ಆಗ್ರಾ: ದೇಶದ ಸುಪ್ರಸಿದ್ಧ ಪ್ರವಾಸಿ ಸ್ಥಳ ಆಗ್ರಾದಲ್ಲಿರುವ ತಾಜ್‌ಮಹಲ್‌ಗೆ ಭೇಟಿ ನೀಡಿದವರ ಪ್ರಮಾಣ ಶೇ.36ಕ್ಕೆ ತಗ್ಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರವಾಸಿಗರ ಪ್ರಮಾಣ ಹೆಚ್ಚಾಗಿತ್ತು. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಅಧಿಕಾರಿಗಳ ಪ್ರಕಾರ 2018ರ ಡಿಸೆಂಬರ್‌ನಲ್ಲಿ ವಿದೇಶಿಯರೂ ಸೇರಿದಂತೆ ಏಳು ಲಕ್ಷ ಮಂದಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದರು. ಪ್ರಸಕ್ತ ವರ್ಷ ಇದುವರೆಗೆ ಭೇಟಿ ನೀಡಿದವರ ಸಂಖ್ಯೆ 4.5 ಲಕ್ಷ ಮಂದಿ ಮಾತ್ರ ಭೇಟಿ ನೀಡಿದ್ದಾರೆ. ಗಮನಾರ್ಹ ಅಂಶವೆಂದರೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದು ನವೆಂಬರ್ ಬಳಿಕ. ಅಯೋಧ್ಯೆ ತೀರ್ಪಿನ ಸಂದರ್ಭ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಸರಣಿ ಪ್ರತಿಭಟನೆಗಳು ಸೇರಿದಂತೆ ಹಲವು ಕಾರಣಗಳನ್ನು ಸ್ಥಳೀಯ ಪ್ರವಾಸ ನಿರ್ವಾಹಕರು ಮುಂದಿಡುತ್ತಾರೆ. ಅಮೆರಿಕ, ಯು.ಕೆ., ರಷ್ಯಾ, ಇಸ್ರೇಲ್, ಸಿಂಗಾಪುರ, ಕೆನಡಾ ಮತ್ತು ತೈವಾನ್ ಸರ್ಕಾರಗಳು ಈಗಾಗಲೇ ತಮ್ಮ ತಮ್ಮ ಪ್ರವಾಸಿಗರಿಗೆ ಎಚ್ಚರಿಕೆ ನೀಡಿವೆ.