Advertisement

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

03:47 AM Sep 19, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆ ವರ್ಚುವಲ್‌ ಆಗಿ ಬುಧವಾರ ನಡೆಯಿತು. ಪ್ರಯೋಗಾಲಯ ಸಹಾಯಕರಿಗೆ ಭಡ್ತಿ ನೀಡುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.

Advertisement

ಪ್ರಯೋಗಾಲಯ ಸಹಾಯಕರಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುವ ಸಿಬಂದಿ ಪೈಕಿ ಶೇ. 30 ಮಂದಿಗೆ ಹಿರಿಯ ಪ್ರಯೋಗಾಲಯ ಸಹಾಯಕರಾಗಿ ಭಡ್ತಿ ನೀಡಲು ತೀರ್ಮಾನಿಸಲಾಯಿತು. ಇಬ್ಬರು ಛಾಯಾಗ್ರಾಹಕರ ಪೈಕಿ ಒಬ್ಬರಿಗೆ ಮುಖ್ಯ ಛಾಯಾಚಿತ್ರಗ್ರಾಹಕರಾಗಿ ಭಡ್ತಿ ನೀಡಲೂ ನಿರ್ಧರಿಸಲಾಯಿತು.

ಹೆಚ್ಚಿನ ಅವಧಿ ಸೇವೆ ಸಲ್ಲಿಸಿದವರನ್ನು ಭಡ್ತಿಗೆ ಪರಿಗಣಿಸುವುದು ಸೂಕ್ತವಲ್ಲವೇ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರಾಮೇಗೌಡ ಕೇಳಿದರು. ಪ್ರತಿಕ್ರಿಯಿ ಸಿದ ಕುಲಪತಿ ಪಿ.ಎಲ್‌. ಧರ್ಮ, “ಶೇ. 30ರಷ್ಟು ಭಡ್ತಿ ನೀಡಲು ಯಾವುದೇ ಅಡ್ಡಿಯಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ನಿಯಮಗಳಿಗೆ ತಿದ್ದುಪಡಿ ಮಾಡಲು ಸಿಂಡಿಕೇಟ್‌ ಸಭೆ ಒಪ್ಪಿಗೆ ನೀಡಿದೆ ಎಂದರು. ರಿಜಿಸ್ಟ್ರಾರ್‌ ದೇವೇಂದ್ರ ಪ್ರಸಾದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next