Advertisement
ಜೀವನ ಕೇವಲ ಅರ್ಥಹೀನ ಕಾಲಘಟ್ಟವಲ್ಲ. ಕೆಲವರು ಅತಿ ಆಸೆ ಧೂರ್ತತನ, ಹಣಬಲ ಎಲ್ಲರನ್ನೂ ದಮನಿಸುವ ತೋಳ್ಬಲ ಇತ್ಯಾದಿಗಳಿಂದ ಹೆಚ್ಚಿದ ಜನರನ್ನು ತೊಂದರೆಗೆ ತಳ್ಳುತ್ತಾರೆ.
Related Articles
Advertisement
ಮಾಸ್ಟರ್ ಚೆಕಪ್ ಅಂತ ಪರೀಕ್ಷಿಸಿಕೊಂಡು ಆರೋಗ್ಯ ಸರಿ ಇದೆ ಎಂದು ನಿಟ್ಟುಸಿರು ಬಿಡುವವರು ಕಮ್ಮಿ ಸಂಖ್ಯೆಯಾದರೂ ಇದ್ದಾರೆ. ಆದರೆ ಜ್ಯೋತಿಷಿಯ ಬಳಿ ಮುಂದೂ ಸರಿಯಾಗಿಯೇ ಇರಬಹುದೆ ಎಲ್ಲವೂ ಎಂದು ಯೋಚಿಸಿ ತಿಳಿಯಲು, ಜಾತಕ ಪರೀಕ್ಷಿಸಲು ಹೋಗುವವರು ಕಡಿಮೆಯೇ. ಇಲ್ಲಾ ಯಾರೂ ಎಂಬುದೇ ಸತ್ಯ. ಯಾರೂ ಹೋಗಲಾರರು. ಫಕ್ಕನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟವಾದಾಗ, ಓದಿದ ನಂತರವೂ ಕೆಲಸ ಸಿಗುವುದು ಕಷ್ಟವಾದಾಗ, ಕೆಲಸ ಸಿಕ್ಕಿದರೂ ಮನಃ ಸಂತೃಪ್ತಿ ಇರದಿರುವಾಗ, ಹಿಡಿದ ಕೆಲಸದಲ್ಲಿ ಕೈ ಹತ್ತದಿದ್ದಾಗ, ದುಡಿದರೂ ಹಣ ನಿಲ್ಲದೇ ಪರದಾಟವಾದಾಗ ಜ್ಯೋತಿಷಿಯ ಬಳಿ ಗಾಬರಿಬಿದ್ದು ಬರುತ್ತಾರೆ. ಈ ಸಂದರ್ಭ ಉಪಯೋಗಿಸಿಕೊಂಡು ಪರಿಹಾರದ ಮಾರ್ಗ ಎಂದು ಶೋಷಣೆಯೂ ಆದೀತು. ಒಬ್ಬ ಗುರು ಸ್ವರೂಪಿ ಜ್ಯೋತಿಷಿ ದಾರಿ ತಪ್ಪಿಸಲಾರ. ನಂಬಿಕೆ ಇಟ್ಟು ಬಂದವರನ್ನು ಸೂಕ್ತ ದಾರಿಗೆ ಮುಮ್ಮುಖವಾಗಿಸುತ್ತಾನೆ.
