Advertisement

ಶ್ರೀಕೃಷ್ಣ ಮಠದಲ್ಲಿ “ವಿಶ್ವಾರ್ಪಣಂ’

10:46 AM Jun 18, 2019 | Team Udayavani |

ಉಡುಪಿ: ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಷಷ್ಠಿಪೂರ್ತಿ ಪ್ರಯುಕ್ತ ಸೋಮವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿರಾಟಪರ್ವ ಪ್ರವಚನ ಮಂಗಲ ಮತ್ತು ಗುರುವಂದನೆ “ವಿಶ್ವಾರ್ಪಣಂ’ ನಡೆಯಿತು.

Advertisement

ಅದಮಾರು ಶ್ರೀಪಾದರು ಈ ತನಕ ರಾಘವೇಂದ್ರ ವಿಜಯ, ಶ್ರೀಕೃಷ್ಣ ಲೀಲಾಮೃತ ವಿಷಯಗಳ ಬಗ್ಗೆ ನೀಡಿದ ಪ್ರವಚನಗಳನ್ನು ಸಂಗ್ರಹಿಸಿ ಪಲಿಮಾರು ಮಠದ ತತ್ತ ಸಂಶೋಧನ ಸಂಸತ್‌ನಿಂದ ಪ್ರಕಾಶಿಸಲ್ಪಟ್ಟ 2 ಕೃತಿಗಳು, ಶ್ರೀಪಾದರ ಸಂಸ್ಥೆಗಳ, 60 ವರ್ಷಗಳ ಸಾಧನೆಗಳ ಚಿತ್ರಗಳು ಮತ್ತು ವಿದ್ವಾಂಸರ, ಅಭಿಮಾನಿಗಳ ಲೇಖನವಿರುವ ಸ್ಮರಣ ಸಂಚಿಕೆ ಪುಸ್ತಕಗಳನ್ನು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.

ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ತಿಳಿವಳಿಕೆ ಕಡಿಮೆ ಇದ್ದರೆ ಇನ್ನೊಬ್ಬರಲ್ಲಿ ಕೇಳಬೇಕು. ಭಗವಂತನ ಅರಿವಿನ ಜ್ಞಾನ ಪಡೆಯಲು ಎಲ್ಲರೂ ಹಂಬಲಿಸಬೇಕು. ದೇವರ ಅನುಗ್ರಹದಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತಿದೆ ಎಂದರು. ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜತೆ ಪಾಠ ಓದುವ ಕಾಲದಿಂದ ಅವರ ಜತೆಗಿದ್ದ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅಭಿನಂದಿಸಿ ಅವರ ವಾಕ³ಟುತ್ವ, ಸಿದ್ಧಾಂತ ನಿಷ್ಠೆಯನ್ನು ಕೊಂಡಾಡಿದರು. ಸನ್ಯಾಸಿಗಳಿಗೆ ಪಾಠ- ಪ್ರವಚನ ಬಹಳ ಮುಖ್ಯ. ಸ್ವಾಮೀಜಿ ಯವರು ಪ್ರವಚನದಲ್ಲಿ ಅತೀವ ಸಾಧನೆಯ ಜತೆ ದಾನಧರ್ಮಗಳನ್ನೂ ಮಾಡುತ್ತಿದ್ದಾರೆ ಎಂದರು.

ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು, ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ರಘುಪತಿ ಭಟ್‌ ಉಪಸ್ಥಿತರಿದ್ದರು. ತಣ್ತೀ ಸಂಶೋಧನ ಸಂಸತ್‌ ನಿರ್ದೇಶಕ ಡಾ| ವಂಶಿ ಕೃಷ್ಣಾಚಾರ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next