Advertisement

ಸಮಸ್ಯಾತ್ಮಕ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ

11:11 AM May 05, 2019 | Team Udayavani |

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಗೂ ಜಿಪಂ ಸಿಇಒ ಜಿ.ಜಗದೀಶ್‌ ಸಾರ್ವಜನಿಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರ,ಕೋಲಾರ,ಬಂಗಾರಪೇಟೆ,ಮಾಲೂರು ತಾಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ,ಚರಂಡಿ ಸಮಸ್ಯೆ,ಶುದ್ಧ ನೀರಿನ ಘಟಕ ನಿರ್ವಹಣೆ, ಅಂಗನವಾಡಿ ಬಗ್ಗೆ ಮಾಹಿತಿ
ಸಂಗ್ರಹಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌,ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ್ದೇವೆ.ಕೂಡಲೇ ಸಮಸ್ಯೆ ಬಗೆಹರಿಸಬಹುದದ್ದನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಟ್ಯಾಂಕರ್‌ ನೀರು ಪೂರೈಕೆ: ಈಗಾಗಲೇ ಜಿಲ್ಲೆಯಲ್ಲಿ ದಿನೇದಿನೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ.ಇವತ್ತು ಇರುವ ಕೊಳವೆಬಾವಿಗಳು ನಾಳೆಯೊಷ್ಟರೊಳಗೆ ಬತ್ತಿಹೋಗಿರುತ್ತದೆ. ಇಂತಹ ಪರಿಸ್ಥಿತಿ ಯಲ್ಲಿ ಜನಕ್ಕೆ ಯಾವುದೇ ರೀತಿ ಸಮಸ್ಯೆ ಅಗಬಾರದು ಎಂಬ ಉದ್ದೇಶ ದಿಂದ ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಮೊದಲ ಹಂತದಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇರೆಗೆ ಪಡೆದು ನೀರು ಪೂರೈಕೆ ಮಾಡಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಲಭ್ಯವಾಗದಿದ್ದರೆ ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲಾಗುವುದು ಎಂದರು.

ಪಿಂಚಣಿ ಹಣ ಸಮಸ್ಯೆ: ನೀರಿನ ಸಮಸ್ಯೆಯ ಜತೆಗೆ ಗ್ರಾಮಗಳಲ್ಲಿನ ಮೂಲ ಭೂತ ಸೌಕರ್ಯಗಳ ಬಗ್ಗೆಯೂ ಜನರಿಂದ ದೂರು ಗಳು ಬಂದಿವೆ. ಪಿಂಚಣಿ,ವೃದ್ಧಾಪ್ಯ ವೇತನ ಪಾವತಿ ಅಗದಿರುವ ಬಗ್ಗೆಯಜನ ತಮ್ಮ ಗಮನಕ್ಕೆ ತಂದಿದ್ದು ಕೂಡಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಮಸ್ಯೆ ಬಗೆಹರಿದಿದೆ: ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಈಗಾಗಲೇ ನಿರ್ಮಿಸ ಲಾಗಿರುವ ಚೆಕ್‌ ಡ್ಯಾಂಗಳಲ್ಲಿ ಇತ್ತೀಚಿಗೆ ಅದ ಮಳೆ ಯಿಂದ ನೀರು ತುಂಬಿದೆ. ಜತೆಗೆ ನರೇಗಾದಡಿ ಕೆರೆ ಗಳಲ್ಲಿ ತೆಗೆಸಿರುವ ಹೊಂಡ ಗಳಲ್ಲೂ ನೀರು ತುಂಬಿದ್ದು, ಈ ಮಳೆಯಿಂದ ಮೇವಿನ ಸಮಸ್ಯೆಸ್ವಲ್ಪ ಮಟ್ಟಿಗೆ ಬಗೆಹರಿದಿದೆ ಎಂದು ಹೇಳಿದರು.

Advertisement

ನೀರು ಮಿತವಾಗಿ ಬೆಳಸಿ: ಜಿಪಂ ಸಿಇಒ ಜಿ. ಜಗದೀಶ್‌ ಮಾತನಾಡಿ, ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡುವ ಮನೋ ಭಾವ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಸಲಹೆ ನೀಡಿದರು.
ಯಾವುದೇ ಸಮಸ್ಯೆ ಎದುರಾದರೂ ಎದುರಿಸಬಹುದು. ಆದರೆ ನೀರಿನ ಸಮಸ್ಯೆ ತೀವ್ರಗೊಂಡರೆ ಜನ ತೊಂದರೆ ಅನುಭವಿಸಬೇಕಾಗುತ್ತದೆ. ನೀರು,ಪರಿಸರ ರಕ್ಷಣೆ ಪ್ರತಿಯೊಬ್ಬರ ಮೇಲಿದೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next