Advertisement

ವ್ಯಕ್ತಿಗಿಂತ ಸದ್ಗುಣಗಳ ಪೂಜೆ ಅವಶ್ಯ

01:25 PM Apr 10, 2017 | |

ಹುಬ್ಬಳ್ಳಿ: ಹಿಂಸೆ, ಮೂಢನಂಬಿಕೆ, ಅಶಾಂತಿಗೆ ಭಗವಾನ ಮಹಾವೀರರು ಎಂದಿಗೂ ಆಸ್ಪದ ನೀಡಿಲ್ಲ ಎಂದು ಜಂಗಲೇವಾಲ್‌ ಬಾಬಾ ಶ್ರೀ ಚಿನ್ಮಯಸಾಗರ ಮಹಾರಾಜರು ಹೇಳಿದರು. ತಾಲೂಕು ಆಡಳಿತದ ವತಿಯಿಂದ ಮಿನಿ ವಿಧಾನಸೌಧದಲ್ಲಿ ರವಿವಾರ ನಡೆದ ಮಹಾವೀರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ತೀರ್ಥಂಕರ ಮಹಾವೀರರು ಸದಾ ಅಹಿಂಸಾ ಪರಮೋಧರ್ಮ ಎಂದು ನಡೆದವರು. ಅಹಿಂಸಾ ಮಾರ್ಗದಿಂದಲೇ ಎಲ್ಲವನ್ನು ಸಾಧಿಸಬಹುದು ಎಂಬುದನ್ನು ತೋರಿಸಿದವರು ಮಹಾವೀರರು. ತಮ್ಮ ಜೀವಿತಾವಧಿಯಲ್ಲಿ ಎಂದು ಜಾತಿ-ಮತ-ಪಂಥ ಎಂದು ಭೇದಭಾವ ಮಾಡದೆ ಎಲ್ಲರು ಒಂದೇ ಎನ್ನುವಂತೆ ಮಾಡಿದವರು ಎಂದರು.  

ಸಮಾಜದಲ್ಲಿ ಸಾವಿರಾರು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಒಂದು ಹೊತ್ತಿನ ಊಟವಿಲ್ಲದೆ ಪರಿತಪಿಸುತ್ತಿದ್ದಾರೆ. ಅಂಥವರ ನೆರವಿಗಾಗಿ ನಾವೆಲ್ಲರೂ ಮುಂದಾಗಬೇಕು. ಆದಿವಾಸಿಗಳು, ದಲಿತರ ಅಭಿವೃದ್ಧಿಗೆ ಕೈ ಜೋಡಿಸಬೇಕು. ಹಿಂಸೆ, ದಬ್ಟಾಳಿಕೆ, ದೌರ್ಜನ್ಯ ಇವೆಲ್ಲವನ್ನು ತ್ಯಜಿಸುವ ಮೂಲಕ ಅಹಿಂಸಾ ಮಾರ್ಗದಿಂದ ಮುನ್ನೆಡೆದರೇ ಮಾತ್ರ ಈ ಸಮಾಜಕ್ಕೆ ಒಂದು ನೆಲೆ ಇದೆ.

ಅಹಿಂಸಾ ಮಾರ್ಗದಿಂದಲ್ಲೇ ಈ ದೇಶ ಸದೃಡವಾಗಲು ಸಾಧ್ಯ. ಭಗವಾನ ಮಹಾವೀರರ ತತ್ವ-ಸಿದ್ದಾಂತಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಒಂದಾಗಬೇಕು ಎಂದರು. ಸಮಾಜದಲ್ಲಿ ವ್ಯಕ್ತಿ ಪೂಜೆ ಮುಖ್ಯವಲ್ಲ. ಸದ್ಗುಣಗಳು ಪೂಜೆ, ಅಹಿಂಸಾ ಮಾರ್ಗದ ಪೂಜೆ ನಡೆಯಬೇಕು.

ಯುವ ಪೀಳಿಗೆಗೆ ದುಶ್ಚಟಗಳ ದಾಸರಾಗದಂತೆ ತಡೆಯುವ ಮೂಲಕ ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕು ಎಂದರು. ತಹಶೀಲ್ದಾರ ಶಶಿಧರ ಮಾಡ್ಯಾಳ ಮಾತನಾಡಿದರು. ಬಿ.ಎ. ಪಾಟೀಲ ಭಗವಾನ ಮಹಾವೀರ ಜಯಂತ್ಯುತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು. 

Advertisement

ಪ್ರೊ| ಪಿ.ಎಸ್‌. ಧರಣೇಪ್ಪನವರ, ಆದಪ್ಪನವರ, ಸಮಾಜದ ಅಧ್ಯಕ್ಷ ಶಾಂತಿನಾಥ ಹೋತಪೇಟೆ, ವಿಮಲ ತಾಳಿಕೋಟೆ, ಕಾಗೇನವರ, ರಾಜೇಂದ್ರ ಬೀಳಗಿ, ರಮೇಶ ಕೋಠಾರಿ, ಅಮೃತ ಜೈನ್‌, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌.ವೈ. ಹೊಸಮನಿ, ಅಪರ್‌ ತಹಶೀಲ್ದಾರ ನಾಯ್ಕ, ಶಿರಸ್ತೆದಾರ ಅಂಗಡಿ, ಮಠದ ಸೇರಿದಂತೆ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next