Advertisement

ವಿಟ್ಲಪಡ್ನೂರು: ಅತ್ತೆಯ ಎದುರೇ ನಾದಿನಿಯ ಅತ್ಯಾಚಾರಗೈದು ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ

12:04 PM Jan 03, 2021 | Team Udayavani |

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕಡಂಬು ಬೆದ್ರಕಾಡಿನ ಯುವತಿಯನ್ನು ಆಕೆಯ ಅಕ್ಕನ ಪತಿ ಆರೋಪಿ ಬಶೀರ್ ಅತ್ಯಾಚಾರವೆಸಗಿದ ಘಟನೆ ನಡೆದಿದೆ.

Advertisement

ಯುವತಿ ಮತ್ತು ಆಕೆಯ ತಾಯಿ ಇಬ್ಬರೇ ಮನೆಯಲ್ಲಿ ಇದ್ದಾಗ ಆರೋಪಿ ಬಶೀರ್, ಆಕೆಯ ತಾಯಿಯನ್ನು ಬಲವಂತವಾಗಿ ಮನೆಯಿಂದ ಹೊರಗೆ ಕಳುಹಿಸಿ, ಯುವತಿಯನ್ನು ರೂಮಿಗೆ ಎಳೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ಪೋಟೋಗಳನ್ನು ಆತನ ಮೊಬೈಲ್‌ನಲ್ಲಿ ಸೆರೆ ಹಿಡಿದು ನೀನು ನನ್ನೊಂದಿಗೆ ಲೈಂಗಿಕ ಕ್ರಿಯೆ ಮಾಡಲು ಸಿಗದೇ ಇದ್ದರೆ ನನ್ನ ಮೊಬೈಲ್‌ನಲ್ಲಿರುವ ನಿನ್ನ ಪೋಟೋಗಳನ್ನು ವೈರಲ್‌ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆನ್ನಲಾಗಿದೆ.

ಇದನ್ನೂ ಓದಿ:ಮೂರು ದಿನದಲ್ಲಿ ಎರಡನೇ ಮರ್ಯಾದಾ ಹತ್ಯೆ: 12 ಬಾರಿ ಚೂರಿಯಿಂದ ಇರಿದು 23 ವರ್ಷದ ಯುವಕನ ಹತ್ಯೆ

ಆರೋಪಿಯ ವಿರುದ್ಧ ಯುವತಿಯು ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next