Advertisement

ವಿಟ್ಲ: ಗ್ರಾಮಸ್ಥರಿಂದ ಇತಿಹಾಸ ಪ್ರಸಿದ್ಧ ಕೋಟಿಕೆರೆ ದುರಸ್ತಿ

07:29 PM Jun 15, 2019 | mahesh |

ವಿಟ್ಲ: ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದ ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯ ತಡೆಗೋಡೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿ ಮಾಡಿದರು.
ನೂರು ವರ್ಷಗಿಂತಲೂ ಅಧಿಕ ಇತಿಹಾಸ ಹೊಂದಿರುವ, ವಿಟ್ಲದ ಅರಮನೆಗೆ ಸಂಬಂಧಿಸಿದ ಕೋಟಿಕೆರೆಯಲ್ಲಿ ಹೂಳು ತುಂಬಿದ್ದು, ಕೆರೆಯ ತಡೆಗೋಡೆ ಆಗಾಗ ಅಲ್ಲಲ್ಲಿ ಕುಸಿಯುತ್ತಿತ್ತು. ಈ ಬಗ್ಗೆ ಗಮನಹರಿಸಿದ ಕಾಶಿಮಠ ಸುತ್ತಮುತ್ತಲಿನ ಗ್ರಾಮಸ್ಥರು ದುರಸ್ತಿ ಕಾರ್ಯಕ್ಕೆ ಮುಂದಾದರು.

Advertisement

ಕಾಶಿ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೆ.ವಿ. ನೇತೃತ್ವದಲ್ಲಿ 25ಕ್ಕಿಂತಲೂ ಅಧಿಕ ಗ್ರಾಮಸ್ಥರು ಶ್ರಮದಾನ ನಡೆಸಿದರು. ವಿಟ್ಲದ ಕೆಲವು ದಾನಿಗಳು ವಿವಿಧ ರೀತಿಯ ಸಹಕಾರ ನೀಡಿದರು. ಇದೀಗ ಬಿರುಕು ಬಿಟ್ಟ ತಡೆಗೋಡೆಗೆ ಕಲ್ಲು ಹಾಗೂ ಸಿಮೆಂಟ್‌ ಹಾಕುವ ಮೂಲಕ ಭದ್ರಪಡಿಸಲಾಗಿದೆ.

ಈಜುಪಟು ಕಾಶಿಮಠ ಈಶ್ವರ್‌ ಭಟ್‌, ಕಾಶಿ ಯುವಕ ಮಂಡಲದ ಅಧ್ಯಕ್ಷ ಕೇಶವ, ಮಾಜಿ ಅಧ್ಯಕ್ಷ ಪ್ರತಾಪ್‌, ವಿಟ್ಲ ಜೇಸಿಐ ಅಧ್ಯಕ್ಷ ಬಾಲಕೃಷ್ಣ, ವಿಶ್ವನಾಥ ಕೊಪ್ಪಳ, ವಿಶ್ವನಾಥ ಕಬ್ಬಿನಹಿತ್ತಿಲು, ಪ್ರವೀಣ್‌ ಪುಚ್ಚೆಗುತ್ತು, ಮಿಥುನ್‌, ಲಕ್ಷ್ಮಣ ಆರ್‌.ಎಸ್‌. ಮತ್ತಿತರರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next