Advertisement

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೀರಾ ಬಾಯ್‌ ಚಾನುಗೆ ಸ್ಪೀಕರ್‌ ಕಾಗೇರಿ ಅಭಿನಂದನೆ

09:57 PM Jul 24, 2021 | Team Udayavani |

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ಮೀರಾ ಬಾಯ್‌ ಚಾನು ಅವರನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದಿಸಿದ್ದಾರೆ.

Advertisement

ಬೆಳ್ಳಿ ಪದಕ ಗೆಲ್ಲುವ ಮೂಲಕ ಮೀರಾ ಬಾಯ್‌ ಚಾನೂ ಲಕ್ಷಾಂತರ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೀರಾ ಬಾಯ್‌ ಚಾನೂ ಅದ್ಭುತ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಅವರ ಪ್ರದರ್ಶನವು ಇತರ ಕ್ರೀಡಾಪಟುಗಳಲ್ಲಿ ಉತ್ಸಾಹತುಂಬಿ, ಗೆಲುವಿನ ಮನೋಭಾವ ಮೂಡಿಸುತ್ತದೆ. ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಭಾರತ ಇನ್ನೂ ಹಲವು ಪದಕಗಳನ್ನು ಎದುರುನೋಡುತ್ತಿದ್ದು, ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಭಾರತದಿಂದ ಬಾಂಗ್ಲಾಗೆ ಜೀವರಕ್ಷಕ ಅನಿಲ : ಮೊದಲ ಬಾರಿಗೆ ರೈಲಲ್ಲಿ ವಿದೇಶಕ್ಕೆ ಆಮ್ಲಜನಕ ಪೂರೈಕೆ

Advertisement

Udayavani is now on Telegram. Click here to join our channel and stay updated with the latest news.

Next