Advertisement
ಕಲ್ಮಕಾರು ಭಾಗದ ಶೆಟ್ಟಿಕಟ್ಟ ಪರಿಸರದಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಾಣವಾಗದೆ ಕಾಜಿಮಡ್ಕ, ಕೊಪ್ಪಡ್ಕ, ಮೆಂಟಕಜೆ, ಆಂಜನಕಜೆ ಗುಳಿಕಾನ ಮೊದಲಾದ ಭಾಗಗಳಿಗೆ ಮಳೆಗಾಲದ ಅವಧಿಯಲ್ಲಿ ಸಂಪರ್ಕ ಸಾಧ್ಯವಾಗದೆ ನಾಗರಿಕರು, ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಪರಿಸರದವರು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕಳೆದ 35 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ. ಈ ತನಕ ಯಾವುದೇ ಸ್ಪಂದನೆ ದೊರಕಿರಲಿಲ್ಲ. ಇದಕ್ಕೆ ಅಸಮಧಾನಗೊಂಡ ಈ ಭಾಗದ ನಲವತ್ತು ಕುಟುಂಬಗಳು ಈ ಭಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದರು.
ಪರಿಸರದವರೆಲ್ಲರೂ ಕುಳಿತು ಚರ್ಚಿಸಿ ಮತದಾನ ಬಹಿಷ್ಕಾರದ ಸಾಮೂಹಿಕ ನಿರ್ಧಾರಕ್ಕೆ ಬಂದು ಸೇತುವೆ ನಿರ್ಮಾಣವಾಗಬೇಕಿರುವ ಸ್ಥಳದಲ್ಲಿ ಬ್ಯಾನರು ತೂಗು ಹಾಕಿ ಮತದಾನ ಬಹಿಷ್ಕಾರಕ್ಕೆ ವಾರದ ಹಿಂದೆ ನಿರ್ಧರಿಸಿದ್ದರು. ವಿಚಾರ ತಿಳಿದು ಸುಳ್ಯ ತಾ| ತಹಸಿಲ್ದಾರ್ ಕುಂಞಿ ಅಹಮ್ಮದ್ ಸ್ಥಳಕ್ಕೆ ಭೇಟಿ ಇತ್ತು ನಾಗರಿಕರ ಜತೆ ಮಾತುಕತೆ ನಡೆಸಿ ಮನವೊಲಿಸುವ ಕೆಲಸ ಮಾಡಿದ್ದರು. ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಭೇಟಿ ಇತ್ತ ಮರುದಿನವೇ ಅಧಿಕಾರಿಗಳ ಸಭೆ ಕರೆದು ಸೇತುವೆ ನಿರ್ಮಾಣಕ್ಕೆ ಹಿಂದಿನ ಕಡತಗಳ ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ತಹಸಿಲ್ದಾರ್ ಅವರ ಸ್ಪಂದನೆ ಸ್ಥಳೀಯ ನಿವಾಸಿಗಳಿಗೆ ಆಗ ತೃಪ್ತಿ ನೀಡಿತ್ತು.
ಸಾಧ್ಯವಿಲ್ಲ ಎಂದರು.
Related Articles
Advertisement
ಶಾಸಕರ ವಿರುದ್ಧ ಅಕ್ರೋಶಈ ಭಾಗದ ಮೂಲ ಸೌಕರ್ಯ ವಿಚಾರವಾಗಿ ಸುಳ್ಯದ ಶಾಸಕರ ಸಹಿತ ಜನಪ್ರತಿನಿಧಿಗಳ ಸತತ ನಿರ್ಲಕ್ಷಕ್ಕೆ ಭಾರಿ ಆಕ್ರೋಶಗಳು ಪರಿಸರದ ಜನತೆಯಿಂದ ವ್ಯಕ್ತವಾಗಿದೆ. ನಲವತ್ತು ಕುಟುಂಬಗಳು ವಾಸವಿರುವ ಈ ಭಾಗಕ್ಕೆ ಕಿರು ಸೇತುವೆ ನಿರ್ಮಿಸಲು 37 ವರ್ಷಗಳು ಬೇಕಿತ್ತೆ ಎನ್ನುವ ಪ್ರಶ್ನೆಯನ್ನು ಪರಿಸರದವರು ಕೇಳುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಂದ ಬಳಲಿದ್ದರೂ, ಶಾಸಕರು ಕನಿಷ್ಠ ಸೌಜನ್ಯಕ್ಕೂ ಮತ ಕೇಳುವ ನೆಪದಲ್ಲಾದರೂ ಈ ಭಾಗಕ್ಕೆ ಭೇಟಿ ನೀಡಬೇಕಿತ್ತು. ಅದನ್ನೂ ಮಾಡದೆ ಇರುವ ಶಾಸಕರ ನಿಲುವಿಗೆ ಮತ್ತು ಸ್ಥಳೀಯ ಮುಖಂಡರ ತಟಸ್ಥ ನಿಲುವಿನ ವಿರುದ್ಧ ನಿವಾಸಿಗರು ಆಕ್ರೋಶಿತರಾಗಿದ್ದಾರೆ. ಇಂದು ಮತ್ತೆ ಸಭೆ
ಎ. 17ರಂದು ಮತ್ತೆ ಸ್ಥಳಿಯರೆಲ್ಲರೂ ಸಭೆ ಸೇರಿ ಚರ್ಚೆ ನಡೆಸಲು ನಿರ್ಧರಿಸಿದ್ದಾಗಿ ಫಲಾನುಭವಿ ಗೋಪಾಲಕೃಷ್ಣ ಕೊಪ್ಪಡ್ಕ ತಿಳಿಸಿದ್ದಾರೆ.