Advertisement
ಶೀಘ್ರ ಕ್ರಮಕ್ಕೆ ಆಗ್ರಹವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ ದಲ್ಲಿ ಇಂಡಸ್ ಕಂಪೆನಿಗೆ ಸೇರಿದ ಮೊಬೈಲ್ ಟವರ್ ನಿರ್ಮಿಸಲಾಗಿತ್ತು. ಅದರ ಮುಂಭಾಗ ತಡೆಗೋಡೆ ನಿರ್ಮಿಸಲಾಗಿದ್ದು, ನಿರಂತರ ಭಾರೀ ಮಳೆಗೆ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ. ಪರಿಣಾಮವಾಗಿ ಮೊಬೈಲ್ ಟವರ್ ಬೀಳುವ ಹಂತದಲ್ಲಿದೆ. ಟವರ್ ಸುತ್ತಮುತ್ತ ವಾಸಿಸುವ ಅನೇಕ ಕುಟುಂಬಗಳು ಭಯದಲ್ಲಿ ಜೀವನ ನಡೆಸುವಂತಾಗಿದೆ. ಸಂಬಂಧಪಟ್ಟವರು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ವಿಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಅಭಿವೃದ್ಧಿ ಅಧಿಕಾರಿ ಕರೀಂ, ಸದಸ್ಯ ಯತೀಶ್ ಕುಂಡಡ್ಕ, ಗ್ರಾಮಕರಣಿಕ ಕರಿಬಸಪ್ಪ, ಇಂಡಸ್ ಕಂಪೆನಿಯ ಎಂಜಿನಿಯರ್ ರಾಜೇಶ್ ಹಾಗೂ ರಮೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.