Advertisement

ಆಗಸ ಮಧ್ಯೆ ಸಿಗರೇಟು ಸೇವನೆಗೆ ಹಠ: ಪ್ರಯಾಣಿಕನನ್ನು ಇಳಿಸಿದ ವಿಸ್ತಾರ

04:19 PM Dec 22, 2018 | udayavani editorial |

ಹೊಸದಿಲ್ಲಿ : ವಿಮಾನ ಹಾರಾಟದ ವೇಳೆ ಸಿಗರೇಟು ಸೇದಲು ತನಗೆ ಬಿಡಬೇಕೆಂದು ಕೋರಿ ಹಠ ಹಿಡಿದ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಅಮೃತ್‌ಸರ-ದಿಲ್ಲಿ-ಕೋಲ್ಕತ ಪ್ರಯಾಣದ ವಿಸ್ತಾರ ವಿಮಾನದಲ್ಲಿ (ಹಾರಟ ಸಂಖ್ಯೆ 946 ಮತ್ತು ಯುಕೆ 707) ಇಂದು ಶುಕ್ರವಾರ ಬೆಳಗ್ಗೆ ನಡೆಯಿತು.

Advertisement

ಈ ಮಾರ್ಗದಲ್ಲಿನ ವಿಸ್ತಾರ ವಿಮಾನದ ಹಾರಾಟ ಇಂದು ಎರಡು ಕಾರಣಕ್ಕೆ ಮೂರು ತಾಸುಗಳಿಗೂ ಹೆಚ್ಚು ಹೊತ್ತಿನ ವಿಳಂಬಕ್ಕೆ ಗುರಿಯಾಯಿತು. 

ಮೊದಲನೇ ಪ್ರಕರಣದಲ್ಲಿ ಕುಟುಂಬವೊಂದು ಖಾಸಗಿ ತುರ್ತು ಕಾರಣಕ್ಕೆ ತನ್ನನ್ನು ದಿಲ್ಲಿಯಲ್ಲಿ ಇಳಿಸುವಂತೆ ಕೋರಿತು. ಇದರಿಂದಾಗಿ ವಿಮಾನವು ಸುಮಾರು ಒಂದೂವರೆ ತಾಸಿನ ವಿಳಂಬಕ್ಕೆ ಗುರಿಯಾಯಿತು.

ಎರಡನೇ ಪ್ರಕರಣದಲ್ಲಿ ಕೋಲ್ಕತಕ್ಕೆ ಹೋಗಲು ಅಮೃತಸರದಲ್ಲಿ ವಿಮಾನ ಏರಿದ್ದ  ಪ್ರಯಾಣಿಕನೋರ್ವ ವಿಮಾನವು ಆಗಸದಲ್ಲಿ ಹಾರುತ್ತಿದ್ದ ವೇಳೆ ತನಗೆ ಸಿಗರೇಟು ಸೇದಲು ಅನುಮತಿ ಕೊಡಬೇಕೆಂದು ಹಠಕ್ಕೆ ನಿಂತು ವಿಮಾನ ಸಿಬಂದಿಯೊಂದಿಗೆ ಜಗಳ ತೆಗೆದ. ಆತನನ್ನು ವಿಮಾನದಿಂದ ಇಳಿಸಲು ವಿಮಾನವನ್ನು ಪುನಃ ದಿಲ್ಲಿಗೆ ತರಲಾಯಿತು. ಕೊನೆಗೂ ದಿಲ್ಲಿ ವಿಮಾನ ನಿಲ್ದಾಣದಲ್ಲಿ ದುರ್ವರ್ತನೆಗಾಗಿ ಆತನನ್ನು ಬಲವಂತದಿಂದ ಇಳಿಸಲಾಯಿತು. 

Advertisement

ಈ ಎರಡು ಪ್ರಕರಣಗಳಿಂದ ವಿಸ್ತಾರ ವಿಮಾನದ ಹಾರಾಟ ಮೂರು ತಾಸುಗಳಿಗೂ ಮೀರಿದ ವಿಳಂಬವನ್ನು ಕಂಡಿತು. ಈ ಬಗ್ಗೆ ವಿಸ್ತಾರ ವಿಮಾನ ಯಾನ ಸಂಸ್ಥೆ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿ ಘಟನೆಗಳ ವಿವರವನ್ನು  ಸ್ಪಷ್ಟಪಡಿಸಿತಲ್ಲದೆ ಅದಕ್ಕಾಗಿ ವಿಷಾದಿಸಿತು. ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷೆಯೇ ತನಗೆ ಪರಮೋಚ್ಚ ಆದ್ಯತೆಯಾಗಿದೆ; ಪ್ರಯಾಣಿಕರಿಂದ ಈ ರೀತಿಯ ದುರ್ವರ್ತನೆ ನಮಗೆ ಎಂದೂ ಸ್ವೀಕಾರಾರ್ಹವಲ್ಲ ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next