್ಲ ಸೀಮೆಯಲ್ಲಿ 16 ದೈವ – ದೈವಸ್ಥಾನ ಗಳನ್ನು ನಡೆಸಿಕೊಂಡು ಬಂದಿತ್ತು. ವಿಟ್ಲ ಅರಸು ಮನೆತನದ ಆನುವಂಶಿಕ ಆಡಳಿತ ಕ್ಕೊಳಪಟ್ಟ ವಿಟ್ಲ ಸೀಮೆಯ ದೈವ – ದೈವಸ್ಥಾನಗಳಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಪ್ರಮುಖವಾದುದು. 2013 ರಲ್ಲಿ ಈ ದೇಗುಲದ ಬ್ರಹ್ಮಕಲಶ ಸಂಪನ್ನ ವಾಗಿರುವುದು ಈಗ ಇತಿಹಾಸ. ಅದೇ ವಿಟ್ಲ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಪಾರ್ಥಂ ಪಾಡಿ (ಜಠಾಧಾರಿ) ದೈವದ ದೈವಸ್ಥಾನವೂ ಶಿಥಿಲಗೊಂಡು ಪುನರ್‌ನಿರ್ಮಾಣ ಮಾಡ ಬೇಕೆನ್ನುವ ಆಶಯ ಭಕ್ತರದಾಗಿತ್ತು.

ಪ್ರಶ್ನಾಚಿಂತನೆ
ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವ ಸ್ಥಾನದ ಪುನರ್‌ ನಿರ್ಮಾಣಕ್ಕೆ ದೈವಜ್ಞರಿಂದ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಮುಖ ದೈವ ಶ್ರೀ ಜಠಾಧಾರಿ, ನಾಗನ ಸಾನ್ನಿಧ್ಯ ಮತ್ತು ಗುಳಿಗ ದೈವದ ಸಾನ್ನಿಧ್ಯವೂ ಶಿಥಿಲಗೊಂಡಿದೆ. ಅದೆಲ್ಲವನ್ನೂ ಜೀರ್ಣೋ ದ್ಧಾರಗೊಳಿಸಬೇಕೆಂದು ಕಂಡು ಬಂತು. ಅದರಂತೆ ವಿಟ್ಲದ ಅರಸರು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳು, ಸೀಮೆಯ ತಂತ್ರಿಯವರ ಮಾರ್ಗದರ್ಶನದಲ್ಲಿ ದೈವಸ್ಥಾನದ ಪುನರ್‌ ನಿರ್ಮಾಣ ನಡೆಸಲು ತೀರ್ಮಾನಿಸಲಾಯಿತು.

ಜೀರ್ಣೋದ್ಧಾರ ಸಮಿತಿ
ಜೀರ್ಣೋದ್ಧಾರ ಸಮಿತಿ ರಚಿಸ ಲಾಗಿದ್ದು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳ ಮಾರ್ಗದರ್ಶನದಲ್ಲಿ ಗೌರವಾಧ್ಯಕ್ಷರಾಗಿ ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು, ಅಧ್ಯಕ್ಷರಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ಕಾರ್ಯಾಧ್ಯಕ್ಷರಾಗಿ ಬಾಬು ಕೆ.ವಿ., ಉಪಾಧ್ಯಕ್ಷರಾಗಿ ಲಕ್ಷ್ಮಣ ಆರ್‌.ಎಸ್‌., ವಿಟ್ಲ ಅರಮನೆಯ ಶ್ರೀಕಂಠ ವರ್ಮ, ಮಹಾಲಿಂಗ ಶೆಟ್ಟಿ ಕೂಜಪ್ಪಾಡಿ, ಕೋಶಾಧಿಕಾರಿಯಾಗಿ ಪ್ರಭಾಕರ ಶೆಟ್ಟಿ ದಂಬೆಕಾನ, ಕಾರ್ಯದರ್ಶಿಯಾಗಿ ಶೈಲೇಶ್‌ ವಿ., ಜತೆ ಕಾರ್ಯದರ್ಶಿಯಾಗಿ ನಾರಾಯಣ ನಾವಡ ಅವರನ್ನೊಳಗೊಂಡ ಸಮಿತಿ ರಚಿಸಲಾಯಿತು.

ಯೋಜನೆ
ವಾಸ್ತುಶಿಲ್ಪಿ ರಮೇಶ್‌ ಕಾರಂತ ಅವರ ಮಾರ್ಗದರ್ಶನದಲ್ಲಿ ಯೋಜನೆಯನ್ನು ರೂಪಿಸಲಾಯಿತು. ದೈವಸ್ಥಾನದ ಸುತ್ತ ಮುತ್ತಲ ಪ್ರದೇಶವಾದ ನೆಕ್ಕರೆಕಾಡು, ಕಾಶಿಮಠದ ಆಸ್ತಿಕ ಬಂಧುಗಳು, ಸ್ವಯಂ ಸೇವಕರು ಶ್ರಮದಾನದ ಮೂಲಕ ಜೀರ್ಣೋದ್ಧಾರ ಕಾರ್ಯದಲ್ಲಿ ಹಗಲಿ ರುಳು ಶ್ರಮಿಸಿದರು. ಊರ ಪರವೂರ ದಾನಿಗಳು ಕೈಜೋಡಿಸಿದರು. ಸುಮಾರು 50 ಲಕ್ಷ ರೂ. ವೆಚ್ಚದ ದೈವಸ್ಥಾನ, ನಾಗನಕಟ್ಟೆ, ರಾಜನ್‌ ಗುಳಿಗ ದೈವದ ಸಾನ್ನಿಧ್ಯ ಪುನರ್‌ನಿರ್ಮಾಣಗೊಂಡಿತು.

Advertisement

157 ವರ್ಷಗಳ ಹಿಂದೆ ಜಾತ್ರೆ
ದೈವಸ್ಥಾನದ ಸಮೀಪದ ಬಾಕಿಮಾರು ಗದ್ದೆ (ಮೈಮೆದ ಕಂಡ)ಯಲ್ಲಿ ಜಠಾಧಾರಿ ದೈವದ ಜಾತ್ರೆ 157 ನಡೆದಿದೆ. ಅದಕ್ಕೆ ಭಾರೀ ಮಹಿಮೆಯಿತ್ತು. ತುಳುವಿನಲ್ಲಿ ಮೈಮೆದ ಜಾತ್ರೆಯೆಂದೇ ಹೇಳಲಾಗುತ್ತಿತ್ತು. ಇದಕ್ಕೆ ಕೇರಳದ ಕುಡಾಲುಮೇರ್ಕಳದ ಬಾಡೂರು ಎಂಬಲ್ಲಿಂದ ಭಂಡಾರ ಆಗಮಿಸ ಬೇಕಾಗಿತ್ತು. ಇದೀಗ ದೈವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪೂರ್ತಿ ಯಾಗಿ ಫೆ. 6 ಮತ್ತು 7ರಂದು ಸ್ಥಾನ ಪ್ರದಾನ, ಪುನಃ ಪ್ರತಿಷ್ಠೆ ನಡೆಯಲಿದ್ದು, ಬಳಿಕ ರಾತ್ರಿ ದೈವದ ಮೈಮೆ ಸೇವೆ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next