ಶ್ರೀ ವಿಷ್ಣುಸಹಸ್ರ ನಾಮಾವಳಿ ಪಠಣ ತೊಂದರೆ ಪರಿಹರಿಸುವುದೇ?ವಿಷ್ಣುವಿನ ಬಗೆಗಿನ, ಶಿವನ ಬಗೆಗಿನ, ಶ್ರೀ ಲಲಿತಾಂಬಿಕಾ ಬಗೆಗಿನ, ಗಣಪತಿ, ಮಾರುತಿ, ಮಂಗಳ ಕಾರಕಿ ಶಾರದಾ ಪ್ರಯುಕ್ತವಾದ ಶ್ರೀ ವರಲಕ್ಷ್ಮೀ ಭೃಗು ಕನ್ಯೆಯ, ದತ್ತಾತ್ರೇಯ ಆರಾಧನಾ ಶಕ್ತಿ ಮಂತ್ರಗಳ ಪ್ರಭಾವಳಿ ವಿಶೇಷ ಬಹಳಷ್ಟು ಅವಘಡಗಳನ್ನು, ಅನಿಷ್ಟ, ದಾರುಣ ಸ್ಥಿತಿ, ದರಿದ್ರಾವಸ್ಥೆಗಳನ್ನು ತಪ್ಪಿಸಿ ಸಕಾರಾತ್ಮಕ ದಾರಿಗೆ ನಮ್ಮನ್ನು ತಂದು ನಿಲ್ಲಿಸುವ ಚೈತನ್ಯ ಹೊಂದಿದಂಥದ್ದು. ಒಂದೇ ದೇವರ ಸಹಸ್ರನಾಮಾವಳಿಗಳು ನಮ್ಮ ಜೈವಿಕ ರಾಸಾಯನ ವ್ಯವಸ್ಥೆಯನ್ನು ಪುಷ್ಟಿಗೊಳಿಸುತ್ತದೆ. ದೇಹ ಧರ್ಮದ ಕೊರತೆಗಳನ್ನು ನಿವಾರಿಸಿ ದೇಹದ ಕಾಂತಿ ಹಾಗೂ ವರ್ಚಸ್ಸನ್ನು ಸಂವರ್ಧನಗೊಳಿಸುತ್ತದೆ. ಹತಾಶ ಮನೋಭಾವದಿಂದ ದೂರ ಮಾಡಿ ಲವಲವಿಕೆಯನ್ನು ಚಿಗುರಿಸುತ್ತದೆ. ಮೂಕನನ್ನು ಮಾತನಾಡುವಂತೆ ಪವಾಡ ಜರುಗಿಸುತ್ತದೆ. ಕೀಳರಿಮೆಯನ್ನು ತೊಡೆದು ಹಾಕಿ, ಸಮಾಧಾನದಿಂದ ಜನರೊಡನೆ ಬೆರೆತು ಅನ್ಯರ ಗಮನ ಸೆಳೆಯುವ ಪರಿವರ್ತನೆಗೆ ಶಕ್ತಿ ಒದಗಿಸುತ್ತದೆ. ಆಯುಷ್ಯ ವೃದ್ಧಿಗಾಗಿನ ತೇಜಸ್ಸನ್ನು ಒದಗಿಸುತ್ತವೆ. ಹಲವರಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಧೈರ್ಯ ಬರುವುದಿಲ್ಲ. ಬಂದರೂ ಸುಸಂಬದ್ಧವಾಗಿ ಮಾತನಾಡಲಾರರು. ವಿಷ್ಣು ಸಹಸ್ರನಾಮಾವಳಿ ಪಠಣದಿಂದ ಅಚ್ಚುಕಟ್ಟಾಗಿ ನಿಮ್ಮ ಮನಸ್ಸಿನ ಇಂಗಿತವನ್ನ, ಅನ್ಯರು ನಿಮ್ಮನ್ನು ಆದರಿಸಬಹುದಾದ ರೀತಿಯ ಅಕ್ಕರೆಯ, ಗಟ್ಟಿಯಾದ ವಾದ ಮಂಡನೆಯನ್ನು ಮಾಡಬಲ್ಲರು. ಸ್ತವ ಪ್ರಿಯಾಯ ನಮಃ ಎಂಬ ಒಂದೇ ನಾಮವನ್ನು ಲಕ್ಷಗಟ್ಟಲೆ ಸಲ ಧ್ಯಾನಿಸಿ ಮಾತಿನ ಜಾಣ್ಮೆಯನ್ನು ಪಡೆದು ನ್ಯಾಯಾಲಯದಲ್ಲಿ ಪ್ರಕಾಂಡ ವಾಗ್ಮಿಗಳಾಗಿ ವಾದಿಸಿ ಪ್ರಸಿದ್ಧಿ ಪಡೆದವರಿದ್ದಾರೆ. ವ್ಯಾಪ್ತಾಯ ನಮಃ ಎಂಬುದನ್ನೇ ಲಕ್ಷಗಟ್ಟಲೆ ಬಾರಿ ಪಠಿಸಿ, ಶಕ್ತಿ ಸಂಚಯನ ಗೊಳಿಸಿಕೊಂಡು ಅನಂತ ವ್ಯಾಪ್ತಿಯ ವರ್ಚಸ್ಸು, ಸಿದ್ಧಿ, ಅಧಿಕಾರ ಪಡೆದುಕೊಂಡವರಿದ್ದಾರೆ.
