ಕೊಳ್ಳೇಗಾಲ: ನಗರದ ಬಂಗಾರಶೆಟ್ಟಿ ಪ್ರಸನ್ನ ವಿಶಾಲಾಕ್ಷಿ ಸಮೇತ ವಿಶ್ವನಾಥ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಬಳಿಕ ಆಗಮಿಸಿದ್ದ ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಳಿಕ ಹಂಸ ವಾಹನೋತ್ಸವ ಹಾಗೂ ನಟೇಶೋತ್ಸವ ಜರುಗಿತು. ರಥೋತ್ಸವದ ಅಂಗವಾಗಿ ನಗರದ ವಿವಿಧ ಬಡಾವ ಣೆಯ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ದೇವಸ್ಥಾನದ ಟ್ರಸ್ಟಿಗಳಾದ ಎಸ್.ಪಿ. ಪಶುಪತಿ, ಎ.ಬಿ.ಪರಮೇಶ್ವರಯ್ಯ, ಡಾ.ಸಿ.ಪರಮೇಶ್ವರಯ್ಯ, ಕೆ.ವೇಣು ಗೋಪಾಲ್, ಎಸ್.ದೇವರಾಜು, ಎ.ವಿ. ಚಂದ್ರಶೇಖರ್, ಡಾ.ಎಂ.ಆರ್.ವೀರ ಭದ್ರಶೆಟ್ಟಿ, ವ್ಯವಸ್ಥಾಪಕ ಚನ್ನವೀರಶೆಟ್ಟಿ, ಅರ್ಚಕರಾದ ಆನಂದ್ ದೀಕ್ಷಿತ್, ಕೃಷ್ಣಕುಮಾರ ಶರ್ಮ, ಪಶುಪತಿ ಶರ್ಮ, ನಟರಾಜ ಶರ್ಮ ಕುಮಾರಸ್ವಾಮಿ ಶರ್ಮ, ಸೋಮಶೇಖರ ಶರ್ಮ, ಗಣೇಶ್ ದೀಕ್ಷಿತ್, ಸುರ್ದಶನ್ ಭಟ್, ರಮೇಶ್ ದೀಕ್ಷಿತ, ವೆಂಕಟಾಚಲ ಇತರರು ಇದ್ದರು.
Advertisement
ಗುರುವಾರ ನಗರದ ಅರಕೋಟಾರಂ ಬಂಗಾರಶೆಟ್ಟರ ದೇವಸ್ಥಾನದ ಪ್ರಸನ್ನ ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥಸ್ವಾಮಿ ವಿಗ್ರಹಕ್ಕೆ ಹೂವು ಅಲಂಕಾರದ ಬಳಿಕ ಮಂಗಳಾರತಿ ನೆರವೇರಿತು. ನಂತರ ರಥದಲ್ಲಿ ದೇವರನ್ನು ಅಳವಡಿಸಿದ ಬಳಿಕ ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿ ಭಕ್ತರು ರಥವನ್ನು ಎಳೆದರು.