ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್‌ನ ಆಶ್ರಯದಲ್ಲಿ ಚರ್ಚ್‌ಗೇಟ್‌ನ ಕ್ರೀಡಾಂಗಣದಲ್ಲಿ ಆಯೋಜಿತ ದಿವಂಗತ ವಿಶ್ವನಾಥ ಅಂಚನ್ ಸಹೋದರ, ಕೆಎಸ್‌ಎ ಕಾರ್ಯಕಾರಿ ಸಮಿತಿಯ ಸದಸ್ಯ ರವಿ ಅಂಚನ್ ಪ್ರಾಯೋಜಿತ 2ನೇ ವಿಶ್ವನಾಥ ಅಂಚನ್ ಸ್ಮಾರಕ ಹಿರಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಗುರುವಾರ ಬಾಂದ್ರಾ ಪ್ಯಾಕರ್ಸ್ ವಿರುದ್ಧ ಆಲ್ಫಾ ಅಕಾಡೆಮಿ ತಂಡದ ಪಂದ್ಯವು ಗೋಲು ರಹಿತವಾಗಿ ಡ್ರಾ ಆಯಿತು. ಎರಡನೇ ಪಂದ್ಯದಲ್ಲಿ ಸೆಂಟ್ರಲ್ ರೈಲ್ವೇ ತಂಡ ಪ್ರಿಯದರ್ಶಿನಿ ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿತು. ವಿಜಯಿ ತಂಡದ ಪರವಾಗಿ ಕಾಸಿಫ್ ಜಮಾಲ್-4, ಆಸಿಫ್ ಅನ್ಸಾರಿ ಹಾಗೂ ಅಗಸ್ಟೊ ಡಿಸಿಲ್ವಾ ತಲಾ ಒಂದು ಗೋಲು ಬಾರಿಸಿದರು. ಇನ್ನೊಂದು ಪಂದ್ಯದಲ್ಲಿ ಅತಿಥೇಯ ಕೆ.ಎಸ್.ಎ ತಂಡ ರುದ್ರ ಅಕಾಡೆಮಿ ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿ ಸೆಮಿ ಫೈನಲ್ ಹಂತಕ್ಕೆ ಸ್ಥಾನವನ್ನು ದೃಢಪಡಿಸಿತು. ವಿಜಯಿ ತಂಡದ ಪರವಾಗಿ ಮೆಲ್ವಿನ್ ವಾಜ್-4, ಅಗ್ನೇಲೋ ಡಿ.ಸಿಲ್ವಾ-2 ಗೋಲು ಹೊಡೆದರು. ಮುಂದಿನ ಪಂದ್ಯದಲ್ಲಿ ಏರ್ ಇಂಡಿಯಾ ತಂಡ ಮುಂಬಯಿ ಕಸ್ಟಮ್ಸ್ ತಂಡವನ್ನು ಕೊನೆಯ 5 ನಿಮಿಷ ಉಳಿದಾಗ 1-0 ಗೋಲಿನಿಂದ ಸೋಲಿಸಿತು. ಏರ್ ಇಂಡಿಯಾದ ಪರವಾಗಿ ಸೈಮನ್ ಡಿಸೋಜಾ ಏಕೈಕ ಗೋಲು ಹೊಡೆದು ತಂಡವನ್ನು ಸೆಮಿಫೈನಲ್ ಹಂತಕ್ಕೆ ಕೊಂಡೊಯ್ದರು.
ಬಿ ಗ್ರೂಪಿನಲ್ಲಿ ಬಾಂದ್ರಾ ಪ್ಯಾಕರ್ಸ್, ಆಲ್ಪಾ ಅಕಾಡೆಮಿ ಹಾಗೂ ಗೋಲ್ಡನ್ ಗನ್ನರ್ಸ್ ಆಡಿದ ಪಂದ್ಯದಲ್ಲಿ 0 ಗೋಲಿನಿಂದಾಗಿ ಅದೃಷ್ಟದ ಚೀಟಿ ಬಾಂದ್ರಾ ಪ್ಯಾಕರ್ಸ್ ಕಡೆ ಒಲಿದ ಕಾರಣ ಬಾಂದ್ರಾ ಪ್ಯಾಕರ್ಸ್ ತಂಡ ಸೆಮಿಫೈನಲ್‌ಗೆ ಅರ್ಹವಾಯಿತು. ಲೀಗ್‌ನ ಕಡೆಯ ಪಂದ್ಯದಲ್ಲಿ ಟೈಗರ್ ಫೌಂಡೇಶನ್ ಪ್ರಿಯದರ್ಶಿನಿ ಪಾರ್ಕ್ ತಂಡದ ವಿರುದ್ಧ 3-0 ಗೋಲುಗಳ ಅಂತರದಿಂದ ಗೆದ್ದರೂ ಅದು ಸೆಮಿಫೈನಲ್‌ಗೆ ಅರ್ಹವಾಗಲಿಲ್ಲ. ವಿಜಯಿ ತಂಡದ ಪರವಾಗಿ ರಾಹುಲ್ ರಾಯಚಂದ್ 2, ಪ್ರಾನ್ಸಿಸ್ 1 ಗೋಲು ಹೊಡೆದರು.
ಫೆ.8ರಂದು ಸೆಮಿಫೈನಲ್‌ನಲ್ಲಿ ಸೆಂಟ್ರಲ್ ರೈಲ್ವೇ ವಿರುದ್ಧ ಏರ್ ಇಂಡಿಯಾ, 2ನೇ ಪಂದ್ಯ ಕೆಎಸ್‌ಎ ವಿರುದ್ಧ ಬಾಂದ್ರಾ ಪ್ಯಾಕರ್ಸ್ ನಡುವೆ ನಡೆಯಲಿದೆ. ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದು ಕ್ರೀಡಾಳುಗಳನ್ನು ಪ್ರೋತ್ಸಾಹಿಸಬೇಕಾಗಿ ಸಂಘದ ಕಾರ್ಯಕಾರಿ ಸಮಿತಿ ವಿನಂತಿಸಿದೆ.