ಮುಂಬಯಿ, ಸೆ. 17: ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಇದರ ವಾರ್ಷಿಕ ಶ್ರೀ ವಿಶ್ವಕರ್ಮ ಮಹೋತ್ಸವವು ಸೆ. 17ರಂದು ಅಂಧೇರಿ ಪಶ್ಚಿಮದ ಭವನ್ಸ್ ಕಾಲೇಜಿನ ಸಮೀಪದ ಜಾನಕಿಬಾೖ ಸಭಾಗೃಹದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.
ಮುಂಜಾನೆ 5ರಿಂದ ವಿಶ್ವಕರ್ಮ ಹೋಮ ಪ್ರಾರಂಭಗೊಂಡಿತು. ಬೆಳಗ್ಗೆ 9 ರಿಂದ ಭಜನ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಶ್ರೀ ವಿಶ್ವಕರ್ಮ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ, ವಿಶ್ವಕರ್ಮ ಅಸೋಸಿಯೇಶನ್ ಯುವ ವಿಭಾಗ, ವಿಶ್ವಕರ್ಮ ಅಸೋಸಿಯೇಶನ್ ಮಹಿಳಾ ವಿಭಾಗ, ಶ್ರೀ ವಿಶ್ವಕರ್ಮ ಅಸೋಸಿ ಯೇಶನ್ ಮಹಿಳಾ ಬಳಗ ಡೊಂಬಿವಲಿ, ಶ್ರೀ ಲಲಿತಾಂಬಾ ಭಜನ ಮಂಡಳಿ ಬೊರಿವಲಿ, ಶ್ರೀ ವಿಶ್ವಕರ್ಮ ಕಾಳಿಕಾಂಬಾ ಭಜನವೃಂದ ಮುಂಬಯಿ ಸಂಸ್ಥೆಗಳು ಭಾಗವಹಿಸಿದವು.
ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆ ಜರಗಿತು. ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಅಪರಾಹ್ನ ಸಮಾಜದ ಐದರಿಂದ 15 ವರ್ಷದೊಳಗಿನ ಮಕ್ಕಳಿಗೆ ಶಾಸ್ತ್ರೀಯ ನೃತ್ಯ, ಛದ್ಮವೇಷ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಪರಾಹ್ನ 3.30 ರಿಂದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಇವರಿಂದ ಶ್ರೀ ಶನೀಶ್ವರ ಮಹಾತ್ಮೆ ಹರಿಕಥಾ ಕಾಲಕ್ಷೇಪ ಜರಗಿತು. ಸಂಜೆ 5 ರಿಂದ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ಮಹಾಮಂಗಳಾರತಿ ನೆರವೇರಿತು.
ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಸದಾನಂದ ಎನ್. ಆಚಾರ್ಯ, ಉಪಾಧ್ಯಕ್ಷ ರವೀಶ್ ಜಿ. ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಮಾರ್, ಹರೀಶ್ ಜಿ. ಆಚಾರ್ಯ, ಗೌರವ ಕೋಶಾಧಿಕಾರಿ ಬಾಬುರಾಜ್ ಎಂ. ಆಚಾರ್ಯ, ಜತೆ ಕೋಶಾಧಿಕಾರಿ ಸುಧೀರ್ ಜೆ. ಆಚಾರ್ಯ, ಸಮಿತಿಯ ಸದಸ್ಯರಾದ ಮಾಜಿ ಅಧ್ಯಕ್ಷ ನಿಟ್ಟೆ ದಾಮೋದರ ಆಚಾರ್ಯ, ಜಿ. ಟಿ. ಆಚಾರ್ಯ, ಕೆ. ಪಿ. ಚಂದ್ರಯ್ಯ ಆಚಾರ್ಯ, ಉಪೇಂದ್ರ ಎ. ಆಚಾರ್ಯ, ಪ್ರಭಾಕರ ಎಸ್. ಆಚಾರ್ಯ, ಪ್ರದೀಪ್ ಆಚಾರ್ಯ, ರಮೇಶ್ ವಿ. ಆಚಾರ್ಯ, ರಾಮ್‌ದಾಸ್ ಆಚಾರ್ಯ, ಮಧುಕರ್ ಆಚಾರ್ಯ ಅವರು ಉಪಸ್ಥಿತಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.
ವಿಶೇಷ ಆಮಂತ್ರಿತರಾದ ಸುರೇಶ್ ಆಚಾರ್ಯ, ಎಂ. ಎ. ಆಚಾರ್ಯ, ಪಿ. ಜೆ. ಆಚಾರ್ಯ, ಮಾಧವ ಆಚಾರ್ಯ, ಶರತ್ ಆಚಾರ್ಯ, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯ ಕೃಷ್ಣ ವಿ. ಆಚಾರ್ಯ, ಸುಧೀರ್ ಆಚಾರ್ಯ, ನ್ಯಾಯವಾದಿ ಸುಧಾಕರ್ ಆಚಾರ್ಯ, ಮಹಿಳಾ ವಿಭಾಗದ ಶೋಭಾ ಆಚಾರ್ಯ, ಉಷಾ ಜಿ. ಆಚಾರ್ಯ, ಕಲ್ಪನಾ ಸಿ. ಆಚಾರ್ಯ, ಮಂಜುಳಾ ಆರ್. ಆಚಾರ್ಯ, ಯುವ ವಿಭಾಗದ ರಾಜೇಶ್ ಎಸ್. ಆಚಾರ್ಯ, ರಾಜೇಶ್ ಎ. ಆಚಾರ್ಯ, ಸುದೇಶ್ ಆಚಾರ್ಯ, ಭವ್ಯಾ ಆರ್. ಆಚಾರ್ಯ, ಆಂತರಿಕ ಲೆಕ್ಕ ಪರಿಶೋಧಕರಾದ ಅರುಣ್ ಪಿ. ಆಚಾರ್ಯ ಹಾಗೂ ಸಮಿತಿಯ ಸದಸ್ಯರು ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು, ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.