Advertisement
ಜೆಪಿ ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಪಡೆದ ಅವರು, ನಾಲ್ಕು ದಶಕಗಳ ಕಾಂಗ್ರೆಸ್ ನಂಟು ಕಳಚಿ ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಪಕ್ಷಕ್ಕೆ ಸೇರುತ್ತಿದ್ದೇನೆ. ನನ್ನ ಅಜೆಂಡಾ ಬದಲಾಗಿಲ್ಲ, ಜಂಡಾ ಮಾತ್ರ ಬದಲಾಗಿದೆ ಎಂದು ಹೇಳಿದರು.
ಗೌರವ ಕೊಡ್ತೇವೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಶ್ವನಾಥ್ ಪಕ್ಷಕ್ಕೆ ಬಂದಿರುವುದು ಉತ್ತಮ ಬೆಳವಣಿಗೆ. ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ಮುಖಂಡರ ಜತೆಗೂಡಿ ಕೆಲಸ ಮಾಡಲಿ. ಜೆಡಿಎಸ್‌ಗೆ ರಾಜ್ಯದಲ್ಲಿ ಭವಿಷ್ಯವಿದೆ ಎಂದರು. ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ತತ್ವ – ಸಿದ್ಧಾಂತದ ರಾಜಕಾರಣ ಮಾಡುವ ಎಚ್. ವಿಶ್ವನಾಥ್ ಅವರು ಜೆಡಿಎಸ್ ಸೇರಿರು ವುದಕ್ಕೆ ಸ್ವಾಗತ. ಜೆಡಿಎಸ್ ಪಕ್ಷ ಅವರನ್ನು ಗೌರವಿಸುತ್ತದೆ. ಪಕ್ಷಕ್ಕೆ ಬಂದವರು ಪಶ್ಚಾತ್ತಾಪ ಪಡದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.