Advertisement

ಧೋನಿ ತಂಡದಿಂದ ಕೈಬಿಟ್ಟರು, 2008ರಲ್ಲೇ ವಿದಾಯ ಹೇಳಲು ಯೋಚಿಸಿದ್ದೆ: ಸೆಹವಾಗ್

04:13 PM Jun 02, 2022 | Team Udayavani |

ಮುಂಬೈ: ಟೀಂ ಇಂಡಿಯಾ ಕಂಡ ಸ್ಪೋಟಕ ಆರಂಭಿಕ ಆಟಗಾರ ವೀರೆಂದ್ರ ಸೆಹವಾಗ್ 2013ರವರೆಗೆ ಟೀಂ ಇಂಡಿಯಾದ ಭಾಗವಾಗಿದ್ದರು. 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೆಹವಾಗ್ 2008ರಲ್ಲೇ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಲು ಬಯಸಿದ್ದರಂತೆ. ಈ ವಿಚಾರವನ್ನು ಸ್ವತಃ ಸೆಹವಾಗ್ ಬಹಿರಂಗ ಪಡಿಸಿದ್ದಾರೆ.

Advertisement

ಕ್ರಿಕ್‌ಬಜ್ ಶೋ ‘ಮ್ಯಾಚ್ ಪಾರ್ಟಿ’ಯಲ್ಲಿ ಮಾತನಾಡಿದ ಅವರು, “ಎರಡು ರೀತಿಯ ಆಟಗಾರರಿದ್ದಾರೆ. ಒಂದು ರೀತಿಯ ಆಟಗಾರರು ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ವಿರಾಟ್ ಕೊಹ್ಲಿಯಂತೆ. ಅವರು ಟೀಕೆಗಳನ್ನು ಆಲಿಸುತ್ತಾರೆ ಮತ್ತು ನಂತರ ಪುನರಾಗಮನ ಮಾಡುತ್ತಾರೆ. ಟೀಕೆಗಳಿಗೆ ಪ್ರತಿಕ್ರಿಯಿಸದ ಎರಡನೇ ವಿಧದ ಆಟಗಾರರಿದ್ದಾರೆ. ಯಾಕೆಂದರೆ ಅವರು ಏನು ಮಾಡಬಲ್ಲರು ಎಂದು ಅವರಿಗೆ ತಿಳಿದಿದೆ. ನಾನು ಅಂತಹ ಆಟಗಾರನಾಗಿದ್ದೆ, ಯಾರು ನನ್ನನ್ನು ಟೀಕಿಸುತ್ತಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. 2008 ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿದ್ದಾಗ ನಿವೃತ್ತಿಯ ಪ್ರಶ್ನೆ ನಿವೃತ್ತಿಯ ನನ್ನ ಮನಸ್ಸಿಗೆ ಬಂದಿತು. ನಾನು ಟೆಸ್ಟ್‌ನಲ್ಲಿ ಕಮ್ ಬ್ಯಾಕ್ ಮಾಡಿದ್ದೆ. 150 ರನ್ ಗಳಿಸಿದ್ದೆ. ಆದರೆ ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಧೋನಿ ನನ್ನನ್ನು ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಟ್ಟರು. ಈ ವೇಳೆ ನಾನು ಏಕದಿನ ಕ್ರಿಕೆಟ್ ತ್ಯಜಿಸುವ ಆಲೋಚನೆ ಮಾಡಿದ್ದೆ. ” ಎಂದು ಹೇಳಿದರು.

ಇದನ್ನೂ ಓದಿ:ಯು-19 ವಿಶ್ವ ಕಪ್‌ ಕ್ರಿಕೆಟ್‌ಗೆ ಯುವ ಆಟಗಾರರ ತಯಾರಿ ಅಗತ್ಯ

“ಸಚಿನ್ ತೆಂಡೂಲ್ಕರ್ ಆ ಸಮಯದಲ್ಲಿ ನನ್ನನ್ನು ತಡೆದರು. ‘ಇದು ನಿಮ್ಮ ಜೀವನದ ಕೆಟ್ಟ ಹಂತವಾಗಿದೆ, ಈ ಪ್ರವಾಸದ ನಂತರ ಮನೆಗೆ ಹಿಂತಿರುಗಿ, ಚೆನ್ನಾಗಿ ಯೋಚಿಸಿ ಮತ್ತು ನಂತರ ಏನು ಮಾಡಬೇಕೆಂದು ನಿರ್ಧರಿಸಿ’ ಎಂದು ಹೇಳಿದರು. ಅದೃಷ್ಟವಶಾತ್, ನಾನು ನಿವೃತ್ತಿ ಘೋಷಿಸಲಿಲ್ಲ. ನಾವು ಭಾರತಕ್ಕೆ ಮರಳಿದ ಬಳಿಕ ಆಯ್ಕೆ ಸಮಿತಿ ಮುಖ್ಯಸ್ಥ ಕೆ ಶ್ರೀಕಾಂತ್ ಅವರು ‘ಏನು ಮಾಡಬೇಕೆಂದು’ ನನ್ನನ್ನು ಕೇಳಿದರು. ನಾನು ಉತ್ತಮ ಫಾರ್ಮ್‌ನಲ್ಲಿದ್ದರೂ ಮೂರು-ನಾಲ್ಕು ಪಂದ್ಯಗಳಿಗೆ ನನ್ನನ್ನು ಕೈಬಿಡಲಾಗಿದೆ. ನೀವು ನನ್ನನ್ನು ಎಲ್ಲಾ ಪಂದ್ಯಗಳಲ್ಲಿ ಆಯ್ಕೆ ಮಾಡುತ್ತೀರಿ ಎಂದು ನನಗೆ ಭರವಸೆ ನೀಡಿದರೆ ನೀವು ನನ್ನನ್ನು ತಂಡಕ್ಕೆ ಆಯ್ಕೆ ಮಾಡಿ, ಇಲ್ಲದಿದ್ದರೆ ಬೇಡ’ ಎಂದೆ. ನಂತರ ಶ್ರೀಕಾಂತ್ 2008 ರ ಏಷ್ಯಾ ಕಪ್ ಸಮಯದಲ್ಲಿ ಎಂ.ಎಸ್. ಧೋನಿ ಅವರೊಂದಿಗೆ ಮಾತನಾಡಿದರು. ನಾನು ಎಲ್ಲಾ ಪಂದ್ಯಗಳಲ್ಲಿ ಆಡುವ ಅವಕಾಶ ನೀಡುವ ಬಗ್ಗೆ ಧೋನಿ ಹೇಳಿದರು. ನಂತರ ನಾನು ಉತ್ತಮ ಕ್ರಿಕೆಟ್ ಆಡಿದ್ದೇನೆ” ಎಂದು ಸೆಹವಾಗ್ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next