Advertisement

ಗಡಿನಾಡಲ್ಲಿ ವಿಷ್ಣುವರ್ಧನ್‌ ಪುತ್ಥಳಿ

11:58 AM Sep 08, 2019 | Lakshmi GovindaRaju |

ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಸೆ.18 ರಂದು ರಾಜ್ಯಾದ್ಯಂತ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಾಯಕನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಲು ಸಜ್ಜಾಗಿದ್ದಾರೆ. ಪ್ರತಿ ವರ್ಷವೂ ಸಹ ಅಭಿಮಾನಿಗಳು ವಿಶೇಷವಾಗಿ ಆಚರಣೆ ಮಾಡುತ್ತಲೇ ಬಂದಿದ್ದಾರೆ. ಈ ವರ್ಷ ಕೂಡ ಅವರ ಅಪಾರ ಅಭಿಮಾನಿಗಳು ಪುತ್ಥಳಿ ನಿರ್ಮಾಣ ಮಾಡಿ ಅನಾವರಣಕ್ಕೆ ಸಜ್ಜಾಗಿದ್ದಾರೆ. ಅದರಲ್ಲೂ ಗಡಿನಾಡಲ್ಲಿ ವಿಷ್ಣುವರ್ಧನ್‌ ಅವರ ಪುತ್ಥಳಿ ಅನಾವರಣ ಮಾಡುತ್ತಿರುವುದು ವಿಶೇಷ.

Advertisement

ಹೌದು, ಕೋಲಾರ ಜಿಲ್ಲೆಯ ಅಹನ್ಯ ಎಂಬ ಗ್ರಾಮದಲ್ಲಿ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಪುತ್ಥಳಿ ನಿರ್ಮಾಣ ಮಾಡಿದ್ದು, ಸೆ.18ರ ಬೆಳಗ್ಗೆ 8 ಗಂಟೆಗೆ ಅನಾವರಣ ಮಾಡಲಿದ್ದಾರೆ. ವಿಷ್ಣುರ್ವಧನ್‌ ಅವರ ಅಪ್ಪಟ ಅಭಿಮಾನಿ ಭರತ್‌ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಪುತ್ಥಳಿ ಅನಾವರಣಗೊಳ್ಳಲಿದೆ. ಎಲ್ಲೆಡೆ ಪುತ್ಥಳಿಗಳು ಇವೆಯಾದರೂ, ಗಡಿನಾಡಲ್ಲಿ ಇದೇ ಮೊದಲ ಸಲ ಅನಾವರಣವಾಗುತ್ತಿರುವುದು ವಿಶೇಷ.

ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದ ಅಂಗವಾಗಿ, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಡೆಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಮೂರು ದಿನಗಳ ಕಾಲ ರಂಗನಮನ ಕಾರ್ಯಕ್ರಮ ಕೂಡ ನಡೆಯಲಿದೆ. ಸೆ.18 ರಂದು ವಿಶೇಷವಾಗಿ ವಿಷ್ಣುವರ್ಧನ್‌ ಅವರ ಸ್ಮಾರಕ ಬಳಿ ಪೂಜೆ ನಡೆಸುವ ಅಭಿಮಾನಿಗಳು, ಅಂದು ಅಭಿಮಾನಿಗಳಿಗೆ ಸಿಹಿ ವಿತರಿಸಿ, ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next