Advertisement

ವಿಶ್ವನಾಥ್‌ ಹೇಳಿಕೆ ಶೋಭೆ ತರುವುದಿಲ್ಲ: ಆಂಜನೇಯ

03:45 AM Jun 25, 2017 | |

ಬೆಂಗಳೂರು: ಕಾಂಗ್ರೆಸ್‌ ತೊರೆದಿರುವ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದುಶ್ಯಾಸನ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಎಚ್‌.ಆಂಜನೇಯ ನಿರಾಕರಿಸಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಇಂತಹ ಹೇಳಿಕೆಗಳು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಅವರು ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಪರ ಹಲವು ಯೋಜನೆ ಜಾರಿಗೊಳಿಸಿದ್ದಲ್ಲದೆ ಉತ್ತಮ ಬಜೆಟ್‌ ಮಂಡಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಭೀಮ, ಅರ್ಜುನ, ಬಬ್ರುವಾಹನ ಇದ್ದ ಹಾಗೆ. ನಾನು ಅವರ ಬೆಂಬಲಿಗ ಆಂಜನೇಯ ಇದ್ದಂತೆ ಎಂದು ಕಾಂಗ್ರೆಸ್‌ನಲ್ಲಿದ್ದಾಗ ವಿಶ್ವನಾಥ್‌ ಹೇಳಿದ್ದರು. ಆದರೆ, ಪಕ್ಷ ತೊರೆದ ನಂತರ ದುಶ್ಯಾಸನ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಪಕ್ಷ ತೊರೆಯುವಾಗ ಇಂತಹ ಹೇಳಿಕೆ ನೀಡುವುದು ಸಹಜ. ಇದಕ್ಕೆ ಮುಖ್ಯಮಂತ್ರಿಗಳೂ ಪ್ರತಿಕ್ರಿಯಿಸಿಲ್ಲ, ನಾನೂ
ಪ್ರತಿಕ್ರಿಯಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next