Advertisement

ವಿಶ್ವನಾಥ್‌ “ಟಿಪ್ಪು ಪ್ರೀತಿ’ಗೂ ಬಿಜೆಪಿಗೂ ಸಂಬಂಧವಿಲ್ಲ: ಅಶೋಕ್‌

12:58 AM Aug 28, 2020 | mahesh |

ಬೀದರ್: ಟಿಪ್ಪು ಒಬ್ಬ ಕೋಮುವಾದಿ, ಮತಾಂಧ ವ್ಯಕ್ತಿಯೇ ಹೊರತು ದೇಶ ಭಕ್ತನಲ್ಲ. ಟಿಪ್ಪುನನ್ನು ಆದರ್ಶ ಪುರುಷನೆಂದು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ಶಾಸಕ ವಿಶ್ವನಾಥ್‌ ಹೇಳಿಕೆ ವೈಯಕ್ತಿಕ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್‌ ಅವರು ಯಾವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ, ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

Advertisement

ಟಿಪ್ಪು ಕುರಿತ ಹೇಳಿಕೆ ಅಗತ್ಯವಿರಲಿಲ್ಲ : ಈಶ್ವರಪ್ಪ
ವಿಶ್ವನಾಥ್‌ ಅವರ ಟಿಪ್ಪು ಪರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ವಿಶ್ವನಾಥ್‌ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಬಿಜೆಪಿ ನಿಲುವು ಬಹಳ ಸ್ಪಷ್ಟವಾಗಿದೆ. ಆದರೂ ಅವರು ಯಾಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಅವರೊಂದಿಗೆ ಮಾತನಾ ಡುತ್ತೇನೆ. ಟಿಪ್ಪು ಕುರಿತು ವಿಶ್ವನಾಥ್‌ ಹೇಳಿಕೆ ಅಗತ್ಯವಿರಲಿಲ್ಲ ಎಂದರು.

ಸತ್ಯ ಹೇಳಿದ್ದಾರೆ: ಇಬ್ರಾಹಿಂ
ಟಿಪ್ಪು ಸುಲ್ತಾನ್‌ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಸತ್ಯ ಹೇಳಿದ್ದಾರೆ. ಬಿಜೆಪಿಯವರು ರಾಜಕೀಯಕ್ಕಾಗಿ ಟಿಪ್ಪುರನ್ನು ವಿರೋಧಿಸುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ. ಎಂ. ಇಬ್ರಾಹಿಂ ಹೇಳಿದ್ದಾರೆ. ಟಿಪ್ಪು ಬಗ್ಗೆ ಕೇಳಿದರೆ ಶೃಂಗೇರಿ ಶ್ರೀಗಳೇ ಹೇಳುತ್ತಾರೆ. ನಂಜನಗೂಡಿನ ಶ್ರೀಕಂಠೇಶ್ವರನಿಗೆ ಇಂದಿಗೂ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಮಂಗಳಾರತಿ ನಡೆಯುತ್ತದೆ. ಶೃಂಗೇರಿಯಲ್ಲಿ ಸಾವಿರಾರು ಬ್ಯಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದಲೇ ಹಣ ಹೋಗುತ್ತಿತ್ತು ಎಂದು ಅವರು ಹೇಳಿದರು.

ಟಿಪ್ಪು ಹೇಳಿಕೆ: ಅಂತರ ಕಾಪಾಡಿದ ಬಿಜೆಪಿ
ಟಿಪ್ಪು ಕುರಿತು ತನ್ನ ನಾಯಕ ಎಚ್‌. ವಿಶ್ವನಾಥ್‌ ನೀಡಿರುವ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಟಿಪ್ಪು ಕುರಿತು ವಿಶ್ವನಾಥ್‌ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ವಾಗಿದ್ದು, ಇದರಿಂದ ಬಿಜೆಪಿ ದೂರ ಉಳಿಯಲು ಬಯಸುತ್ತದೆ. ಟಿಪ್ಪು ಮತಾಂಧನಾಗಿದ್ದ ಎಂಬುದಕ್ಕೆ ಪಕ್ಷ ಬದ್ಧವಾಗಿದೆ. ಟಿಪ್ಪು ಸುಲ್ತಾನ್‌ ಇಸ್ಲಾಮಿಕ್‌ ಸಾಮ್ರಾಜ್ಯ ಸ್ಥಾಪಿಸುವ ಯತ್ನದಲ್ಲಿ ಕೊಡಗಿನಲ್ಲಿ ಸಾವಿರಾರು ಹಿಂದೂಗಳು ಹಾಗೂ ಮಂಗಳೂರಿನಲ್ಲಿ ಕ್ರೈಸ್ತರ ಮಾರಣಹೋಮ ಮಾಡಿದ್ದನ್ನು ಮರೆಯಲಾಗದು ಎಂದು ರಾಜ್ಯ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next