Advertisement

ಸರ್ಕಾರಿ ಆಸ್ಪತ್ರೆಗೆ ನಿರ್ದೇಶಕರ ಭೇಟಿ

02:39 PM Nov 30, 2017 | Team Udayavani |

ಬಸವಕಲ್ಯಾಣ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಎಂದು ಪಿ.ಎಲ್‌. ನಟರಾಜ ಅವರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

Advertisement

ಆಸ್ಪತ್ರೆಗೆ ಬರುವ ಜನರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಕಾಳಜಿ ವಹಿಸಬೇಕು. ಯಾವುದೇ ಕಾರಣಕ್ಕೂ ಜನರಿಗೆ ಹೊರಗಿನಿಂದ ಔಷಧಿ ತರುವಂತೆ ಹೇಳಬಾರದು ಎಂದು ಸ್ಥಳದಲ್ಲಿದ್ದ ವೈದ್ಯಾಧಿ ಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಭಾಗದ ಬಡ ಜನರ ಅನುಕೂಲಕ್ಕಾಗಿ ಇಲಾಖೆಯಿಂದ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸರ್ಕಾರ
ಸೌಲಭ್ಯಗಳನ್ನು ಬಳಸಿಕೊಂಡು ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.

ಆಸ್ಪತ್ರೆಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸುವ ಜತೆಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಕಾಳಜಿ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳು ಯಾವ ಖಾಸಗಿ ಆಸ್ಪತ್ರೆಗಳಿಗೂ ಕಮ್ಮಿ ಇಲ್ಲ. ಆದರೆ ಸೂಕ್ತ ಚಿಕಿತ್ಸೆ ಹಾಗೂ ಅವ್ಯವಸ್ಥೆ ಕಾರಣ ಸರ್ಕಾರಿ ಆಸ್ಪತ್ರೆ ಮೇಲೆ ಜನರು ಭರವಸೆ ಕಳೆದುಕೊಳ್ಳುತಿದ್ದಾರೆ. ಜನರಿಗೆ ಸರಿಯಾದ ಚಿಕಿತ್ಸೆ ನೀಡುವ ಜತೆಗೆ ಸ್ವಚ್ಚತೆ ಕಾಪಾಡಿಕೊಂಡು ಸರ್ಕಾರಿ ಆಸ್ಪತ್ರೆ ಬಗ್ಗೆ ಜನರಲ್ಲಿ ಭರವಸೆ ತುಂಬುವ ಕೆಲಸ ಮಾಡಬೇಕು ಎಂದರು.

ಆಸ್ಪತ್ರೆಗೆ ಈಗಾಗಲೇ ವೆಂಟಿಲೇಟರ್‌ ಯಂತ್ರ ಕಳುಹಿಸಿಕೊಡಲಾಗಿದ್ದು, ಡಯಾಲಿಸಿಸ್‌ ಘಟಕ ಸಹ
ಸ್ಥಾಪಿಸಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಕೊಂಡು ಜನರಿಗೆ ಅನುಕೂಲ ಒದಗಿಸಬೇಕು ಎಂದು ಸೂಚಿಸಿದರು. 

Advertisement

ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳ ಹುದ್ದೆ ಕುರಿತು ಮಾಹಿತಿ ಪಡೆದ ನಿರ್ದೇಶಕರು, ಸಾರ್ವಜನಿಕ ಆಸ್ಪತ್ರೆ ಹಾಗೂ ನೂತನ ಹೆರಿಗೆ ಆಸ್ಪತ್ರೆಗೆ ಅಗತ್ಯವಿರುವ ಮೂವರು ತಜ್ಞ ವೈದ್ಯರು, 5 ಜನ ಸ್ಟಾಪ್‌ ನರ್ಸ್‌ಗಳು ಮತ್ತು 15 ಜನ ಡಿ.ಗ್ರೂಪ್‌ ಸಿಬ್ಬಂದಿಗಳ ಹುದ್ದೆ ಭರ್ತಿ ಮಾಡಿಕೊಡಿ ಎಂದು ಜತೆಯಲಿದ್ದ ಡಿಎಚ್‌ಒ
ಡಾ| ಜಬ್ಟಾರ್‌ ಅವರಿಗೆ ಸೂಚಿಸಿದರು. 

ಇದುವರೆಗೆ ಎಷ್ಟು ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ನೇತ್ರ ತಜ್ಞೆ ಡಾ| ಜ್ಯೋತಿ ಖಂಡ್ರೆ ಅವರನ್ನು ಪ್ರಶ್ನಿಸಿದರು. ಸೂಕ್ತ ಯಂತ್ರೋಪಕರಣ ಇಲ್ಲದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ಕೆಲ ಯಂತ್ರಗಳು ಬಂದಿದ್ದು, ಒಬ್ಬರಿಗೆ ಮಾತ್ರ ಮಾಡಲಾಗಿದೆ ಎಂದು ವೈದ್ಯರು ವಿವರಿಸಿದರು.

ಇನ್ನು ಮುಂದೆಯಾದರು ಹೆಚ್ಚಿನ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವಂತೆ ನಿರ್ದೇಶಕರು ಸೂಚಿಸಿದರು. ಬಸವಕಲ್ಯಾಣ ನಗರದ ಪಕ್ಕದಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕಾರಣ ಇಲ್ಲಿ ರಸ್ತೆ ಅಪಘಾತಗಳಲ್ಲಿ
ಗಾಯಗೊಂಡು ಆಸ್ಪತ್ರೆಗೆ ಬರುವ ಜನರ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಯಲ್ಲಿ ಕೆಲವು ಅಗತ್ಯ ಯಂತ್ರೊಪಕರಣಗಳು ಇಲ್ಲದ ಕಾರಣ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತಿಲ್ಲ. ಸಿಟಿ ಸ್ಕ್ಯನ್ ಹಾಗೂ ಸಿಆರ್ಮ್ ಯಂತ್ರದ ವ್ಯವಸ್ಥೆ ಮಾಡಿಕೊಡಬೇಕು ಎಂದು ಡಿಎಚ್‌ಒ ಜಬ್ಟಾರ್‌ ನಿರ್ದೇಶಕರಿಗೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಕರು ಭರವಸೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಜಬ್ಟಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಶರಣಪ್ಪ ಮುಡಬಿ, ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ| ಅಪರ್ಣಾ ಮಹಾನಂದ, ತಜ್ಞ ವೈದ್ಯರಾದ ಡಾ| ಗಿರೀಶ ಭುರಳೆ, ಡಾ| ಜಖೀಯೋದ್ದಿನ್‌, ಡಾ| ಎಸ್‌.ಬಿ. ದುರ್ಗೆ, ಡಾ| ಶ್ರದ್ಧಾ ತೊಂಡಾರೆ, ಡಾ| ಇರ್ಷಾನಾ , ಡಾ| ತಾಜೋದ್ದಿನ್‌, ಡಾ| ಶೇರಿಕಾರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next