ತೇರದಾಳ: ಮೂಲಭೂತ ಸೌಕರ್ಯಗಳಿದ್ದರೆ ಖಾಸಗಿ ಶಾಲೆಗಳು ಉತ್ತಮ ಶೈಕ್ಷಣಿಕ ಸೇವೆ ಮಾಡಲು ಸಾಧ್ಯವಾಗುತ್ತದೆ. ಮೂಲಭೂತ ಸೌಕರ್ಯಗಳಲ್ಲಿ ಕೊರತೆ ಇಲ್ಲದಂತೆ ಆಡಳಿತ ಮಂಡಳಿ ನೋಡಿಕೊಳ್ಳುವುದು ಅವಶ್ಯಕ. ಈ ನಿಟ್ಟಿನಲ್ಲಿ ಸಿದ್ಧೇಶ್ವರ ಶಾಲೆ ಸಮಾಧಾನ ಮೂಡಿಸಿದೆ ಎಂದು ಗದ್ಯಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಬಿ. ಪಡಗಾನೂರ ಹೇಳಿದರು.
ಇದನ್ನೂ ಓದಿ:ಮನುಷ್ಯನ ಬಾಲಿಶ ಮನಸ್ಸು
ಪಟ್ಟಣದ ಸಿದ್ಧೇಶ್ವರ ಶಾಲೆಗೆ ಇಲಾಖೆಯ ಮಾರ್ಗಸೂಚಿಯಂತೆ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ವಿಶಾಲವಾದ ಸಾಕಷ್ಟು ಕೊಠಡಿಗಳು, ಶೌಚಾಲಯ, ಆಸನ ವ್ಯವಸ್ಥೆ ಸೇರಿದಂತೆ ಸೌಲಭ್ಯಗಳಿರುವಲ್ಲಿ ಮಕ್ಕಳ ಹಾಜರಾತಿ ಹೆಚ್ಚುತ್ತದೆ. ವಿದ್ಯಾಗಮ-2ರಲ್ಲಿ ಸಹ ಶಾಲೆಯ ಮಕ್ಕಳ ಹಾಜರಾತಿ ಹಾಗೂ ಶಿಸ್ತು ಮೆಚ್ಚುವಂತದ್ದು. ಆದರೂ ಸಹ ಕೋವಿಡ್ ಮುನ್ನೆಚ್ಚರಿಕೆಯನ್ನು ನಿರ್ಲಕ್ಷé ಮಾಡಬಾರದು ಎಂದರು. ಪರಿಶೀಲನಾ ತಂಡದಲ್ಲಿದ್ದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಂ. ಯಾದವಾಡ, ಸಿಆರ್‌ಪಿ ಆರ್.ಎ. ನ್ಯಾಮಗೌಡ, ಮುಖ್ಯಶಿಕ್ಷಕಿ ಬಿ.ಜಿ. ಮುದಕನ್ನವರ, ಡಿ.ಎ. ಉಗಾರ, ಬಿ.ಸಿ. ಮುಕರಿ ಉಪಸ್ಥಿತರಿದ್ದರು.