Advertisement

ನನ್ನ ಜಿಲ್ಲೆಗೂ ಒಲಿಂಪಿಕ್ ಕೀರ್ತಿ: ಸಭಾಧ್ಯಕ್ಷ ಕಾಗೇರಿ

07:00 PM Aug 08, 2021 | Team Udayavani |

ಬೆಂಗಳೂರು: ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಅವರ ತರಬೇತುದಾರ ಕರ್ನಾಟಕದ ಕಾಶಿನಾಥ್ ನಾಯಕ್ ಅವರಿಗೆ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ಸೂಚಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮ ಪ್ರಕಟನೆ ಹೊರಡಿಸಿರುವ ಕಾಗೇರಿ ಅವರು, ಸ್ವರ್ಣ ಇತಿಹಾಸ ಬರೆದ ಕ್ರೀಡಾಪಟುವಿನ ತರಬೇತುದಾರರಿಗೆ ನಗದು ಬಹುಮಾನ ಘೋಷಿಸುವುದು “ಉದಾತ್ತ, ಪ್ರೋತ್ಸಾಹದಾಯಕ ಮತ್ತು ಪ್ರೇರಣಾತ್ಮಕವಾಗಿದೆ. ಇದು ಸರ್ಕಾರದ ಕಡೆಯಿಂದ ಉತ್ತೇಜನವಾಗಿದೆ. ತರಬೇತುದಾರರ ಸೇವೆಗಳನ್ನು ಗುರುತಿಸುವ ಈ ಕ್ರಮವು ತರಬೇತುದಾರರುಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ಧಾರೆ ಎರೆಯಲು ಅವರನ್ನು ಪ್ರೇರೇಪಿಸುವಲ್ಲಿ ಬಹು ದೂರ ಸಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಶಿನಾಥ್ ಅವರು ತಮ್ಮ ತವರು ಶಿರಸಿಯವರು ಎಂಬುದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಹೆಮ್ಮೆಯಿಂದ ಸ್ಮರಿಸಿದ್ದಾರೆ. “ಒಲಿಂಪಿಕ್ ನಲ್ಲಿ ಚಿನ್ನದ ಪದಕ ವಿಜೇತ ಚೋಪ್ರಾಗೆ ನನ್ನ ಊರಿನವರು ತರಬೇತುದಾರರಾಗಿದ್ದಾರೆ ಎಂಬ ಹೆಮ್ಮೆ ನನಗಿದೆ. ನಾನು ಕೂಡ ಕರ್ನಾಟಕ ರಾಜ್ಯದ ಸಮಸ್ತ ಜನತೆಯ, ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಜನರ ಜೊತೆಗೆ ಅತ್ಯಂತ ಆನಂದ ಅನುಭವಿಸಿದ್ದೇನೆ ಎಂದು ಕಾಗೇರಿ ತಿಳಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರೆಲ್ಲರಿಗೂ ಗೌರವಿಸುವ ರಾಜ್ಯ ಸರ್ಕಾರದ ಔದಾರ್ಯವನ್ನು ಕಾಗೇರಿ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next