Advertisement

ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಪಟ್ಟಿ ಪಡೆಯಿರಿ

09:12 PM Jun 18, 2021 | Girisha |

ವಿಜಯಪುರ: ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಗ್ರಾಪಂಗೆ ಭೇಟಿ ನೀಡಿ ಶಾಲೆಗೆ ದಾಖಲಾಗಲು ಅರ್ಹ ವಿದ್ಯಾರ್ಥಿಗಳ ಪಟ್ಟಿ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ನಿರ್ದೇಶಕ ರಘುವೀರ ಸೂಚಿಸಿದರು.

Advertisement

ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಶೈಕ್ಷಣಿಕ ಚಟುವಟಿಕೆ ನಿರ್ವಹಣೆ ಕುರಿತು ಜಿಲ್ಲೆಯ ಎಲ್ಲ ಶಿಕ್ಷಣಾಧಿ  ಕಾರಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತು ನಿರ್ದೇಶನ ನೀಡಿದ ಅವರು, ಮಕ್ಕಳ ಪಟ್ಟಿಯನ್ನು ಶಾಲಾ ಸಂದರ್ಶನ ನೀಡಿದ ಅಧಿ ಕಾರಿಗಳಿಗೆ ತೋರಿಸಬೇಕು ಎಂದು ಸೂಚಿಸಿದರು. ಶಿಕ್ಷಣ ಇಲಾಖೆ ಆಯುಕ್ತರು ಈಗಾಗಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಿದ್ದು, ಅದನ್ನು ಪ್ರತಿಯೊಬ್ಬ ಶಿಕ್ಷಕರು ಪಾಲಿಸಬೇಕು.

ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣಕ್ಕಾಗಿ ವ್ಯಾಪಕ ಪ್ರಸಾರ ಮಾಡುವುದು ಈ ನಿಟ್ಟಿನಲ್ಲಿ ಬಿಇಒ, ಡೈಟ್‌ ಉಪನ್ಯಾಸಕರು ಹಾಗೂ ಬಿಆರ್‌ಸಿಗಳು ವಿಶೇಷ ಆಸಕ್ತಿ ವಹಿಸಬೇಕು ಎಂದರು. ಸರ್ಕಾರ ಶಾಲಾ ದಾಖಲಾತಿ ಮತ್ತು ಶಾಲಾ ಆರಂಭೋತ್ಸವ ಕುರಿತು ಮಾಹಿತಿ ಒದಗಿಸಿದ್ದು ಇದನ್ನು ಪ್ರತಿಯೊಬ್ಬ ಮುಖ್ಯ ಗುರುಗಳು ಅದರನ್ವಯ ಅನುಸರಿಸಿ ದಾಖಲಾತಿ ಪ್ರಕ್ರಿಯೆ ಮಾಡಿಕೊಳ್ಳಬೇಕು.

ದಾಖಲಾತಿ ಮತ್ತು ಶಾಲೆ ಆರಂಭದ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಹಾಗೂ ನೇರ ಹಾಗೂ ಆನ್‌ಲೈನ್‌ ತರಗತಿಗಳನ್ನು ನಡೆಸುವ ಬಗ್ಗೆ ಪೂರ್ವ ತಯಾರಿಯನ್ನು ಶಾಲಾ ಹಂತದಲ್ಲಿ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next