Advertisement

Desi Swara: ಭಕ್ತರ ಹೃದಯದಲ್ಲಿ ಶಾಶ್ವತ ವಾಸಿ ವಿಷ್ಣು

02:35 PM May 29, 2024 | Team Udayavani |

ಒಂದು ಸಾರಿ ನಾರದರು ವಿಷ್ಣುವನ್ನು ಪ್ರಶ್ನಿಸಿದರಂತೆ “ನಿಮ್ಮ ವಿಳಾಸ ಏನು, ಎಲ್ಲಿರುತ್ತೀರಾ’? ಅದಕ್ಕೆ ತಾಳ್ಮೆಯಿಂದ ವಿಷ್ಣು ಕೊಟ್ಟ ಉತ್ತರ “ತಾತ್ಕಾಲಿಕ ವಿಳಾಸ ವೈಕುಂಠ ಆದರೆ ನನ್ನ ಶಾಶ್ವತ ವಿಳಾಸ ಭಕ್ತರ ಹೃದಯ’ ಹೌದು ಅವನು ನಮ್ಮ ಹೃದಯ ನಿವಾಸಿ, ಭಕ್ತ ಪ್ರೇಮಿ. ಅದಕ್ಕೆ ಭಕ್ತಿಗೆ ಪ್ರಾಶಸ್ತ್ಯ. ನಮ್ಮ ಜೀವನದ ನಾಲ್ಕು ಗುರಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧಾರ್ಮಿಕ ಜೀವನ ನಡೆಸಿ, ಧರ್ಮದಿಂದ ಹಣ ಗಳಿಸಿ, ಸತ್ಕಾಮ ಅಥವಾ ಸತ್ಕರ್ಮಗಳನ್ನು ಮಾಡಿ ದೈವಿಕ ಜೀವನ ನಡೆಸಿದರೆ ಮೋಕ್ಷ ಪಡೆಯಲು ಸಹಾಯ ಆಗುತ್ತದೆ. ಮೋಕ್ಷ ಎಂದರೇನು? ಸಂಸಾರದ ಚಕ್ರ ಹುಟ್ಟು ಸಾವಿನಿಂದ ಹೊರಬಂದು ದೇವರಲ್ಲಿ ಲೀನನಾಗುವುದು.

Advertisement

ಹಿಂದಿನ ಮೂರು ಯುಗಗಳಲ್ಲಿ ಕೃತ , ತ್ರೇತಾ, ದ್ವಾಪರ ಯುಗಗಳಲ್ಲಿ ಮೋಕ್ಷ ಪಡೆಯಲು ಕಷ್ಟವಾಗಿತ್ತು. ಆದರೆ ಕಲಿಯುಗದಲ್ಲಿ ನಾಮ ಸ್ಮರಣೆ ಇಂದಲೇ ಅಂದರೆ ದೇವರನ್ನು ಸದಾಕಾಲ ಸ್ಮರಿಸಿದರೆ ಮೋಕ್ಷ ಸುಲಭ ಕೃಷ್ಣ ಭಗವದ್ಗೀತೆಯಲ್ಲಿ ಇದೆ ಸಲಹೆ ಅರ್ಜುನನಿಗೆ ಹೇಳುವುದು. ಇದೇ ನಿಟ್ಟಿನಲ್ಲಿ ಕೃಷ್ಣ ಮೋಕ್ಷದೆಡೆಗೆ ಮೂರು ಮಾರ್ಗಗಳನ್ನು ಸೂಚಿಸಿದ್ದಾನೆ ಜ್ಞಾನ, ಕರ್ಮ ಮತ್ತು ಭಕ್ತಿ ಮಾರ್ಗಗಳು. ಜ್ಞಾನ ಮಾರ್ಗ ಸುಲಭಸಾಧ್ಯವಲ್ಲ. ಸತ್ಕರ್ಮಗಳನ್ನು ಮಾಡಿ ಕರ್ಮದ ಫ‌ಲಗಳನ್ನು ಅಪೇಕ್ಷಿಸದೆ ಭಕ್ತಿ ಇಂದ ಭಗವಂತನ್ನು ಒಲಿಸಲು ಸಾಧ್ಯ. ಭಕ್ತಿ ಇರುವ ಭಕ್ತರ ಹೃದಯ ನಿವಾಸಿ ಶ್ರೀ ಕೃಷ್ಣ ಪರಮಾತ್ಮ.

