Advertisement
ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಅಮೃತ ಸಂಗಮದ ಶನಿವಾರ ಜರಗಿದ ಸಮಾರೋಪದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಮಂಗಳೂರು ರಾಮಕೃಷ್ಣ ಮಠ ಆಧ್ಯಾತ್ಮಿಕತೆಯ ಉದ್ದೀಪನದೊಂದಿಗೆ ಸ್ವತ್ಛ ಭಾರತ್, ಶೈಕ್ಷಣಿಕ, ಯುವಜಾಗೃತಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನನ್ಯ ಸಾಧನೆಗಳ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕಾಗೇರಿ ಶ್ಲಾಘಿಸಿ ಅಭಿನಂದಿಸಿದರು.
Related Articles
Advertisement
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ರಾಮ ಕೃಷ್ಣ ಮಠವು ಯುವ ಪೀಳಿಗೆಗೆ ಶಕ್ತಿ ತುಂಬುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಮಾತನಾಡಿ, ಸ್ವತ್ಛತೆ, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರಾಮಕೃಷ್ಣ ಮಠ ಜಿಲ್ಲಾಡಳಿತದೊಂದಿಗೆ ಸಹಯೋಗ ನೀಡುತ್ತಾ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಜಿ.ಪಂ. ಸಿಇಒ ಡಾ| ಕುಮಾರ್ ಮಾತನಾಡಿ, ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಚೆನ್ನೈಯ ಮಹಾವೇದಾಂತ ಸ್ವಾಮಿ ಯತಿಗಳ ಪರವಾಗಿ ತುಮಕೂರಿನ ಡಾ| ಚಂದ್ರಶೇಖರ್ ಅವರು ಪ್ರತಿನಿಧಿಗಳ ಪರವಾಗಿ ಹಾಗೂ ವಿದ್ಯಾ ಶೆಣೈ ಅವರು ಸ್ವಯಂಸೇವಕರ ಪರವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಸ್ವಾಮಿ ಜಿತಕಾಮಾನಂದಜಿ ಅವರು ಮಾತನಾಡಿ ಎಲ್ಲರ ಸಹಕಾರದೊಂದಿಗೆ ಅಮೃತ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ ಎಂದರು. ಸ್ವಾಮಿ ಏಕಗಮ್ಯಾನಂದಜಿ ಅವರು ಉಪಸ್ಥಿತರಿದ್ದರು.
ಯಶಸ್ವಿಯಾಗಿ ಸಂಪನ್ನಎರಡು ದಿನಗಳ ಅಮೃತಸಂಗಮ ಸಮಾರಂಭ ಸಾರ್ಥಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿದೆ. ಸ್ವಾಮಿ ವೀರೇಶ್ವರಾನಂದ ಸಾಧು ನಿವಾಸ ಅಮೃತ ಸದನ ಹಾಗೂ ಶ್ರೀಮಠದ ನೂತನ ಮಹಾದ್ವಾರ ಅಮೃತ ಪಥ ಲೋಕಾರ್ಪಣೆಗೊಂಡಿದೆ ಹಾಗೂ ವಿವೇಕಾನಂದ ತರಬೇತಿ ಕೇಂದ್ರದ ಕಟ್ಟಡ ಅಮೃತ ಭವನಕ್ಕೆ ಭೂಮಿಪೂಜೆ ನೆರವೇರಿದೆ. ಅರ್ಥಪೂರ್ಣ ಗೋಷ್ಠಿಗಳು ನಡೆದಿವೆ ಎಂದು ಸ್ವಾಮಿ ಜಿತಕಾಮಾನಂದಜಿ ಹೇಳಿದರು.