Advertisement
ಯಾಗಶಾಲೆಯಲ್ಲಿ ಪ್ರವಗ್ಯì, ಉಪಸತ್, ಸುಬ್ರಹ್ಮಣ್ಯಾಹ್ವಾನ, ವೇದಿನಿರ್ಮಾಣ, ಯೂಪಕರ್ಮ, ಚಯನಕರ್ಮ, ಅಪರಾಹ್ನ ಪ್ರವಗ್ಯì, ಉಪಸತ್, ಸುಬ್ರಹ್ಮಣ್ಯಾಹ್ವಾನ, ಪಯೋವ್ರತ ವಿ ವಿಧಾನಗಳು ವಿಧ್ಯುಕ್ತವಾಗಿ ನಡೆದವು.
ಫೆ. 22ರಂದು ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಗ್ಗೆ 5ರಿಂದ 8.30ರ ತನಕ ಪುಣ್ಯಾಹ, ಗಣಯಾಗ. 7.48ಕ್ಕೆ ಕುಂಭಲಗ್ನದಲ್ಲಿ ಸಾನ್ನಿಧ್ಯ ಕಲಶಾಭಿಷೇಕ. 10ಕ್ಕೆ ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ. 10.30ಕ್ಕೆ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ವಜ್ರದೇಹಿ ಮಠ, ಗುರುಪುರ, ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು ಅವರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಂಜೆ ಗಂಟೆ 5ರಿಂದ 8.30ರ ವರೆಗೆ ದುರ್ಗಾನಮಸ್ಕಾರ ಪೂಜೆ, ರಂಗ ಪೂಜೆ ನಡೆಯಲಿದೆ. ಯಾಗಶಾಲೆಯಲ್ಲಿ ಸೂಯೊìàದಯಕ್ಕೆ ಪ್ರವಗ್ಯì, ಉಪಸತ್, ಸುಬ್ರಹ್ಮಣ್ಯಾಹ್ವಾನ, ಅರುಣ ಕೇತುಕ ಚಯನ, ಉಪಸ್ಥಾನ, ಪ್ರವಗ್ಯì ಉದ್ವಾಸನೆ, ಅಗ್ನಿಪ್ರಣಯನ, ಹವಿರ್ದಾನ-ಪ್ರಣಯನ, ಸದೋಮಂಟಪ ನಿರ್ಮಾಣ, ಅಗ್ನಿಷೋಮೀಯ ಪ್ರಣಯನ, ಅಗ್ನಿಷೋಮೀಯ ಯಾಗ, ವಸತೀವರೀಹರಣ, ಪಂಚಗೋದೋಹನ, ನಾಮಸುಬ್ರಹ್ಮಣ್ಯಾಹ್ವಾನ, ಸತ್ಯುಪಕ್ರಮ. ಬೆಳಗ್ಗೆ 10.30ಕ್ಕೆ ವೈಶ್ರವಣ ಯಜ್ಞಗಳು ನಡೆಯಲಿದೆ.
Related Articles
Advertisement
ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ, ಬ್ರಹ್ಮಶ್ರೀ ಕೈಮುಕ್ ಪೆರಿಂಪಡು³ ವೈದಿಕನ್ ಶ್ರೀ ರಾಮನ್ ಅಕ್ಕಿತ್ತಿರಿಪ್ಪಾಡ್, ಬ್ರಹ್ಮಶ್ರೀ ಚೇನಾಸ್ ದಿನೇಶನ್ ನಂಬೂದಿರಿಪ್ಪಾಡ್ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿರುವರು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರಸಚಿವ ರಾದ ಡಿ.ವಿ. ಸದಾನಂದ ಗೌಡ ಮತ್ತು ಜನರಲ್ ವಿ. ಕೆ. ಸಿಂಗ್, ರಾ. ಸ್ವ. ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಯಸ್. ಪ್ರಕಾಶ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಉಮಾನಾಥ ಕೋಟ್ಯಾನ್, ಮಂಗಳೂರು ಮೇಯರ್ ಭಾಸ್ಕರ್ ಕೆ., ಮಾಜಿ ಸಚಿವ ಕೃಷ್ಣ ಪಾಲೆಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಕೆ. ಸುರೇಂದ್ರನ್, ಪ್ರಕಾಶ್ ಶೆಟ್ಟಿ ಬಂಜಾರ ,ಕೆ. ಸಿ. ನಾ„ಕ್, ಸತೀಶ್ ಪೂಜಾರಿ, ಡಾ| ಜೀವರಾಜ್ ಸೊರಕೆ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಕಿಶೋರ್ ಆಳ್ವ, ಟಿ. ವಿಜಯಕುಮಾರ್ ರೆಡ್ಡಿ, ಭಾಸ್ಕರ ಶೆಟ್ಟಿ ಪುಣೆ, ದಯಾನಂದ ಬಂಗೇರ ಮುಂಬಯಿ., ಸದಾಶಿವ ಶೆಟ್ಟಿ, ಕುಳೂರು ಕನ್ಯಾನ, ಮಾಧವ ಮಾವೆ, ಉದ್ಯಮಿ, ಬೆಂಗಳೂರು, ಜಯದೇವ್ ಖಂಡಿಗೆ ಉಪಸ್ಥಿತರಿರುವರು. ಸಮಾರಂಭದಲ್ಲಿ ಎಣ್ಮಕಜೆ ಸು ಧೀರ್ ಕುಮಾರ್ ಶೆಟ್ಟಿ, ಅಬುಧಾಬಿ, ಎಸ್. ಎನ್. ವಿ.ಎಲ್. ನರಸಿಂಹ ರಾಜು, ಅಧ್ಯಕ್ಷರು, ಆಕ್ಸ್‌ಫರ್ಡ್ ವಿದ್ಯಾಸಂಸ್ಥೆ ಸಮೂಹ, ಬೆಂಗಳೂರು, ಶಾರದಮ್ಮ, ಸಮಾಜ ಸೇವಕಿ, ಬೆಂಗಳೂರು, ಡಿ. ಎಸ್. ಸೂರ್ಯನಾರಾಯಣ, ಬೆಂಗಳೂರು ಅವರನ್ನು ಸಮ್ಮಾನಿಸಲಾಗುವುದು.