Advertisement

ಸಂಭ್ರಮದಿಂದ ನಡೆದ ವಿಷ್ಣು ದೀಪೋತ್ಸವ

05:24 PM Nov 21, 2021 | Team Udayavani |

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ವಿಷ್ಣು ದೀಪೋತ್ಸವ ಸಂಭ್ರಮದಿಂದ ನೆರವೇರಿತು. ದೇವಾಲಯದ ಪ್ರತಿ ಸನ್ನಿಧಿ ಯ ಮುಂಭಾಗ ದಲ್ಲೂ ಹಣತೆಗಳನ್ನು ಸಾಲಾಗಿ ಹಚ್ಚಿ ಕೃತಿಕೋತ್ಸವ ನೆರವೇರಿಸಲಾಯಿತು.

Advertisement

ಕೃತ್ತಿಕೋತ್ಸವದ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಮೂಲ ಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿಗೆ ವೇದ ಮಂತ್ರಗಳೊಂದಿಗೆ ಕುಂಬಾರತಿ ನೆರವೇರಿಸಲಾ ಯಿತು. ನಂತರ ಚೆಲುವ ನಾರಾ ಯಣಸ್ವಾಮಿ ಉತ್ಸ ವ ವನ್ನು ದೇವಾಲಯದ ಒಳಪ್ರಾಕಾರದಲ್ಲಿ ನೆರ ವೇರಿಸಿ ದೇವಾಲಯದ ರಾಜಗೋಪುರದ ಮುಂಭಾಗ ಕರಗು ಸುಡಲಾಯಿತು.

ನಂತರ ಕುಂಬಾರತಿ ಮಾಡಿ ಗರುಡಗಂಬದ ಮೇಲೆ ಇಡಲಾಯಿತು. ಅಂತಿಮವಾಗಿ ಸ್ವಾಮಿಗೆ ಮಂಟಪ ವಾಹನೋತ್ಸವ ನೆರವೇರುವುದರೊಂದಿಗೆ ವಿಷ್ಣು ದೀಪೋತ್ಸವ ಮುಕ್ತಾಯವಾಯಿತು. ಪರಿಚಾರಕ ಪಾರ್ಥಸಾರಥಿ ಕುಂಭಾರತಿಯನ್ನು ಹೊತ್ತು ಕೈಂಕರ್ಯ ನೆರವೇರಿಸಿದರು. ಕರುಗು ಸುಡುವುದಕ್ಕೂ ಮುನ್ನ ಬಂಡೀಕಾರರಿಗೆ ಮಾಲೆ ಮರ್ಯಾದೆ ನೆರವೇರಿಸಲಾಯಿತು. ನವೆಂಬರ್‌ 20ರಿಂದ 2022ರ ಜನವರಿಯಲ್ಲಿ ಆರಂಭವಾಗುವ ಕೊಠಾರೋತ್ಸವದವರೆಗೆ ದೇವಾಲ ಯದಲ್ಲಿ ಯಾವುದೇ ಉತ್ಸವ ಇರುವುದಿಲ್ಲ.

ತಿರುಮಂಗೈ ಆಳ್ವಾರರ ತಿರುನಕ್ಷತ್ರ: ಕಳ್ಳರ ಗುರುವಾಗಿ ಮಹಾವಿಷ್ಣುವಿನ ಕೃಪೆಯಿಂದ ಆಳ್ವಾರ್‌ ಸ್ಥಾನಕ್ಕೇರಿದ ತಿರುಮಂಗೈ ಆಳ್ವಾರ್‌ ತಿರುನಕ್ಷತ್ರ ಮಹೋತ್ಸವ ಶುಕ್ರವಾರ ನೆರವೇರಿತು. ಬೆಳಗ್ಗೆ ಆಳ್ವಾರರಿಗೆ ಮಂಟಪ ವಾಹನೋತ್ಸವ ನಂತರ ಅಭಿಷೇಕ ನೆರವೇರಿತು. ಸಂಜೆ ಚೆಲುವನಾರಾಯಣ ಸ್ವಾಮಿಯೊಂದಿಗೆ ಉತ್ಸವ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next