Advertisement

ಸೊಲ್ಲಾಪುರದಲ್ಲಿ ವಿಶ್ವಧರ್ಮ ಸಮ್ಮೇಳನ ಮತ್ತು ಬಸವ ರತ್ನ ಪ್ರಶಸ್ತಿ ಪ್ರದಾನ

02:52 PM May 11, 2019 | Vishnu Das |

ಸೊಲ್ಲಾಪುರ: ಬಸವಣ್ಣನವರು ವಚನಗಳ ಮೂಲಕ ವಿಶ್ವ ಸಮುದಾಯಕ್ಕೆ ನೀತಿ ಸಂಹಿತೆ, ಸ್ವಾಸ್ಥ್ಯ ಸಮಾಜಕ್ಕೆ ಅಗತ್ಯವಾದ ಸೂತ್ರಗಳನ್ನು ನೀಡಿದ್ದಾರೆ. ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿದರೆ ಸಾಲದು ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ್‌ ರಾವ್‌ ಡೋಬಳೆ ಹೇಳಿದರು.

Advertisement

ಅಕ್ಕಲ್‌ಕೋಟೆ ನಗರದ ಸಜೇìರಾವ ಜಾಧವ ಸಭಾಗೃಹದಲ್ಲಿ ವಿಶ್ವಗುರು ಬಸವ ಜಯಂತಿ ಅಂಗವಾಗಿ ಸೊಲ್ಲಾಪುರ ಜಿಲ್ಲಾ ಬಸವ ಅನುಭವ ಮಂಟಪ ಮತ್ತು ಮಹಾತ್ಮಾ ಬಸವೇಶ್ವರ ಸರ್ಕಲ್‌ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವಧರ್ಮ ಸಮ್ಮೇಳನ ಮತ್ತು ಬಸವರತ್ನ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ ಬಸವಣ್ಣ ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು ಅದನ್ನು ನಿರಾಕರಿಸಿ ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂದು ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ ಬಸವನಿಲ್ಲದ ಮನೆಯಲ್ಲಿ ನಾನು ಇರಲಾರೆ ಎಂದು ಹೇಳಿ ತಮ್ಮನ ಪರ ನೀಂತಿರುವುದು ಆದರ್ಶಮಯವಾದುದು. ಅಲ್ಲದೇ ಬಸವಣ್ಣ ಮುಂದೆ ಕಲ್ಯಾಣದ ಬಿಜ್ಜಳನ ಅರ್ಥಮಂತ್ರಿಯಾಗಿ ಮಾಡಿದ ಕಾರ್ಯ ಅನುಕರಣೀಯ. ಜೊತೆಗೆ ಮಹಿಳೆಗೂ ಪುರುಷನ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಜೀವನದುದ್ದಕ್ಕೂ ಸಾಕ್ಷಿಯಾದರು. ಕಲ್ಯಾಣದ ಹನ್ನೆರಡು ಸಾವಿರ ಸೂಳೆಯರನ್ನು ಶರಣೆಯರನ್ನಾಗಿಸಿ ಅವರಿಗೆ ಶರಣ ಸಂಸ್ಕಾರ ನೀಡಿ ವಚನ ರಚಿಸಿ ವಚನಗಾರ್ತಿಯರಾಗಿ ಮತ್ತು ವೈರಾಗ್ಯದ ಖಣಿಯಾಗಿಸಿ ಅಣ್ಣ ಬಸವಣ್ಣನಾಗುತ್ತಾರೆ ಎಂದು ಹೇಳಿದರು.

ಮಾಜಿ ಗೃಹರಾಜ್ಯ ಸಚಿವ ಸಿದ್ಧರಾಮ ಮೆØàತ್ರೆ ಮಾತನಾಡಿ, ಸುಮಾರು ವರ್ಷಗಳಿಂದಲೂ ಬಸವಣ್ಣನವರ ಜಯಂತಿ ಯನ್ನು ಎಲ್ಲರೂ ಆಚರಿಸುತ್ತಾರೆ. ಅವರ ಪ್ರತಿಮೆಗೆ ಪೂಜೆ ಸಲ್ಲಿಸಿದರೆ ಸಾಲದು ಅವರ ಆಚಾರ-ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ಬದುಕನ್ನು ನಾವೇಲ್ಲರೂ ಅರಿಯಬೇಕು. ಅವರ ವಿಚಾರಗಳ ಬೆಳಕಿನಲ್ಲಿ ನಾವು ಬದುಕಬೇಕು. ಭೇದ-ಭಾವಗಳನ್ನು ಮರೆತು ನಾವೆಲ್ಲರೂ ಒಂದಾಗಿ ಬದುಕಬೇಕು ಎಂದು ಹೇಳಿದರು.

ಮಾಜಿ ಶಾಸಕ ಶಿವಶರಣ ಪಾಟೀಲ್‌ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಯುಗ ಪುರುಷ ಜಗಜ್ಯೋತಿ ಬಸವಣ್ಣ. ಅವರ ವಚನಗಳ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್‌ ದಾರ್ಶನಿಕ. ಅವರ ತತ್ವ ಸಿದ್ಧಾಂತಗಳನ್ನು 12ನೇ ಶತಮಾನದಲ್ಲಿಯೇ ಅನುಷ್ಠಾನಗೊಳಿಸಿದರೆ, ದೇಶದಲ್ಲಿ ಜಾತಿ-ಭೇದ, ಅಸಮಾನತೆ, ಗಂಡು-ಹೆಣ್ಣು ಎಂಬ ತಾರತಮ್ಯವೇ ಇರುತ್ತಿರಲಿಲ್ಲ ಎಂದು ಹೇಳಿದರು.

