ವಿಟ್ಲ : ವಿಟ್ಲಕಸಬಾ ಗ್ರಾಮದ ಉಕ್ಕುಡ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ PSI ಸಂದೀಪ್ ಕುಮಾರ್ ಶೆಟ್ಟಿ ಅವರು ಪೊಲೀಸರೊಂದಿಗೆ ಕುದ್ದುಪದವು, ಮರಕ್ಕಿಣಿಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಜೀತೊ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದಾಖಲೆಯಿಲ್ಲದೆ 200 ಚೀಲ ಅಕ್ಕಿ ಸಾಗಾಟ ಮಾಡುವುದು ತಿಳಿದುಬಂದು, ವಶಕ್ಕೆ ಪಡೆದುಕೊಂಡ ಘಟನೆ ಸಂಭವಿಸಿದೆ.
ವಾಹನ ಚಾಲಕ ಮಹಮ್ಮದ್ ಆಲಿ ವಾಹನದಲ್ಲಿ ತಲಾ 50 ಕೆ.ಜಿ ಯ 20 ಅಕ್ಕಿ ಚೀಲಗಳು ಇದ್ದು, ಇದನ್ನು ಕೇಪು ಗ್ರಾಮದ ಮರಕ್ಕಿಣಿಯಲ್ಲಿನ
ಹನೀಫ್ ಅವರಿಗೆ ಸೇರಿದ ಗೋಡೌನ್ ಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದರು. ಮರಕ್ಕಿಣಿಗೆ ತೆರಳಿ, ಪರಿಶೀಲಿಸಿದಾಗ ಗೋಡೌನಿನಲ್ಲಿ ತಲಾ 50 ಕೆ.ಜಿ ತೂಕದ 180 ಚೀಲಗಳಲ್ಲಿ ಒಟ್ಟು 9 ಟನ್ ತೂಕದ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಯಾ ದಾಖಲಾತಿಗಳಿಲ್ಲದೇ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ.
ಜೀತೊ ವಾಹನದಲ್ಲಿದ್ದ ತಲಾ 50 ಕೆ.ಜಿ ಯ 20 ಚೀಲ ಅಕ್ಕಿ ಸೇರಿ ಒಟ್ಟು 200 ಚೀಲ ಅಕ್ಕಿ ಸ್ವಾದೀನಪಡಿಸಿಕೊಳ್ಳಲಾಗಿದೆ. ಅಕ್ಕಿಯ ಒಟ್ಟು ಮೌಲ್ಯ ಅಂದಾಜು ಸುಮಾರು ರೂಪಾಯಿ 3,30,000/- ಹಾಗೂ ಸ್ವಾಧೀನಪಡಿಸಿಕೊಂಡ ಜೀತೊ ವಾಹನದ ಮೌಲ್ಯ ಸುಮಾರು ರೂಪಾಯಿ 3,00,000/- ಸೇರಿ ಒಟ್ಟು ಮೌಲ್ಯ ಸುಮಾರು ರೂಪಾಯಿ 6,30,000/- ಆಗಿರುತ್ತದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.