Advertisement

VISA Denied: ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ವೀಸಾ ನಿರಾಕರಿಸಿದ ಅಮೆರಿಕಾ

05:13 PM Aug 14, 2024 | Team Udayavani |

ಮೈಸೂರು:  ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್​ಗೆ (Arun Yogiraj)  ಅಮೆರಿಕಾ (USA)  ವೀಸಾ (Visa) ನಿರಾಕರಿಸಿದೆ.

Advertisement

ಅಮೆರಿಕಾದ ಕನ್ನಡ ಕೂಟಗಳು ಆಯೋಜಿಸುವ  ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು 20 ದಿನಗಳ ಪ್ರವಾಸಕ್ಕಾಗಿ ಅರುಣ್ ಯೋಗಿರಾಜ್ ಕುಟುಂಬ ಸಹಿತ ತೆರಳಲು ಯುಎಸ್‌ಎಗೆ  ತೆರಳಲು ಉತ್ಸುಕರಾಗಿದ್ದರು. ಅದಕ್ಕಾಗಿಯೇ ಜೂನ್​ನಲ್ಲಿ ವೀಸಾಗೆ ಅರ್ಜಿ  ಸಲ್ಲಿಸಿ ಅದಕ್ಕೆ ಬೇಕಾದ ದಾಖಲೆಗಳು, ಪೂರ್ವಾಪರ ಮಾಹಿತಿಗಳು ಹಾಗೂ ಅದಕ್ಕೆ ಬೇಕಾದ ನಿಬಂಧನೆಗಳ ಪೂರ್ಣಗೊಳಿಸಿದರು ಇದೀಗ ವೀಸಾ ನಿರಾಕರಣೆಯಾಗಿದೆ.

ಅಮೆರಿಕದ ಕನ್ನಡ ಕೂಟಗಳ ಸಂಘ, ವಿಶ್ವ ಕನ್ನಡ ಸಮ್ಮೇಳನ 2024 ಕಾರ್ಯಕ್ರಮವನ್ನು ವರ್ಜೀನಿಯಾದ ರಿಚ್ಮಂಡ್‌ನಲ್ಲಿ  ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಯೋಗಿರಾಜ್ ಮತ್ತು ಅವರ ಕುಟುಂಬಸ್ಥರಿಗೆ ಆಹ್ವಾನಿಸಿತ್ತು ಎನ್ನಲಾಗಿದೆ. ಸದ್ಯ ವೀಸಾ ಅರ್ಜಿಯ ತಿರಸ್ಕರಿಸಿರುವ ಅಮೆರಿಕ ರಾಯಭಾರ ಕಚೇರಿ ಇದುವರೆಗೆ ಯಾವುದೇ ಕಾರಣವನ್ನು ನೀಡಿಲ್ಲ.

ಎಲ್ಲ ದಾಖಲೆಗಳ ಸಲ್ಲಿಸಿದ್ದರು ವೀಸಾ ಸಿಕ್ಕಿಲ್ಲ: ಅರುಣ್‌
ಅಮೇರಿಕಾ ವೀಸಾ ನಿರಾಕರಣೆ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಅರುಣ್‌ ಯೋಗಿರಾಜ್‌ ” ನನ್ನ ವೀಸಾ ಯಾತಕ್ಕಾಗಿ ನಿರಾಕರಣೆಯಾಗಿದೆ ಎಂದು ಗೊತ್ತಿಲ್ಲ. ಅಮೆರಿಕಾ ವೀಸಾ ನೀಡುವ ಪ್ರಕ್ರಿಯೆಯಲ್ಲಿ ಹಲವು ನಿಯಮ, ನಿಬಂಧನೆಗಳು ಇರುತ್ತವೆ ಎಂದು ಗೊತ್ತಿತ್ತು ವೀಸಾ ಪ್ರಕ್ರಿಯೆಗೆ ನೀಡಬೇಕಾದ ಎಲ್ಲ ದಾಖಲೆಗಳ ಸಲ್ಲಿಸಿದ್ದು, ಆದಾಯ ತೆರಿಗೆ ಸಲ್ಲಿಕೆ, ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ, ಆಡಿಟ್‌ ವರದಿಗಳನ್ನು ಸಲ್ಲಿಸಿದ್ದೇನೆ.  ಈ ವರ್ಷ ವೀಸಾ ನಿರಾಕರಣೆಯಾದ್ದರಿಂದ ಮುಂದಿನ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ವೀಸಾ ನಿರಾಕರಣೆಗೆ ಹಲವು ನಿಯಮ, ನಿಬಂಧನೆಗಳು ಕಾರಣವಾಗಿರಬಹುದು ಎಂದು ಅರಿತಿದ್ದೇನೆ. ಅಲ್ಲಿನ ಕನ್ನಡಿಗರೊಂದಿಗೆ ಭೇಟಿಯಾಗಿ ಅವರೊಂದಿಗೆ ಬೆರೆಯುವ ಉತ್ಸಾಹದಲ್ಲಿದ್ದೆ. ನನ್ನ ಮಕ್ಕಳಿಗೂ ಯುಎಸ್‌ ನೋಡುವ ಉತ್ಸಾಹದಲ್ಲಿದ್ದರು. ಈಗ ಬೇರೆ ದೇಶಕ್ಕೆ ಕರೆದುಕೊಂಡು ಹೋಗಬೇಕು ಅಂದುಕೊಂಡಿದ್ದೇನೆ” ಎಂದು ಹೇಳಿದರು.

2008 ರಿಂದ, ಅವರು ವಿಗ್ರಹಗಳನ್ನು ಕೆತ್ತನೆ ಮಾಡಲು ಆರಂಭಿಸಿದ ಭಾರತದಾದ್ಯಂತ ಮನ್ನಣೆ ಪಡೆದರೆ ಬಳಿಕ  ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡುವ ಮೂಲಕ ದೇಶಾದ್ಯಂತ ಹಾಗೂ ಕರ್ನಾಟಕದ ಮನೆ ಮಾತಾದರು. ಅರುಣ್ ಯೋಗಿರಾಜ್​ ಅವರ ಪ್ರತಿಭೆ ಮತ್ತು ಕೊಡುಗೆಯ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next