Advertisement

ದೇಶದ ಶ್ರೇಷ್ಠತೆ ಎತ್ತಿ ಹಿಡಿದದ್ದು ವಿಶ್ವಕರ್ಮರು

11:38 AM Sep 18, 2018 | Team Udayavani |

ಸೇಡಂ: ತಮ್ಮ ಕುಲಕಸುಬಿನ ಮೂಲಕ ದೇಶದ ಶ್ರೇಷ್ಠತೆಯನ್ನು ವಿಶ್ವಮಟ್ಟದಲ್ಲಿ ಸಾರಿದವರಲ್ಲಿ ವಿಶ್ವಕರ್ಮರು ಪ್ರಮುಖರು ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಹಿರಿಮೆ ಇದೆ. ಸಮಾಜದವರಲ್ಲಿ ಏಕತೆ ಭಾವವಿದೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿರುವ ಸಮಾಜ ವಿಶ್ವಕರ್ಮ ಸಮಾಜವಾಗಿದೆ ಎಂದು ಹೇಳಿದರು.

ವಿಶ್ವಕರ್ಮ ಕುಲದೇವರ ಕುರಿತು ಮಾಹಿತಿ ಹೊಂದುವುದು ಮಾತ್ರವೇ ಅಲ್ಲದೆ ಅವರ ಆಚಾರ ವಿಚಾರಗಳನ್ನು ತಿಳಿದುಕೊಂಡು ಮುನ್ನಡೆಯುವುದು ಅವಶ್ಯಕವಾಗಿದೆ ಎಂದು ಹೇಳಿದರು. 

ವಿಶ್ವಕರ್ಮ ಏಕದಂಡಿಗಿ ಮಠದ ಪೂಜ್ಯ ಕುಮಾರಸ್ವಾಮಿ ಮಾತನಾಡಿದರು. ಕಾಳಿಕಾದೇವಿ ದೇವಸ್ಥಾನದ ಅರ್ಚಕ ದೇವೆಂದ್ರ ಆಚಾರ್‌, ತಾಪಂ ಅಧ್ಯಕ್ಷೆ ಇಂದ್ರಾದೇವಿ ಪೊಲೀಸ್‌ಪಾಟೀಲ, ಎಪಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ ಪಾಟೀಲ, ಜಿಪಂ ಸದಸ್ಯ ದಾಮೋದರರೆಡ್ಡಿ ಪಾಟೀಲ, ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ಶ್ರೀನಿವಾಸ ಕಾಸೋಜು, ದೇವಿಂದ್ರಪ್ಪ ಪಂಚಾಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಯ್ಯ ಸ್ವಾಮಿ, ಜೈಭೀಮ ಊಡಗಿ, ರುದ್ರು ಪಿಲ್ಲಿ, ಮೋನಪ್ಪ ಪೋದ್ದಾರ, ದೇವಿಂದ್ರಪ್ಪ ಬಡಿಗೇರ ಇದ್ದರು. 

ಶಿಕ್ಷಕ ದತ್ತಾತ್ರೇಯ ವಿಶ್ವಕರ್ಮ ಉಪನ್ಯಾಸ ನೀಡಿದರು. ಕು.ರಾಜೇಶ್ವರಿ ಪಂಚಾಳ ಪ್ರಾರ್ಥಿಸಿದರು. ತಹಶೀಲ್ದಾರ
ಸುಬ್ಬಣ್ಣ ಜಮಖಂಡಿ ಸ್ವಾಗತಿಸಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರವಿ ಕುದುರೆನ್‌ ನಿರೂಪಿಸಿ,
ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next