ಸೊಲ್ಲಾಪುರ: ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ನಿಮಿತ್ತ ಸೊಲ್ಲಾಪುರ ಜಿಲ್ಲಾ ಬಸವ ಅನುಭವ ಮಂಟಪ ಮತ್ತು ಬಸವ ಸರ್ಕಲ್ ಇವುಗಳ ಸಹಯೋಗದಲ್ಲಿ ಮೇ 8ರಂದು ಸಂಜೆ 5ರಿಂದ ಅಕ್ಕಲ್‌ಕೋಟೆಯ ಸಜೇìರಾವ್ ಜಾಧವ್ ಸಭಾಗೃಹದಲ್ಲಿ ಮೊದಲನೆಯ ವಿಶ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಂಯೋಜಕ ಸ್ವಾಮಿನಾಥ ಹರವಾಳಕರ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಸುಮಾರು 21
ಶರಣರಿಗೆ ಬಸವರತ್ನ ಪ್ರಶಸ್ತಿ ನೀಡಿಗೌರವಿಸಲಾಗುವುದು. ಮಾಜಿ ಗೃಹರಾಜ್ಯ ಸಚಿವ ಸಿದ್ಧರಾಮ ಮೆØàತ್ರೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ರಾವ್ ಡೋಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಶಾಸಕ ವಿಶ್ವನಾಥ ಚಾಕೋತೆ, ಮಾಜಿ ಶಾಸಕ ಶಿವಶರಣ ಪಾಟೀಲ್, ತಾಲೂಕು ಪಂಚಾಯತ್ ಅಧ್ಯಕ್ಷ ಸುರೇಖಾ ಕಾಟಗಾವ, ನಗರಾಧ್ಯಕ್ಷೆ ಶೋಭಾ ಖೇಡಗಿ, ದೀಪ್ತಿ ಕೇಸೂರ, ವರ್ಷಾ ಠೊಂಬರೆ, ಉಜ್ವಲಾ ಯೆಳ್ಳೂರೆ, ಜಗನ್ನಾಥ ಹುಕ್ಕೇರಿ, ಪುಷ್ಪಾ ಗುಂಗೆ, ಮೀನಾ ಥೋಬಡೆ, ಸುರೇಖಾ ಬಾವಿ, ಸಂಧ್ಯಾ ವಿಪ್ಪರಗಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಮುಗಳಿ ಬಸವಪೀಠದ ಪೂಜ್ಯ ಮಹಾನಂದಾ ಹಿರೇಮಠ, ಅಕ್ಕಲ್‌ಕೋಟೆ ವಿರಕ್ತ ಮಠದ ಪೂಜ್ಯ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಪವಿತ್ರಾ ಮಲಗೋಂಡಾ, ಸೂರ್ಯಕಾಂತ ಕಡಬಗಾವಕರ್, ಆನಂದ ಗಂದಗೆ, ಸುಧೀರ್ ಮಾಳ ಶೆಟ್ಟಿ, ವಿಜಯ ಮಲಂಗ, ಬಸವರಾಜ ಬಿರಾಜದಾರ, ಮಳಸಿದ್ಧ ಕಸ್ತೂರೆ, ಬಸವರಾಜ ಹತ್ತೆ, ಅಶ್ಪಾಕ್ ಖೀಸ್ತಕೆ, ಲಕ್ಷ್ಮೀಕಾಂತ ರೋಡಗೆ, ಸ್ವಾಮಿನಾಥ ಬಂಡೆಮನಿ, ಚಂದ್ರಕಾಂತ ಕುಂಭಾರ, ಶಿವರಾಜ ಶೇಳಕೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದಲ್ಲಿ ಸುರೇಖಾ ಹೋಳಿಕಟ್ಟಿ, ಮಹಾನಂದಾ ಉಡಚಣ, ಮಲ್ಲಮ್ಮಾ ಪಸಾರೆ, ಸಂಗೀತಾ ಚನ ಶೆಟ್ಟಿ, ಸುರೇಖಾ ಥಂಬ, ಗಂಗುಬಾಯಿ ಸ್ವಾಮಿ, ಜ್ಯೋತಿ ಝೀಪರೆ, ಜ್ಯೋತಿ ಹೋರಪೇಟಿ, ಯೋಗೇಶ ಕಬಾಡೆ, ವಿರೂಪಾಕ್ಷ ಕುಂಭಾರ, ಶಿವಪುತ್ರ ಹಳಗೋದೆ, ರಾಜಶೇಖರ ಉಂಬರಾಣಿಕರ, ಅಭಿಜೀತ ಲೋಕೆ, ವಿದ್ಯಾಧರ ಗುರವ, ಸಂಜಯ ಭಾಗಾನಗರೆ, ರಾಮು ಪಾಟೀಲ್, ನಾಗೇಶ ಕೋನಾಪುರೆ, ವಸಂತ ದೇಢೆ, ನರೇಂದ್ರ ಪಾಟೀಲ್, ಕಲ್ಯಾಣಿ ಛಕಡೆ, ಉತ್ತಮ ಇಂಗಳೆ ಸೇರಿದಂತೆ ಸುಮಾರು 21 ಶರಣ-ಶರಣೆಯರಿಗೆ ಬಸವರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಯೋಜಕ ಸ್ವಾಮಿನಾಥ ಹರವಾಳಕರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.