Advertisement

ವೀಸಾ ಬೇಕೆಂದರೆ ವಿವರ ಕಡ್ಡಾಯ!

03:45 AM May 07, 2017 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದ್ದೀರಾ? ಎಲ್ಲ ದಾಖಲೆಗಳ ಜೊತೆಗೆ ನಿಮ್ಮ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ವಿವರವನ್ನೂ ರೆಡಿಯಾಗಿಟ್ಟುಕೊಳ್ಳಿ.

Advertisement

ಏಕೆಂದರೆ, ಈಗಾಗಲೇ ಎಚ್‌1ಬಿ ವೀಸಾ ಪ್ರಕ್ರಿಯೆಯನ್ನು ಬಿಗಿಗೊಳಿಸಿರುವ ಅಮೆರಿಕದ ಟ್ರಂಪ್‌ ಆಡಳಿತವು, ವೀಸಾಗೆ ಅರ್ಜಿ ಸಲ್ಲಿಸಿದವರ ಸಾಮಾಜಿಕ ಜಾಲತಾಣಗಳ ವಿವರಗಳನ್ನು ಜಾಲಾಡಲು ನಿರ್ಧರಿಸಿದೆ. ಭಯೋತ್ಪಾದಕ ನಂಟು, ಉಗ್ರ ಚಟುವಟಿಕೆ ಅಥವಾ ರಾಷ್ಟ್ರೀಯ ಭದ್ರತೆಗೆ ಅಪಾಯವಿರುವ ವ್ಯಕ್ತಿಗಳನ್ನು ದೇಶದಿಂದ ದೂರವಿಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆಯಂತೆ.

ಯುಎಸ್‌ ವೀಸಾ ಅರ್ಜಿದಾರರಿಗೆ ಎಂತೆಂಥ ಪ್ರಶ್ನೆಗಳನ್ನು ಕೇಳಬೇಕು ಎಂಬ ಕುರಿತ ಅಧಿಸೂಚನೆಯನ್ನು ಗುರುವಾರ ಅಮೆರಿಕ ವಿದೇಶಾಂಗ ಇಲಾಖೆ ಹೊರಡಿಸಿದೆ. ಈ ನಿಯಮವು ವಾರ್ಷಿಕ 65 ಸಾವಿರ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ ಎಂದೂ ಇಲಾಖೆ ತಿಳಿಸಿದೆ.

ಏನೇನು ಕೇಳುತ್ತಾರೆ?
ಅರ್ಜಿದಾರರು ತಮ್ಮ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ದಾಖಲೆಗಳನ್ನು ನೀಡಬೇಕು. ನೀವು ಯಾವತ್ತಾದರೂ ಉಗ್ರರ ಪ್ರಾಬಲ್ಯವಿರುವ ದೇಶಗಳಿಗೆ ಅಥವಾ ಪ್ರದೇಶಗಳಿಗೆ ತೆರಳಿದ್ದೀರಾ ಎಂಬ ಬಗ್ಗೆ ಈ ಮೂಲಕ ಪರಿಶೀಲಿಸಲಾಗುತ್ತದೆ. ಹೌದೆಂದಾದರೆ, ನಿಮಗೆ ವೀಸಾ ಸಿಗುವ ಸಾಧ್ಯತೆ ಕಡಿಮೆ. ಇದಲ್ಲದೆ, ನಿಮ್ಮ ಒಡಹುಟ್ಟಿದವರ ಜನನ ದಿನಾಂಕ, ಅವರ ಹೆಸರುಗಳು, ನಿಮ್ಮ ಕುಟುಂಬದ ವಿವರ, ಹೊಸದಾಗಿ ಮಕ್ಕಳೇನಾದರೂ ಹುಟ್ಟಿದ್ದರೆ ಅವರ ಮಾಹಿತಿ, ಸಾಮಾಜಿಕ ಜಾಲತಾಣ ಮತ್ತು ಇತರೆ ಆನ್‌ಲೈನ್‌ ಪ್ಲಾಟ್‌ ಫಾರಂಗಳಲ್ಲಿನ ಚಟುವಟಿಕೆಗಳ ವಿವರವನ್ನು ಅರ್ಜಿದಾರರು ನೀಡಬೇಕು ಎಂದು ಅಧಿಸೂಚನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next