ನಮ್ಮ ಪುರಾಣಗಳಲ್ಲಿ ಬರುವ ಅನೇಕ ಕಥೆಗಳು ಇದಕ್ಕೆ ಉದಾಹರಣೆ. ಸುಧಾಮನ ಭಕ್ತಿಗೆ ಮೆಚ್ಚಿ ಅವನ ಬಡತನ ನೀಗಿಸಿದ ಕೃಷ್ಣ, ಶಬರಿಯ ಭಕ್ತಿ ರಾಮನಿಗೆ ಪ್ರಿಯವಾಯಿತು, ಪಾಂಡವರ ಧರ್ಮ ಮೆಚ್ಚಿ ಕೃಷ್ಣ ಅವರನ್ನು ಕಾಪಾಡಿದ, ಹೀಗೆಯೇ ಕಲಿಯುಗದಲ್ಲಿ ಕೂಡ ಮೀರಾ ಭಜನೆ ಮಾಡಿ ಕೃಷ್ಣನಿಗೆ ಒಲಿದಳು, ಅಕ್ಕಮಹಾದೇವಿ ವಚನಾಮೃತಸಾರಿ ಮಲ್ಲಿಕಾರ್ಜುನನಿಗೆ ಒಲಿದಳು.

ವಿಷ್ಣು ದುಷ್ಟರ ನಿರ್ನಾಮಕ್ಕೆ ಶಿಷ್ಟ ರಕ್ಷಣೆಗೆ ದಶಾವತಾರ ತಾಳಿದನು. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ. ಹತ್ತನೇ ಅವತಾರ ಕಲ್ಕಿ ಬರಲಿದೆ ಎಂದು ಶಾಸ್ತ್ರಗಳು ಸಾರಿವೆ.
ಭಕ್ತ ಪ್ರಹ್ಲಾದನಿಗೂ ನರಸಿಂಹಾವತಾರಕ್ಕೂ ಏನು ಸಂಬಂಧ? ಇದನ್ನು ತಿಳಿಯಲು ಪ್ರಹ್ಲಾದನ ಬಗ್ಗೆ ತಿಳಿಯೋಣ.

