Advertisement
ಮಂಗಳವಾರ ವಿಶ್ವಹಿಂದೂ ಪರಿಷತ್‌ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ವ್ರತಾಚರಣೆಯ ಬಗ್ಗೆ ಮೊಯ್ಲಿಯವರು ಲಘುವಾಗಿ ಮಾತನಾಡಿದ್ದಾರೆ. ‘ಮೋದಿಯವರು ಉಪವಾಸ ಮಾಡದೆ ಗರ್ಭಗುಡಿಗೆ ಹೋಗಿದ್ದಾರೆ. ಇದರಿಂದ ಆ ಸ್ಥಳ ಅಪವಿತ್ರವಾಗುತ್ತದೆ, ಮಂದಿರ ಲೋಕಾರ್ಪಣೆ ಮತ್ತು ಪ್ರತಿಷ್ಠಾಪನೆಗೆ ಮೋದಿಯವರನ್ನು ಗರ್ಭಗುಡಿಗೆ ಬಿಡಬಾರದಿತ್ತು’ ಎಂಬುದಾಗಿ ಮೊಯ್ಲಿಯವರು ಹೇಳಿಕೆ ನೀಡಿದ್ದಾರೆ. ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಬರೆದವರೇ ಈ ರೀತಿ ಹೇಳಿಕೆ ನೀಡಬಾರದಿತ್ತು. ಇದು ಸಮಸ್ತ ಭಾರತೀಯರಿಗೆ ಮಾಡಿದ ಅವಮಾನ. ಮಾತ್ರವಲ್ಲದೆ ಹಿಂದುಳಿದ ವರ್ಗದ ಮೋದಿಯವರ ಜಾತಿಯನ್ನು ನಿಂದಿಸಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ.
ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಮಾತನಾಡಿ, ಮಂಡ್ಯದ ಕೆರಗೋಡ ಗ್ರಾಮದಲ್ಲಿ ಊರಿನ ರಾಮಭಕ್ತರು ಹಾರಿಸಿದ ಹನುಮಧ್ವಜವನ್ನು ಸರಕಾರ ತೆಗೆಸಿರುವುದು ಖಂಡನೀಯ. ಹನುಮಧ್ವಜ ಹಾರಿಸಲು ಅನುಮತಿ ಪಡೆಯಲಾಗಿತ್ತು. ಆದರೆ ಸರಕಾರ ಓಟುಬ್ಯಾಂಕ್ ರಾಜಕೀಯಕ್ಕಾಗಿ ಅದನ್ನು ತೆಗೆಸಿದೆ. ಕೂಡಲೆ ಹನುಮಧ್ವಜ ಹಾರಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಬೀದಿ ಬೀದಿಗಳಲ್ಲಿ ಹನುಮಧ್ವಜ ಅಭಿಯಾನ ನಡೆಸಲಾಗುವುದು. ರಾಷ್ಟ್ರಧ್ವಜಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದನ್ನು ಹಾಕುವುದಕ್ಕೂ ಒಂದು ನೀತಿಸಂಹಿತೆ, ನಿಯಮವಿದೆ. ಸರಕಾರ ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದೆ. ಇದಕ್ಕೆ ಕಾರಣರಾದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಉಪಸ್ಥಿತರಿದ್ದರು.
Related Articles
Advertisement