Advertisement

ವರ್ಷದ ಮೊದಲೇ ವೀಸಾಗೆ ಅನುಮತಿ

11:13 PM Feb 24, 2023 | Team Udayavani |

ನವದೆಹಲಿ: ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಪಡೆಯಲು ಉದ್ದೇಶಿಸಿರುವ ಭಾರತೀಯ ವಿದ್ಯಾರ್ಥಿಗಳಿಗೆ ಈಗ ಸಮಾಧಾನದ ಸುದ್ದಿಯೊಂದು ಲಭಿಸಿದೆ. ಇನ್ನು ಮುಂದೆ ಅಮೆರಿಕದಲ್ಲಿ ಅವರ ಶಿಕ್ಷಣಾವಧಿ ಆರಂಭಕ್ಕೂ ಒಂದು ವರ್ಷ ಮೊದಲೇ ವೀಸಾ ಪಡೆದುಕೊಳ್ಳಬಹುದು. ಇದನ್ನು ಸ್ವತಃ ಅಮೆರಿಕ ಸರ್ಕಾರವೇ ಘೋಷಿಸಿದೆ.

Advertisement

ಇದಕ್ಕೂ ಮೊದಲು, ಗರಿಷ್ಠವೆಂದರೆ ಕೋರ್ಸ್‌ಗಳ ಆರಂಭಕ್ಕೂ 120 ದಿನ ಮುಂಚೆ ವೀಸಾ ಸಂದರ್ಶನದ ದಿನಾಂಕವನ್ನು ನಿಗದಿ ಮಾಡಿಕೊಳ್ಳಬಹುದಿತ್ತು. ಪ್ರಸ್ತುತ ಅಮೆರಿಕದ ವೀಸಾ ಪಡೆಯುವುದು ತೀರಾ ಕಷ್ಟಕರವಾಗಿದೆ. ವೀಸಾ ಸಂದರ್ಶನಕ್ಕಾಗಿ ಕಾಯುವ ಅವಧಿ 300 ದಿನಗಳವರೆಗೂ ಇದೆ. ಇದರಿಂದ ಭಾರತೀಯ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು.

ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಅಮೆರಿಕಕ್ಕೆ ಭಾರತೀಯ ವಿದ್ಯಾರ್ಥಿಗಳು ತೆರಳುವುದು ಖಚಿತವಾಗಿದೆ. ಇದನ್ನು ಮನಗಂಡಿರುವ ಅಮೆರಿಕ ಸರ್ಕಾರ ಎಫ್ ಮತ್ತು ಎಂ ವಿದ್ಯಾರ್ಥಿ ವೀಸಾಗಳಿಗೆ ಮುಂಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಒಂದು ವೇಳೆ ವೀಸಾ ಮುಂಚಿತವಾಗಿ ಸಿಕ್ಕಿದರೂ, ಅಮೆರಿಕಕ್ಕೆ ತಮ್ಮ ಕೋರ್ಸ್‌ ಆರಂಭಕ್ಕೂ ಒಂದು ತಿಂಗಳಿರುವಾಗ ಮಾತ್ರ ತೆರಳಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next