Advertisement
ಇಲ್ಲಿನ ನೇತ್ರಾವತಿ ನದಿ ಕಿನಾರೆ ಬಳಿಯಿರುವ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದ ಮಂಜುಳಾ ಅವರು, ತ್ಯಾಜ್ಯ ನಿರ್ವಹಣೆ, ಗೊಬ್ಬರ ತಯಾರಿ ಬಗ್ಗೆ ಪಂಚಾಯತ್ ಸಿಬಂದಿಯಿಂದ ಮಾಹಿತಿ ಪಡೆದರು. ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಉತ್ಪಾದನೆಯಾಗುವ ಗೊಬ್ಬರವನ್ನು ಪರಿಶೀಲಿಸಿದ ಅವರು ತ್ಯಾಜ್ಯವನ್ನು ಗೊಬ್ಬರವನ್ನಾಗಿಸುವ ವಿಧಾನವನ್ನು ಬದಲಾಯಿಸಲು ತಿಳಿಸಿದರು. ಅಲ್ಲದೇ, ಉಳಿದ ಗ್ರಾ.ಪಂ.ಗಳ ತ್ಯಾಜ್ಯ ನಿರ್ವಹಣಾ ಘಟಕಕ್ಕೂ ಇಲ್ಲಿನ ಘಟಕಕ್ಕೂ ಇರುವ ವ್ಯತ್ಯಾಸದ ಬಗ್ಗೆ ವಿಮರ್ಶೆ ನಡೆಸಿದ ಅವರು ಮುಂದಿನ ದಿನಗಳಲ್ಲಿ ಸರಿಪಡಿಸಲು ಸೂಚಿಸಿದರು.ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್ ಕೆ., ಕಾರ್ಯದರ್ಶಿ ರೋಹಿತ್, ಪಂಚಾಯತ್ ಸಿಬಂದಿ ಉಪಸ್ಥಿತರಿದ್ದರು.