ಪ್ರಹ್ಲಾದನ ಪಿತೃ ಹಿರಣ್ಯ ಕಶಿಪು ರಾಕ್ಷಸ ವಂಶದಲ್ಲಿ ಜನಿಸಿದ ಮಹಾರಾಜ.ಯತಿಗಳ ಶಾಪದಿಂದ ಹರಿದ್ವೇಷಿ ಆಗಿ ಸಕಲ ಸಂಪತ್ತಿದ್ದರೂ ಹರಿ ಸ್ಮರಣೆ ಸಹಿಸುತ್ತಿರಲಿಲ್ಲ. ಇವನ ಮಗನೆ ಪ್ರಹ್ಲಾದ ದೈವಭಕ್ತ “ಹರಿಸ್ಮರಣೆ ಮಾಡೋ ನಿರಂತರ’ ಅಂತ ಸದಾಕಾಲ ಹರಿಯ ಜಪ ಮಾಡುತ್ತಿದ್ದನು. ತಂದೆ ಹಿರಣ್ಯಾಕ್ಷನಿಗೆ ಹರಿಯ ಶಬ್ದ ಕೇಳಿದಾಗ ಬೆಂಕಿಯಂತೆ ಮೈಯೆಲ್ಲ ಉರಿಯುತ್ತಿತ್ತು . “ಪ್ರಹ್ಲಾದ ಸಾಕು ನಿಲ್ಲಿಸು ಅವನ ಸ್ಮರಣೆ’ ಎಂದು ಅರಚುತ್ತಿದ್ದನು. ಪುಟ್ಟ ಮುಗ್ಧ ಬಾಲಕ “ಅದು ಆಗದು, ಓಂ ನಾರಾಯಣಾಯ’ ಎಂದು ಪಠಿಸುತ್ತಲೇ ಇದ್ದ . ತಂದೆಯ ತಾಳ್ಮೆಯ ಅಣೆಕಟ್ಟು ಒಡೆದು ಕೋಪದ ನದಿ ಜ್ವಾಲಾಮುಖೀಯಂತೆ ಹರಿದಾಗ ಕಾವಲುಗಾರರಿಗಿತ್ತ ಅಪ್ಪಣೆ “ಈ ಬಾಲಕನನ್ನು, ಮುಗಿಸಿಬಿಡಿ’. ಇತ್ತ ಕಾವಲುಗಾರರು ಪ್ರಹ್ಲಾದನನ್ನು ಕೊಲ್ಲುವ ಕಾರ್ಯದಲ್ಲಿ ವಿಫ‌ಲರಾದರು ಹರಿ ಬಾಲಕನನ್ನು ರಕ್ಷಿಸಿದ ಕಾರಣ. ಮತ್ತೆ ಹರಿಹರಿ ಎಂದು ಎದುರು ನಿಂತ ಮಗನನ್ನು ನೋಡಿ ರೊಚ್ಚಿಗೆದ್ದು “ಎಲ್ಲಿಹನು, ಈ ಕಂಬದಲ್ಲಿರುವನಾ? ತೋರಿಸು ಆ ನಿನ್ನ ಹರಿಯ?’

Advertisement

ನಡುಗುತ್ತ ಬಾಲಕ ಕಣ್ಮುಚ್ಚಿ ಹರಿ ಅಂದಾಗ ಒಡೆಯಿತು ಕಂಬ, ಹೊರಬಂದ ಹರಿ ನರಸಿಂಹ ಅವತಾರದಲ್ಲಿ. ಮನುಷ್ಯ ಶರೀರ ಸಿಂಹದ ತಲೆ ! ಹೊಸ್ತಿಲ ಮೇಲೆ ಉಗುರುಗಳಿಂದ ಸಂಹರಿಸಿದ. ಯಾರಿಂದಲೂ ಸಾವು ಕೂಡದು, ಯಾವ ಜಾಗದಲ್ಲೂ, ಯಾವ ಶಸ್ತ್ರಗಳಿಂದಲೂ ಸಾವು ಬೇಡ ಅಂದು ತಪಸ್ಸು ಮಾಡಿ ವರ ಪಡೆದಿದ್ದ ಹಿರಣ್ಯ ಕಷಿಪು.

ಮರೆತಿದ್ದ ಉಗುರು, ಹೊಸ್ತಿಲು, ಸಂಧ್ಯಾ ಕಾಲ ತಿಳಿದ ಹರಿ ರಕ್ಕಸನ ಕೊಂದು ಪ್ರಹ್ಲಾದನನ್ನು ಮು¨ªಾಡಿ ಇತ್ತ ಮೋಕ್ಷ ಪಿತನಿಗೆ.
ಪುಟ್ಟ ಬಾಲಕನ ಅಮೂಲ್ಯ ಸಂದೇಶ ಜಗತ್ತಿಗೆ: ಹರಿಸ್ಮರಣೆ ಮಾಡಿ ನಿರಂತರ ಇದು ಇಹಲೋಕ ಪರಲೋಕಕ್ಕೂ ಮುಖ್ಯ. ಶ್ರದ್ಧೆ, ಭಕ್ತಿ ಎಂಬ ಎರಡು ಅಂಬುಗಳಿಂದ ಸಂಸಾರ ನೌಕೆ ಸಾಗಲಿ ಮೋಕ್ಷದ ತೀರ ಸೇರಲಿ.

*ಜಯಮೂರ್ತಿ, ಇಟಲಿ

Advertisement

Udayavani is now on Telegram. Click here to join our channel and stay updated with the latest news.

Next