Advertisement
ಉದಯವಾಣಿಯಲ್ಲಿ ಜ.28ರಂದು ‘ಹಾಡಿಯ ಮಕ್ಕಳಿಗೆ ಕಜ್ಜಿಯಿಂದ ಕೀವು, ರಕ್ತ’ ಶೀರ್ಷಿಕೆಯಡಿ ಪ್ರಕಟವಾದ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿ ಗಳ ತಂಡ ಸೋಮವಾರ ಬೆಳಗ್ಗೆ ಕೇಂದ್ರರದ 2ನೇ ಬ್ಲಾಕ್‌ಗೆ ಭೇಟಿ ನೀಡಿ, ಮನೆ ಮನೆಗೆ ತೆರಳಿ ಆರೋಗ್ಯದ ಸ್ಥಿತಿ ಬಗ್ಗೆ ವಿಚಾರಿಸಿದರು.
Related Articles
Advertisement
ನೀರಿನ ಸಮಸ್ಯೆ: ಸಂಚಾರ ಘಟಕ ಹಾಗೂ ಆರ್‌ಬಿಎಸ್‌ಕೆ ಘಟಕದ ವತಿಯಿಂದಲೂ ಆರೋಗ್ಯ ಮಾಹಿತಿ ಹಾಗೂ ಚಿಕಿತ್ಸೆ ನೀಡಿದ್ದರೂ ಇಲ್ಲಿ ನೀರು ಪೂರೈಕೆ ಸಮಸ್ಯೆಯೇ ದೊಡ್ಡದೆಂದು ಹಾಡಿಜನ ಹೇಳುತ್ತಾರೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್, ಸಂಚಾರ ಘಟಕದ ವೈದ್ಯೆ ಡಾ.ಸೌಮ್ಯಶ್ರೀ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಪ್ರತ್ಯೇಕ ಚಿಕಿತ್ಸೆ: ಆರೋಗ್ಯ ಹಾಗೂ ಗಿರಿಜನ ಕಲ್ಯಾಣ ಇಲಾಖೆ ಒಟ್ಟಿಗೆ ಸೇರಿ ಕಜ್ಜಿ ಬಾಧಿತ ಮಕ್ಕಳನ್ನು ಆಶ್ರಮ ಶಾಲೆಯಲ್ಲಿ ಪ್ರತ್ಯೇಕ ಆಶ್ರಯ ಕಲ್ಪಿಸಿ, ನಿತ್ಯ ಬಿಸಿನೀರು ಸ್ನಾನ, ಔಷಧ ಹಚ್ಚಿ ಗಾಯ ವಾಸಿ ಯಾಗುವವರೆಗೆ ವಿಶೇಷ ನಿಗಾವಹಿಸಬೇಕೆಂದು ಜಿಲ್ಲಾ ಗಿರಿಜನ ಸಮನ್ವಯಾಧಿಕಾರಿ ಪದ್ಮ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಅವರಿಗೆ ಜಿಪಂ ಅಧ್ಯಕ್ಷರು ತಾಕೀತು ಮಾಡಿದರು.
ನಂತರ ಆಶ್ರಮ ಶಾಲೆಗೂ ತೆರಳಿ ಬಾಧಿತ ಮಕ್ಕಳೊಂದಿಗೆ ಮಾತನಾಡಿದ ಅಧ್ಯಕ್ಷರು, ಎಲ್ಲಾ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಅಲ್ಲಿನ ಮುಖ್ಯ ಶಿಕ್ಷಕ ಮಂಜುನಾಥ್ ಹಾಗೂ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಮಂಜುಳಾ ಅವರಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಭಾ, ತಾಲೂಕು ಗಿರಿಜನಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಉಪ ನಿರ್ದೇಶಕಿ ಪದ್ಮಾ, ಸಿಡಿಪಿಒ ನವೀನ್‌ಕುಮಾರ್ ಇತರರಿದ್ದರು.