Advertisement
ಮುಷ್ಕೆರೆ ಶಾಲೆಯಲ್ಲಿ ಶುಕ್ರವಾರ ಕೇವಲ 7 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, ಶಾಲೆಯಲ್ಲಿ ವಿದ್ಯಾರ್ಥಿಗಳ ಗೈರು ಹಾಜರಾತಿ ಗುರುವಾರ ಶಾಲೆ ಶಿಕ್ಷಕ ಕೃಷ್ಣೇಗೌಡ ಗೈರು ಹಾಜರಾಗಿದ್ದು, ಹಾಜರಾತಿ ಪುಸ್ತಕದಲ್ಲಿ ಸಿ.ಎಲ್ ದಾಖಲಿಸಿದೇ ಇರುವುದು, ಮಧ್ಯಾಹ್ನದ ಬಿಸಿಯೂಟ ನೀಡದೇ ಇರುವುದು ಸೇರಿದಂತೆ ಶಾಲೆಯಲ್ಲಿ ಬಿಸಿಯೂಟಕ್ಕೆ ಬಳಕೆ ಮಾಡುತ್ತಿದ್ದ ಹುಳುಬಂದಿದ್ದ ಬೇಳೆ ಕಾಳು, ತರಕಾರಿಗಳ ಸಮಗ್ರ ಪರಿಶೀಲನೆ ನಡೆಸಿದರು.
Related Articles
Advertisement
ಮಕ್ಕಳೊಟ್ಟಿಗೆ ಮಕ್ಕಳಾದ ತಂಡದ ಸದಸ್ಯರು: ಭೇಟಿ ಸಂದರ್ಭದಲ್ಲಿ ಶಾಲೆ ಮತ್ತು ಶಾಲೆಯ ಬಿಸಿಯೂಟದ ಮಾಹಿತಿ ಪಡೆದುಕೊಳ್ಳಲು ಮಕ್ಕಳೊಟ್ಟಿಗೆ ಮಕ್ಕಳಂತೆಯೇ ನಟಿಸಿದ ತಂಡದ ನಿರ್ದೇಶಕ ಪರಶುರಾಮ್ ಶಿಕ್ಷಕರು ಹಾಲು, ಮೊಟ್ಟೆ ಬಾಳೆಹಣ್ಣು ಸೇರಿದಂತೆ ಇನ್ನಿತರ ಆಹಾರ ನೀಡದೇ ಇರುವ ಸಮಗ್ರ ಮಾಹಿತಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅರಿವಿಲ್ಲದಂತೆ ಒಂದು ಮಾದರಿ ಆಟದಂತೆ ಪಡೆದುಕೊಂಡರು.
ತನಿಖಾ ತಂಡ ಆಗಮಿಸುವ ಮಾಹಿತಿ ಇದ್ದರೂ ಇಷ್ಟೊಂದು ಲೋಪದೋಷಗಳಿರುವಾಗ ಇನ್ನು ಮಾಮೂಲಿ ದಿನಗಳಲ್ಲಿ ಸಮಸ್ಯೆಗಳು ಹೇಗಿರಬೇಡ ಅನ್ನುವ ಲೆಕ್ಕಚಾರ ಹಾಕಿದ ತಂಡ ನಂತರ ತಾಲೂಕು ಕೇಂದ್ರ ಸ್ಥಾನದತ್ತ ಆಗಮಿಸಿ ಮಧ್ಯಾಹ್ನದ ಊಟದ ಬಳಿಕ ತಾಪಂ ಕಚೇರಿಯಲ್ಲಿ ದಿನದ ಸಮಗ್ರ ತನಿಖೆ ಮತ್ತು ನ್ಯೂನತೆಗಳ ಸಮಗ್ರ ಮಾಹಿತಿ ನೀಡಿದರು.
ತಂಡದ ನಿರ್ದೇಶಕರಾದ ಅಶೋಕ್ ಯೇರಗಟ್ಟಿ, ಎಚ್.ಸಿ.ರಾಘವೇಂದ್ರ, ಶಂಕರಪ್ಪ, ಅಕ್ಷರ ದಾಸೋಹದ ತಾಲೂಕು ನಿದೇರ್ಶಕ ಸಿದ್ದರಾಜು, ನಿಸರ್ಗ ಫೌಂಡೇಷನ್ ನಂಜುಂಡಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಗೀತಾರಾಣಿ, ತಾಲೂಕು ಸಿಡಿಪಿಒ ಆಶಾ, ತಾಲೂಕು ಮಹಿಳಾ ಸಾಂತ್ವನ ಕೇಂದ್ರದ ಜೈಶೀಲಾ ಇದ್ದರು.
ಅಣ್ಣೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ: ಅಣ್ಣೂರು ಸರ್ಕಾರಿ ಶಾಲೆಗೆ ಭೇಟಿ ನೀಡಿದ ತಂಡ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದರೂ ಪೋಷಕರ ಮನ ಒಲಿಸಲು ಶಾಲಾ ಶಿಕ್ಷಕರು ಕ್ರಮವಹಿಸದೇ ಇದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. 2 ಮತ್ತು 3ನೇ ತರಗತಿ ನಲಿಕಲಿ ವಿದ್ಯಾರ್ಥಿಗಳ ಹಾಜರಾಗಿ ಪುಸ್ತಕದಲ್ಲಿ ವಿದ್ಯಾರ್ಥಿಗಳ ಹೆಸರಿನ ಮುಂದೆ 10 ಮತ್ತು 5 ರೂ. ಎಂದು ಬೆನ್ಸಿಲ್‌ನಲ್ಲಿ ನಮೂದಿಸಿರುವುದಕ್ಕೆ
ಅನುಮಾನಗೊಂಡು ಶಿಕ್ಷಕರಿಂದ ವಿವರಣೆ ಬಯಸಿದಾಗ ನಲಿಕಲಿ ಶಿಕ್ಷಕಿ ಸಬೂಬು ಹೇಳುತ್ತಿದ್ದಂತೆಯೇ ಸ್ವತಃ ಸಮಿತಿ ತಂಡವೇ ನಿಮ್ಮಿಂದ ಶಿಕ್ಷಕಿ 10 ರೂ. ಪಡೆದುಕೊಂಡ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಬಯಸುತ್ತಿದ್ದಂತೆಯೇ ಶಾಲೆಯಲ್ಲಿ ಗಡಿಯಾರ ಅಳವಡಿಸಲು ಪ್ರತಿ ವಿದ್ಯಾರ್ಥಿಯಿಂದ 10 ರೂ. ಪಡೆದುಕೊಳ್ಳುತ್ತಿರುವುದಾಗಿ ತಿಳಿಸುತ್ತಿದ್ದಂತೆಯೇ ಸಮಿತಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು ನೈಜತೆ ನಮೂದಿಸಿಕೊಂಡು ಅಲ್ಲಿಂದ ನಿರ್ಗಮಿಸಿದರು.