Advertisement

“ವಿಶ್ವಕರ್ಮ ಸಮುದಾಯಕ್ಕೆ ಡಾ|ಆಚಾರ್ಯರಿಂದ ಗೌರವ’

10:11 AM Sep 02, 2017 | |

ಉಡುಪಿ: ಅಭಿವೃದ್ಧಿಯ ಹರಿಕಾರ ಡಾ| ವಿ.ಎಸ್‌. ಆಚಾರ್ಯರು ದೂರದರ್ಶಿತ್ವ ಮತ್ತು ಪ್ರಗತಿಪರ ಚಿಂತನೆಯೊಂದಿಗೆ ವಿಶ್ವಕರ್ಮ ಜಯಂತಿಗೆ ಸರಕಾರಿ ರಜೆ ಘೋಷಿಸುವ ಮೂಲಕ ಹಿಂದುಳಿದ ವಿಶ್ವಕರ್ಮ ಸಮುದಾಯಕ್ಕೆ ಗೌರವವನ್ನು ತಂದುಕೊಟ್ಟರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು. 

Advertisement

ಶುಕ್ರವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಜಿಲ್ಲಾ ಸಮಿತಿಯ ಗೌರವ ಸ್ವೀಕರಿಸಿ ಮಾತನಾಡಿದ ಅವರು, 16 ವರ್ಷ ಸ್ವಾರ್ಥ ರಾಜಕಾರಣಕ್ಕೆ ನನ್ನನ್ನು ಬಳಸಿಕೊಂಡು ವಿಶ್ವಕರ್ಮ ಸಮುದಾಯಕ್ಕೆ ಯಾವುದೇ ರೀತಿಯ ಸೌಲಭ್ಯ ನೀಡದೆ ರಾಜ್ಯ ಕಾಂಗ್ರೆಸ್‌ ಪಕ್ಷ ದ್ರೋಹವೆಸಗಿತು. ಅಹಿಂದ ಮಂತ್ರ ಜಪಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರಕಾರ ವಿಶ್ವಕರ್ಮ ಸಮುದಾಯ ಸಹಿತ ಹಿಂದುಳಿದ ವರ್ಗವನ್ನು ಕಡೆಗಣಿಸಿದೆ. ಇಂದು ಎಲ್ಲ ವರ್ಗಗಳ ಜನತೆಯ ಶ್ರೇಯೋಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಮಿಷನ್‌-150 ಸಕಾರಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಪ್ರಧಾನಿ ಮೋದಿಯವರ ಆಡಳಿತ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪರಿಣಾಮಕಾರಿ ನೀತಿ ನಿರೂಪಣೆ ಪಕ್ಷಕ್ಕೆ ವರದಾನವಾಗಿದೆ ಎಂದರು. 

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಾಯಕರಾದ ಕೆ.ರಘುಪತಿ ಭಟ್‌, ಕೆ.ಉದಯ ಕುಮಾರ್‌ ಶೆಟ್ಟಿ, ಸತ್ಯಜಿತ್‌,  ಬಾಕೂìರು ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕೆ¤àಸರ ಶ್ರೀಧರ ಆಚಾರ್ಯ, ಕಟಪಾಡಿ ಆನೆಗುಂದಿ ಸಂಸ್ಥಾನದ ಪ್ರ.ಕಾರ್ಯದರ್ಶಿ ನಾಗರಾಜ್‌ ಆಚಾರ್ಯ, ಉಡುಪಿ ಕಾಪೆìಂಟರ್ಸ್‌ ಯೂನಿಯನ್‌ ಅಧ್ಯಕ್ಷ ಶ್ರೀಧರ ಆಚಾರ್ಯ ಮೂಡುಬೆಟ್ಟು ಉಪಸ್ಥಿತರಿದ್ದರು. ಬಿಜೆಪಿ ನಗರ ಪ್ರ. ಕಾರ್ಯದರ್ಶಿ ಜಗದೀಶ್‌ ಆಚಾರ್ಯ ಸ್ವಾಗತಿಸಿ ಅಧ್ಯಕ್ಷ ಪ್ರಭಾಕರ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next