Advertisement
ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಮಧ್ಯಾಹ್ನ 12ರಿಂದ ಶ್ರೀ ಮಾತೆಯರಿಗೆ ವಿಷು ಕಣಿ ಸೇವೆಯು ನಡೆಯಿತು.
ಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ ವಿಷು ಕಣಿ ಇಟ್ಟು , ಮಧ್ಯಾಹ್ನ ದೇವರಿಗೆ ಅಲಂಕಾರ ಮಾಡಿ ಮಹಾಪೂಜೆಯ ಬಳಿಕ ಹೊಸ ಪಂಚಾಂಗವನ್ನು ಓದಲಾಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶ್ರೀ ಕೃಷ್ಣ ದೇವರ ಮೂರ್ತಿಯ ಮುಂಭಾಗದಲ್ಲಿ ವಿಷು ಕಣಿ ಇಡಲಾಯಿತು. ಮೂಡಬಿದಿರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಣಿ ಪೂಜೆ, ಉಳೆಪಾಡಿ ಶ್ರೀ ದುರ್ಗಾ
ಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದಲ್ಲಿ ವಿಷುಕಣಿ ಆರಾಧನೆ ನೆರವೇರಿತು.
Related Articles
Advertisement