Advertisement

ತಪಾಸಣ ಕೇಂದ್ರಕ್ಕೆ ನೋಡಲ್‌ ಅಧಿಕಾರಿ, ಶಾಸಕ ಭೇಟಿ ; ಪರಿಶೀಲನೆ

11:47 PM May 15, 2020 | Sriram |

ಕಾಪು: ಕೋವಿಡ್‌ 19 ಹರಡುವಿಕೆ ತಡೆಗಟ್ಟುವಿಕೆಯ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಕಾಪು ತಾಲೂಕಿಗೆ ಬರುವವರ ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್‌ ವ್ಯವಸ್ಥೆ ಜೋಡಣೆಗಾಗಿ ಕಾಪು ಪುರಸಭೆ ಆವರಣದಲ್ಲಿ ತೆರೆಯಲಾಗಿರುವ ಮಾಹಿತಿ ಮತ್ತು ಸ್ಕ್ರೀನಿಂಗ್‌ ಕೇಂದ್ರ ಹಾಗೂ ಕ್ವಾರಂಟೈನ್‌ ಕೇಂದ್ರಗಳಿಗೆ ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಮತ್ತು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

Advertisement

ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್‌ ನಾವುಡ, ಕಂದಾಯ ನಿರೀಕ್ಷಕ ಕೆ. ರವಿಶಂಕರ್‌, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ತಾಲೂಕಿನಲ್ಲಿ 203
ಮಂದಿ ಕ್ವಾರಂಟೈನ್‌
ಕಾಪು ತಾಲೂಕಿನಲ್ಲಿ ಈವರೆಗೆ 203 ಮಂದಿ ಹೊರ ರಾಜ್ಯಗಳಿಂದ ಬಂದವನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಇವರಲ್ಲಿ 76 ಮಂದಿ ಖಾಸಗಿ ಲಾಡ್ಜ್ ‌ಗಳಲ್ಲಿ ಇದ್ದು, 127 ಮಂದಿ ಸರಕಾರೀ ಕ್ವಾರಂಟೈನ್‌ಲ್ಲಿ ಇದ್ದಾರೆ. ಮೂವರು ಗರ್ಭಿಣಿಯರೂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಉದಯವಾಣಿಗೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next