ಜಾತಕದಲ್ಲಿ ಸೂರ್ಯ, ಗುರು, ಬುಧ, ರಾಹು ಗ್ರಹಗಳ ಸಿದ್ಧಿ ಜೋರಾಗಿ ದಕ್ಕಿದೆ ಎಂದಾಗ, ಇಲ್ಲ ಈ ಗ್ರಹಗಳಿಂದ ದೋಷವಿದೆ ಎಂದಾದರೆ ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣ ಲಾಭದಾಯಕ. “ಜಗತøಭುಂ ದೇವ ದೇವಮನಂತಂ ಪುರುಷೋತ್ತಮ್, ಸ್ತುವನ್ನಾಮ ಸಹಸ್ರೇಣ ಪುರುಷಃ ಸತತೋತಿ§ತಃ- ಎಂಬ ಇಷ್ಟೇ ಸಾಲಿನ ಪಠಣ ಒಳಗಿನ ಹೊರಗಿನ ಶತ್ರುಗಳನ್ನು ನಿವಾರಿಸಿ ತೀವ್ರತರವಾದ ಯಶಸ್ಸನ್ನು ಬದುಕಿನಲ್ಲಿ ಸಂಪಾದಿಸಿಕೊಂಡು ಅನೇಕರಿದ್ದಾರೆ. ಈಗ ಅವರ ಹೆಸರಿನ ಪ್ರಸ್ತಾಪಬೇಡ. ದಕ್ಷಿಣ ಕನ್ನಡದ ರಾಜಕಾರಣಿ ಇವರು. ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣದಿಂದ ತಮ್ಮ ಪಕ್ಷದ ದೊಡ್ಡ ಯಶಸ್ಸು ಜಿಲ್ಲೆಯಲ್ಲಿ ಸಿಗಲು ಕಾರಣರಾಗಿ ಪ್ರಾಮಾಣಿಕರಾಗಿ, ದೊಡ್ಡ ನಾಯಕರಾಗಿ ಬೆಳೆದರು. ಇವರ ಬಗೆಗೆ ಜನರು (ಇವರ ಜಿಲ್ಲೆಯಲ್ಲಿ ಮಾತ್ರವಲ್ಲ) ದೇಶ ವ್ಯಾಪಿ ಸಾದರ ಪೂರ್ವಕವಾದ ಪ್ರಶಂಸೆಯ ಮಾತುಗಳನ್ನು ಆಡುತ್ತಾರೆ. ಕಿಂಚಿತ್ತೂ ಸ್ವಾರ್ಥವಿರದೆ ಜನರ ಬಗೆಗೆ ದುಡಿದರು. ಯಾವುದನ್ನೂ ಅತಿಯಾಗಿ ಯೋಚಿಸದೆ ಅಜಾತ ಶತ್ರುತ್ವವನ್ನ ನಿರ್ಮಿಸಿಕೊಂಡರು. ಜ್ಯೋತಿಷಿಯನ್ನು ಸಂಧಿಸಿದೆಯೇ ವಿಷ್ಣು ಸಹಸ್ರನಾಮ ಪಠಣದ ಮೂಲಕ ಕಷ್ಟಗಳ ನಿವಾರಣೆ ಮಾಡಿಕೊಳ್ಳುವ ಬಗೆಗೆ ಇನ್ನಿಷ್ಟನ್ನು ಮುಂದಿನ ವಾರ ಚರ್ಚಿಸೋಣ. ಅನಂತಶಾಸ್ತ್ರಿ