Advertisement
5 ಮತ್ತು 6ನೇ ತರಗತಿಗೆ ಭೇಟಿ ನೀಡಿ ಮಕ್ಕಳ ಕಲಿಕೆ ಗುಣಮಟ್ಟ, ಬುದ್ದಿವಂತಿಕೆ ಪರೀಕ್ಷಿಸಿದರು. 5ನೇ ತರಗತಿ ಮಕ್ಕಳಿಗೆ ಮಗ್ಗಿ, ಲೆಕ್ಕ ಹಾಗೂ ನಲಿಕಲಿ ಕುರಿತು ಪ್ರಶ್ನೆ ಕೇಳಿದರೆ, 6ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ವಿಷಯದ ಕುರಿತು ಪ್ರಶ್ನಿಸಿ ಓದಲು ಹೇಳಿದರು. ನಂತರದಲ್ಲಿ ಶಾಲೆ ಕೊಠಡಿಗಳು, ಹಾಗೂ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿ, ಅನುದಾನ ಬಗ್ಗೆ ಮುಖ್ಯಶಿಕ್ಷಕ ಅಶೋಕಅವರಿಂದ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಮಕ್ಕಳು ವಿದ್ಯಾಭ್ಯಾಸ ಕುಂಠಿತವಾಗಬಾರದು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಫೇಲ್ ಆಗಬಾರದು. ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಶಿಕ್ಷಕರು ಮುತುವರ್ಜಿವಹಿಸಬೇಕು ಎಂದು ಹೇಳಿದರು.