ಮುಗಳಿ ಬಸವ ಮಂಟಪದ ಪೂಜ್ಯ ಮಹಾನಂದಾತಾಯಿ ಹಿರೇಮಠ ಮಾತನಾಡಿ, ಅಸೃಶ್ಯತೆಯ ಹೆಸರಲ್ಲಿ ದೇವಾಲಯಗಳ ಪ್ರವೇಶ ನಿರ್ಬಂಧವಿರುವಾಗ ಕೆಳ ಸಮಾಜಕ್ಕೆ ಅಪಮಾನ, ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಬಸವಣ್ಣನವರ ನೇತೃತ್ವದ ಶರಣರ ಸಾಮಾಜಿಕ ಹೋರಾಟ ಚಾರಿತ್ರಿಕ. ಧರ್ಮ, ದೇವರ ಹೆಸರಿನಲ್ಲಿ ಆಗುತ್ತಿದ್ದ ಶೋಷಣೆಯಿಂದ ಮುಗ್ಧ ಜನರನ್ನು ಮುಕ್ತಗೊಳಿಸಲು ದೇವಾಲಯವೆಂಬ ಜಂಗಮ ತತ್ವವನ್ನು ಪ್ರತಿಪಾದಿಸಿದರು ಎಂದು ನುಡಿದರು.

Advertisement

ಅಕ್ಕಲ್‌ಕೋಟೆ ವಿರಕ್ತ ಮಠದ ಪೂಜ್ಯ ಬಸವಲಿಂಗ ಶ್ರೀಗಳು ಮತ್ತು ಮುಗಳಿ ಬಸವ ಮಂಟಪದ ಪೂಜ್ಯ ಮಹಾನಂದತಾಯಿ ಹಿರೇಮಠ ಇವರ ಸಾನಿಧ್ಯದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ 21 ಶರಣ-ಶರಣೆಯರಿಗೆ ಬಸವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಲೂಕು ಪಂಡಿತ್‌ ಅಧ್ಯಕ್ಷ ಸುರೇಖಾ ಕಾಟಗಾವ, ಮೈಂದರ್ಗಿ ನಗರಾಧ್ಯಕ್ಷ ದೀಪ್ತಿ ಕೇಸೂರ, ವರ್ಷಾ ಠೊಂಬರೆ, ಉಜ್ವಲಾ ಯೆಳ್ಳೂರೆ, ಪುಷ್ಪಾ ಗುಂಗೆ, ಮೀನಾ ಥೋಬಡೆ, ಸುರೇಖಾ ಬಾವಿ, ಸಂಧ್ಯಾ ವಿಪ್ಪರಗಿ, ಪವಿತ್ರಾ ಮಲಗೊಂಡಾ, ಸಂಜಯ ದೇಶಮುಖ್‌, ಸುಧೀರ್‌ ಮಾಳಶೆಟ್ಟಿ, ಬಸವರಾಜ ಬಿರಾಜದಾರ, ವಿಜಯ ಮಲಂಗ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಡಾ| ಸುವರ್ಣಾ ಮಲಗೊಂಡಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶರಣ ಅಚಲೇರ ನಿರೂಪಿಸಿದರು. ಸ್ವಾಮಿನಾಥ ಹರವಾಳಕರ ವಂದಿಸಿದರು.

ಬಸವರತ್ನ ಪ್ರಶಸ್ತಿ ಪ್ರದಾನ
ಸುರೇಖಾ ಹೋಳಿಕಟ್ಟಿ, ಮಹಾನಂದಾ ಉಡಚಣ, ಮಲ್ಲಮ್ಮಾ ಪಸಾರೆ, ಸಂಗೀತಾ ಚನಶೆಟ್ಟಿ, ಸುರೇಖಾ ಥಂಬ, ಗಂಗುಬಾಮಿ ಸ್ವಾಮಿ, ಜ್ಯೋತಿ ಝೀಪರೆ, ಜ್ಯೋತಿ ಹೋರಪೇಟಿ, ಯೋಗೇಶ ಕಬಾಡೆ, ವಿರುಪಾಕ್ಷ ಕುಂಭಾರ, ಶಿವಪುತ್ರ ಹಳಗೋದೆ, ರಾಜಶೇಖರ ಉಂಬರಾಣಿಕರ, ಅಭಿಜೀತ ಲೋಕೆ, ವಿದ್ಯಾಧರ ಗುರವ್‌, ಸಂಜಯ ಭಾಗಾನಗರೆ, ರಾಮು ಪಾಟೀಲ್‌, ನಾಗೇಶ ಕೋನಾಪುರೆ, ವಸಂತ್‌ ದೇಢೆ, ನರೇಂದ್ರ ಪಾಟೀಲ್‌, ಕಲ್ಯಾಣಿ ಛಕಡೆ, ಉತ್ತಮ ಇಂಗಳೆ ಸೇರಿದಂತೆ 21 ಶರಣ-ಶರಣೆಯರಿಗೆ ಬಸವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next