ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಬಳಿ ಮಾನಸ ಆಯಿಲ್ ಮಿಲ್ ಎದುರು ರಸ್ತೆ ಮಧ್ಯೆಯೇ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಸೋಮವಾರ ಬೆಳಗ್ಗೆ ಸಾವಿರಾರು ಮಂದಿ ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು.
ಮುಂಜಾನೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕಬ್ಬಿಣ ಸಾಗಿಸುತ್ತಿದ್ದ ಆರು ಚಕ್ರದ ಲಾರಿ ಮಾಣಿಯ ಹಳೀರ ಎಂಬಲ್ಲಿ ರಸ್ತೆ ಮಧ್ಯೆದಲ್ಲಿ ಕೆಟ್ಟು ನಿಂತಿತ್ತು. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಬಸ್, ಲಾರಿ, ಶಾಲಾ ವಾಹನಗಳು ರಸ್ತೆಯಲ್ಲಿ ಉಳಿದ ಪರಿಣಾಮ ಉದ್ಯೋಗಿಗಳು, ಹಾಗೂ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಯಿತು.
ವಾಹನಗಳು ಮಾಣಿಯಿಂದ ಸುರಿಕುಮೇರು, ಹಾಗೂ ಬುಡೋಳಿ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಲಾರಿ ಬೆಳಗ್ಗೆ 4 ಗಂಟೆಗೇ ಕೆಟ್ಟು ನಿಂತಿದ್ದರೆ 10.30ರ ಬಳಿಕ ವಿಟ್ಲ ಪೊಲೀಸರು ಮತ್ತು ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಾರಿ ತೆರವು ಗೊಳಿಸಿ ಸಂಚಾರ ಸುಗಮಗೊಳಿಸಿದರು.